ತಾಯ್ತನ

ವಿಷ ಸಿಂಪಡಿಸಿ ಶುಚಿಗೊಳಿಸುವಾಗ ಕಂಡ ನೋಟಕ್ಕೆ ಹೃದಯ ಮಿಡಿಯಿತು, ಕೈ ತನ್ನ ಕೆಲಸ ಬಿಟ್ಟಿತು. ಹೆಣ್ಣು ಜಿರಳೆ ಮೊಟ್ಟೆ ಇಡುತಿದೆ, ಅನುಭವಿಸುತಿದೆ ಪ್ರಸವ ವೇದನೆ. ಹೆಣ್ಣ ಬಾಳ ಸಾರ್ಥಕಗೊಳಿಸಿ ಪ್ರಕೃತಿ ಕೊಟ್ಟ ಹೊಣೆ ಹರಿಸಿ...

ಶುಭ

ತಟ್ಟಿಕೊಳ್ಳಿ ನಿಮ್ಮ ಬೆನ್ನ ನೀವೇ...... ಧಾರಾಳವಾಗಿ ತಟ್ಟಿಕೊಳ್ಳಿ. ಬೇರೆಯವರು ನಿಮ್ಮ ಬೆನ್ನ ತಟ್ಟಲು ಅವರಿಗೇನು ತಲೆ ಕೆಟ್ಟಿದೆಯೇ? ಜಾಹೀರಾತೇ ಜೀವ ಆಗಿರುವ ಈ ಕಾಲದಲ್ಲಿ ಬೇರೆಯವರ ಬೆನ್ನುತಟ್ಟಿದರೆ ನಮಗೇನು ಲಾಭ? ನಮ್ಮ ನಮ್ಮ ಬೆನ್ನ...

ವ್ಯತ್ಯಾಸ

ಓಡುತ್ತಿರುವ ಹೆಣ್ಣು ಕೋತಿಯ ಹೊಟ್ಟೆಯ ತಳ ಭಾಗದಲ್ಲಿ ಮರಿ ಕೋತಿ ತಬ್ಬಿ ಹಿಡಿದು ಕೂತಿತ್ತು. ಓಡುತ್ತಿರುವ ಹೆಣ್ಣು ಕಾಂಗರೂ ಹೊಟ್ಟೆಯ ಚೀಲದಲ್ಲಿ ಮರಿ ಕಾಂಗರೂ ಸುಭದ್ರವಾಗಿ ಕೂತಿತ್ತು, ಓಡುತ್ತಿರುವ ಹೆಣ್ಣು ಮಾನವಳ ಮರಿ, ಮಗು...

ಒಗ್ಗಟ್ಟು

ಗಂಡ-ಹೆಂಡತಿ ಇಬ್ಬರೂ, ಬಿಡದೆ ಯಾವಾಗಲೂ ಒಟ್ಟೊಟ್ಟಿಗೆ ಸ್ಕೂಟರಲ್ಲಿ ಸುತ್ತುತ್ತಾರೆ. ಕಂಡವರಿಗೆ ಅಸೂಯೆ ತರುವಂತಹ ಅವರಿಬ್ಬರ ಒಗ್ಗಟ್ಟಿನ ಗುಟ್ಟು ಪರಸ್ಪರರ ಮೇಲಿನ ಅಪ ನಂಬಿಕೆ. ತಾನಿಲ್ಲದಾಗ ಗಂಡ- ಬೇರೆಯವಳನ್ನು ಕರೆದೊಯ್ಯ ಬಹುದೆಂಬ ಹೆದರಿಕೆ ಹೆಂಡತಿಗೆ ಹೆಂಡತಿ...

ಗಟ್ಟಿ ಮೇಳ

ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ...

ಕ್ಷಮೆ

ನೀನು ದಯಾಮಯ ಕರುಣಾಸಾಗರ ಕ್ಷಮಾಗುಣ ಸಂಪನ್ನ, ನಾನು ನಿನ್ನ ಶರಣ ಚರಣದಾಸ, ನಿನ್ನಂತೆಯೇ ಕ್ಷಮಯಾಧರಿತ್ರಿ. ನೀ ನನಗೆ. ಕೊಟ್ಟ ಸುಖಕೆ ನಿನ್ನ ದಯೆ ಎಂದು ವೆಂದಿಸಿದೆ. ನೀ ಕೊಟ್ಟ ಕಷ್ಟ ಕೋಟಲೆಗೆ ನಿನ್ನ ದೂರದೆ...

ಅನಂತರ

ನಲವತ್ತು ವರ್ಷಗಳ ಅನಂತರ ಭೇಟಿಯಾದರು ಪರಮಾಪ್ತ ಗೆಳೆಯರು ಬಾಲ್ಯ ಯೌವನ ನೆನೆಸಿಕೊಂಡು ಮನಸಾರೆ ನಕ್ಕರು. "ನಮ್ಮ ಸಹಪಾಠಿ ರೂಪ, ಈಗ ಎಲ್ಲಿದ್ದಾಳೋ ಪಾಪ" ವಿಷಾದದನಗೆ ನಕ್ಕ ಮೊದಲ ಮುದುಕ. "ಅಡುಗೆ ಮನೇಲಿದಾಳೆ ಆ ನನ್ನ...

ಮುದುಕರು

ಮುದ್ದು ಮಕ್ಕಳು, ಮುದುಕರು ಹಲವು ವಿಷಯಗಳಲ್ಲಿ ಒಂದೇ. ಪ್ರತಿಯೊಂದರಲ್ಲಿಯೂ ಆಸಕ್ತಿ, ಕುತೂಹಲ. ಆಸೆಪಟ್ಟಿದ್ದು ಬೇಕೇ ಬೇಕೆಂದು ಹಟ ಹಿಡಿಯವುದು ಇತ್ಯಾದಿ. ಆದರೆ ಮಕ್ಕಳು ಬೇಕಾದ್ದನ್ನು ಬಹು ಬೇಗ ಕಲಿಯುತ್ತವೆ. ಬೇಡವಾದುದನ್ನು ಅಷ್ಟೇ ಬೇಗ ಮರೆಯುತ್ತವೆ....

ಪರಿಚಿತ

ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ - ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ...