Home / Shrivijaya Haasana

Browsing Tag: Shrivijaya Haasana

ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ ಹೆಸರು ಬರಿಗೈಯಲ್ಲಿ ಬಂದಿರುವೆಯಾ ಹೇಗೆ? ಏನೇನು ತಂದಿ...

ಆರಿದ ನಂದಾದೀಪ ಎಂದಿನಂತೆ ನಿರುತ್ಸಾಹದಿಂದ ಎದ್ದು ರಣರಂಗಕ್ಕೆ ಬಂದು “ಮಹಾರಾಜ ನಿಮ್ಮ ಜೇಷ್ಠ ಪುತ್ರರಾದ ಇಂದ್ರಜಿತುವು ನಿಕುಂಬಳಾ ದೇವಿಯ ಅನುಗ್ರಹದಿಂದ ದೊರೆತ ಮಾಯಾರಥದಲ್ಲಿ ಕುಳಿತು ಯಾರಿಗೂ ಕಾಣದಂತೆ ಆಕಾಶದಲ್ಲಿ ಅಡಗಿ ಬಾಣಗಳ ಪ್ರಯೋಗದಿ...

ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ ತೋರಿಸು...

ಅತಿಕಾಯನ ಅವಸಾನ ಕುಂಭಕರ್ಣನ ಮರಣವಾರ್ತೆ ನನ್ನ ಕಿವಿಗೆ ಕಾದಸೀಸವನ್ನು ಹೊಯ್ದಂತಾಯಿತು. ಎಲ್ಲರೂ ಕೈಬಿಟ್ಟು ಹೋಗುತ್ತಿದ್ದಾರೆ. ಧೂಮ್ರಾಕ್ಷ, ರುಧಿರಾಸುರ, ಪ್ರಹಸ್ತ, ಈಗ ಕುಂಭಕರ್ಣ ನಾಳೆ ಇನ್ಯಾರೋ ಹೋಗಲಿ ಎಲ್ಲರೂ ಸಾಯಲಿ, ಲಂಕೆಯೇ ನಿರ್ನಾಮವಾಗಲಿ ...

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು ಕ...

ಕುಂಬಕರ್‍ಣನ ಕಾಳಗ ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು ಆಯುಧಪಾಣಿಗಳಾಗಿ ನನ್ನ ಹಿ...

ಒಂದೇ ಸಮನೆ ಸುರಿಯುತ್ತಿದೆ ಮಸಲಧಾರೆ. ಅಬ್ಬರವೇನು? ಆರ್ಭಟವೇನು? ಎಲ್ಲಿ ಅಡಗಿತ್ತೋ ಬೆಟ್ಟ ಗುಡ್ಡಗಳ ನಡುವೆ ಎಷ್ಟು ದಿನಗಳಾದವೋ ಕಾದು ಕುಳಿತ ಕಣ್ಣುಗಳು ಮಂಜಾಗಿ ಮರೆಯಾದವು ಯಾರು ದಬ್ಬಿದರೋ ಕಾಣೆ ದಿಢೀರನೆ ಬಿತ್ತು ಸುಮ್ಮನೆ ಬಂದರೆ ಕೇಳಿ ಬರುವಾಗ...

ಮಾಯಾಯುದ್ಧ ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ ಹಣೆಗೆ ರಕ್ಷೆಯನ್ನಿಟ್ಟು ಜಯವಾ...

ಏನಿದು? ಮಾಯೆ ಸೃಷ್ಠಿಯ ಛಾಯೆ ಎಲ್ಲಿಂದ ಎಲ್ಲಿಯವರೆಗೆ ಹರಡಿದೆ ಜಗತ್ತಿನ ಛಾಯೆ ಯಾರಾತ? ಎಲ್ಲಿಡಗಿಹನಾತ? ಸೃಷ್ಠಿಯ ರಹಸ್ಯವ ತಿಳಿಸದಾತ? ಕತ್ತೆತ್ತಿದರೆ ನೀಲಾಕಾಶ ಅಸಂಖ್ಯ ತಾರೆಗಳ ಇತಿಹಾಸ ಸೂರ್ಯ ಚಂದ್ರ ಗ್ರಹಗಳ ಪರಿವೇಷ ನದಿ ಸಾಗರ ಸಂಗಮ ಸಮಾವೇಷ ...

ಇಂದ್ರಜಿತುವಿನ ಇಂಗಿತ “ರಾವಣಾಸುರ ಅಲ್ಲಿ ನೋಡಿ ಹತ್ತು ಲಕ್ಷ ಕಪಿಸೇನೆಯೊಂದಿಗೆ ಪೂರ್ವದಿಕ್ಕಿಗೆ ನಿಂತವನು ನೀಲನೆಂಬ ದಳಪತಿ, ಹದಿನೈದುಲಕ್ಷ ಕರಡಿಗಳ ಸೇನೆಯೊಂದಿಗೆ ದಕ್ಷಿಣದಿಕ್ಕಿಗೆ ನಿಂತವನು ಜಾಂಬವಂತನು ಒಂದು ಕೋಟಿ ಸಿಂಗಳೀಕಗಳೊಂದಿಗೆ ಪ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...