ಹನಿಗವನ ಹನಿ ಜರಗನಹಳ್ಳಿ ಶಿವಶಂಕರ್ April 25, 2022December 28, 2021 ಹನಿಯಾಗುವ ಮೊದಲು ಮುಗಿಲು ಕೂಡಿ ಹರಿದ ಮೇಲೆ ಕಡಲು ಮುಗಿಲಲ್ಲಿ ಕಾಣದು ಕಡಲ್ಲಲಿ ನಿಲುಕದು ***** Read More
ಹನಿಗವನ ಅಖಂಡ ಜರಗನಹಳ್ಳಿ ಶಿವಶಂಕರ್ April 18, 2022December 28, 2021 ಹೊಸ ನೀರು ಹಳೆ ನೀರ ಕೊಚ್ಚಿ ಹೋಗುವುದು ನಶ್ವರ ಬದುಕಿನ ನಾಡಿನಲ್ಲಿ ಹೊಸ ನೀರು ಮರೆಯಾಗುವುದು ಹಳೆ ನೀರಿನೊಳಗೆ ಶಾಂತ, ಶಾಶ್ವತ ಸಾಗರದಲ್ಲಿ ***** Read More
ಹನಿಗವನ ಸಂಭ್ರಮ ಜರಗನಹಳ್ಳಿ ಶಿವಶಂಕರ್ April 11, 2022December 28, 2021 ನೀರೆ ಹಾಗೆ ಬರುವಾಗ ಅಲ್ಲಿ ಮುಗಿಲಲ್ಲಿ ಕಾಮನ ಬಿಲ್ಲು ಮಿಂಚು ಗುಡುಗು ಹರಿಯುವಾಗ ಇಲ್ಲಿ ನೆಲದಲ್ಲಿ ಹಣ್ಣು ಹೂ ಹಸಿರು ಮಣ್ಣಿಗೆ ಮೆರುಗು ***** Read More
ಹನಿಗವನ ಜವಾಬುದಾರಿ ಜರಗನಹಳ್ಳಿ ಶಿವಶಂಕರ್ April 4, 2022December 28, 2021 ಆಕಾಶ ಮನ ಬಂದಂತೆ ಸುರಿಸಿ ಮಳೆ ನಿರ್ಮಲವಾಗಿಬಿಡುತ್ತೆ ಆ ನೀರನ್ನೆಲ್ಲ ಕಡಲಿಗೆ ಸೇರಿಸುವ ಅದೆಷ್ಟು ಜವಾಬ್ದಾರಿ ಈ ನೆಲಕ್ಕೆ ***** Read More
ಹನಿಗವನ ಗುಪ್ತ ಜನ್ಯ ಜರಗನಹಳ್ಳಿ ಶಿವಶಂಕರ್ March 28, 2022December 28, 2021 ಆಕಾಶ ಬರಿ ಶೂನ್ಯ ಎನ್ನುವುದು ಅಸತ್ಯ ಅಲ್ಲೂ ನಡೆದಿದೆ ಕಣ್ಣಿಗೆ ಕಾಣದ ದಾಂಪತ್ಯ ಇಲ್ಲವಾದರೆ ಮುಗಿಲು ಗುಡುಗು ಮಿಂಚು ನೀರಾಗಿ ಹುಟ್ಟಿ ಸುರಿಯಲು ಹೇಗೆ ತಾನೆ ಸಾಧ್ಯ ***** Read More
ಹನಿಗವನ ಲೀಲೆ ಜರಗನಹಳ್ಳಿ ಶಿವಶಂಕರ್ March 21, 2022December 28, 2021 ಮೇಲೆ ಮುಗಿಲು ಕೆಳಗೆ ಕಡಲು ನಡುವೆ ಎಂಥ ಮಾಯೆ ಗುಡುಗು ಮಿಂಚು ಮಳೆ ಜೀವ ಕಳೆ ಜಗದ ಬೆಲೆ ಎಲ್ಲ ಇದರ ಹೆಗಲ ಮೇಲೆ ***** Read More
ಹನಿಗವನ ನಾಟಕ ಜರಗನಹಳ್ಳಿ ಶಿವಶಂಕರ್ March 14, 2022December 28, 2021 ಪರದೆ ಸರಿಸಿ ಆಡಬೇಕು ಹೊಟ್ಟೆಪಾಡಿನ ನಾಟಕ ಎಲ್ಲರ ನೋಟಕ ರಂಗ ಪಂಟಪದೊಳಗೆ ಒಂಬತ್ತು ಬಾಗಿಲುಗಳಿಗೂ ಪರದೆ ಕಟ್ಟಿ ನಟಿಸಬೇಕು ನಿರಂತರ ಕಣ್ಣಿಗೆ ಕಾಣದ ಪ್ರೇಕ್ಷಕ ಮೆಚ್ಚುವಂತ ಆಟಕ ***** Read More
ಹನಿಗವನ ಸಾಮರ್ಥ್ಯ ಜರಗನಹಳ್ಳಿ ಶಿವಶಂಕರ್ March 7, 2022December 28, 2021 ಹಾರಿ ಹೋಗುವ ಪ್ರಾಣದ ತೂಕ ಕಣಾತಿ ಕಣ ಅದು ಹೊತ್ತು ತಿರುಗುತ್ತೆ ನೋಡಿ ದೇಹದ ಭಾರ ಹತ್ತಾರು ಮಣ ***** Read More
ಹನಿಗವನ ಜಾಗರ ಜರಗನಹಳ್ಳಿ ಶಿವಶಂಕರ್ February 28, 2022December 28, 2021 ನವಿಲಿನ ಸಾವಿರ ಕಣ್ಣಲಿ ಅಚ್ಚಾಗಿದೆ ಒಲವಿನ ಕನಸು ನರ್ತನ ತೋರಿದೆ ಕನಸಿನ ಲೋಕದ ಸೊಗಸು ***** Read More
ಹನಿಗವನ ಪ್ರಭಾವ ಜರಗನಹಳ್ಳಿ ಶಿವಶಂಕರ್ February 21, 2022December 28, 2021 ಕಾಲು ಹೊಕ್ಕರು ಮುಳ್ಳು ದಾರಿ ತಪ್ಪದು ಕಿವಿ ಹೊಕ್ಕರೆ ಸುಳ್ಳು ದಿಕ್ಕೇ ತೋಚದು ***** Read More