ಸೂರ್ಯ

ಆಕಾಶದಲ್ಲಿ ಕಾಲು ಇಳಿಬಿಟ್ಟು ನೀರಲ್ಲಾಡಲು ಹೋದ ಸೂರ್ಯ ಜಾರಿ ಸಂಜೆ ಸಮುದ್ರದೊಳಕ್ಕೆ ಬಿದ್ದವನನ್ನು ಮೀನುಗಳೆಲ್ಲಾ ಸೇರಿ ಮೇಲಕ್ಕೆತ್ತಲು ಪಾಪ ಬೆಳಗಿನವರೆಗೂ ಕಷ್ಟಪಡಬೇಕಾಯಿತು. *****

ನಿಮಿತ್ತ ಆಯ್ತೂಂತ

ನಿಮಿತ್ತ ಆಯ್ತೂಂತಾ ಬೆಳಗಿನವರೆಗೂ ಕದ್ದ ಚಂದ್ರ, ರಾಜಾರೋಷ ಸೂರ್ಯನ ಕೈಲಿ ಸಿಕ್ಕು ಹಾಕಿಕೊಂಡು, ಅವನ ಸಿಟ್ಟು ನೆತ್ತಿಗೇರೊ ಅಷ್ಟರಲ್ಲಿ ಬೆಳ್ಳಗೆ ಬಿಳಿಚಿ ತೆಳ್ಳಗಾಗಿದ್ದ. *****

ಸೂರ್ಯನ ಪ್ಲಾನು

ಇಂದು ಮುಂಜಾನೆ ಸೂರ್ಯ ಮಂಜಿನ ಕ್ರೀಮು ಹಚ್ಚಿ, ತೆಳುಮೋಡದ ಸ್ಕ್ರೀನು ಮುಸುಕಿ ಹಾಕಿ ಥೇಟ್ ಚಂದ್ರನಂತೆ ಕಾಣುತ್ತಿದ್ದ, ಕೆರೆಯೊಳಗಿನ ಅವನ ಪ್ರತಿಬಿಂಬ ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಿತ್ತು.  ಆದರೆ ಹತ್ತೇ ನಿಮಿಷದಲ್ಲಿ ಹತ್ತಿಕೊಂಡುರಿಯುವ ಅವನ ಮುಖ...

ಸೂರ್ಯನೂ ಅಷ್ಟೆ

ಸೂರ್ಯನೂ ಅಷ್ಟೆ ನಮ್ಮ ಐ.ಟಿ.ಬಿ.ಟಿ ಹುಡುಗರಂತೆ ಮೇಲಕ್ಕೇರಿದ ಮೇಲೆ ಜನ್ಮ ಸ್ಥಳ ಮರೆತು ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ ಅಲ್ಲಿ ಏನು ಕಥೆಯೋ ಏನೋ ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ...

ಸೂರ್ಯ ಅನ್ನೋ ಪ್ರಾಣಿ

ಪಾಪ ಸೂರ್ಯ ಅನ್ನೋ ಪ್ರಾಣಿ ಎಲ್ಲರಂತೆ ನಿದ್ದೆ ಮಾಡ್ಲಿಕ್ಕೆ ಕತ್ತಲೆ ಹುಡುಕಿಕೊಂಡು ಒಂದೇ ಸಮನೆ ತಿರುಗುತ್ಲೇ ಇದೆ ಅವನು ಕಾಲಿಟ್ಟಲ್ಲೆಲ್ಲಾ ಕೈಗೆ ಸಿಗದಂತೆ ಕಣ್ ತಪ್ಪಿಸಿ ಕತ್ತಲೇನೂ ಸುಖಾಸುಮ್ನೆ ಹೆದರ್‍ಕೊಂಡು ಓಡುತ್ಲೇ ಹೋಗ್ತಿದೆ. *****

ಸೂರ್ಯ ಬರಲೇ ಇಲ್ಲ

ಚಂದ್ರನಿಲ್ಲದ ಅಮವಾಸ್ಯೆ ರಾತ್ರೆ ತಾರೆಗಳು ಆಕಾಶದುದ್ದಗಲ ರಂಗೋಲೆ ಶೃಂಗರಿಸಿ ರಾತ್ರಿ ಇಡೀ ಒಂದು ಕ್ಷಣವೂ ಕಣ್ಮುಚ್ಚದೆ ಸೂರ್ಯ ಬಂದಾನೆಂದು ಎಷ್ಟು ಕಾದರು ಅವನು ಬರಲೇ ಇಲ್ಲ. ಬೆಳಗಾದ ಮೇಲೆ ಮಹರಾಯ ಬಂದಾಗ, ಕಣ್ಣು ಬಿಡಲಾಗದ...

ಸಬ್‌ಇನ್ಸ್‌ಪೆಕ್ಟರ್‍ ಹೇಳಿದ್ದು

ಅರೇ ಇಲ್ಲಿದ್ದ ಕತ್ತಲೆಯನ್ನು ಕದ್ದವರಾರು ಸೂರ್ಯನೇ? ಚಂದ್ರನೇ? ಅಥವಾ ನಮ್ಮ ಮನೆಯ ಮೊಂಬತ್ತಿಯೇ? ವಿಚಾರಿಸೋಣ ಬಿಡಿ ಒಂದು ಕಂಪ್ಲೇಂಟ್ ಕೊಡಿ ಎಲ್ಲಿ ಹೋಗ್ತಾರೆ, ಸಿಕ್ಕಿ ಬೀಳ್ತಾರೆ *****