ಹನಿಗವನ ಹನಿ ಜರಗನಹಳ್ಳಿ ಶಿವಶಂಕರ್ July 4, 2022December 28, 2021 ಚಿಪ್ಪು ಹಿಡಿದು ಬೇಡುತ್ತಿದ್ದೆ ದಾನ ಮಾಡಿತು ಮುಗಿಲು ಹನಿ ಮುತ್ತಾಗಿದೆ ಈಗ ನನ್ನ ಸ್ವತ್ತಾಗಿದೆ ***** Read More
ಹನಿಗವನ ಸಣ್ಣೀಕರಣ ಜರಗನಹಳ್ಳಿ ಶಿವಶಂಕರ್ June 27, 2022December 28, 2021 ಭಾವನೆಗಳ ಬಂಡೆ ಬಡಿದು ಸಣ್ಣ ಸಣ್ಣ ಚೂರು ಮಾಡಿದ ಜಲ್ಲಿಗೆ ಬಹಳ ಬೇಡಿಕೆ ಬಳಸಲು ಭವ್ಯ ಬಂಗಲೆಗಳ ಸೂರಿಗೆ ಹಾಸಲು ಯಾತ್ರೆಯ ಹೆದ್ದಾರಿಗೆ ***** Read More
ಹನಿಗವನ ಸೌಖ್ಯ ಜರಗನಹಳ್ಳಿ ಶಿವಶಂಕರ್ June 20, 2022December 28, 2021 ಯಾರೋ ಸೃಷ್ಟಿಸಿದ ಅಕ್ಷರಗಳು ಯಾರದೋ ಭಾವನೆಗಳ ಜೊತೆ ಕೂಡಿ ಬದುಕು ಭಾವನೆಗಳ ಆರೋಗ್ಯ ಅಕ್ಷರಗಳ ಭಾಗ್ಯ ***** Read More
ಹನಿಗವನ ತಂದೆ ಜರಗನಹಳ್ಳಿ ಶಿವಶಂಕರ್ June 13, 2022December 28, 2021 ಎಲ್ಲಿ ಎಂದು ಹುಟ್ಟುವುದೋ ಹೇಗೆ ತೊರೆದು ಬರುವುದೋ ಸೃಷ್ಟಿಯ ಹೊಟ್ಟೆ ತಿಳಿಯದು ನನಗೆ ನಾನು ಕವಿತೆಯ ತಂದೆ ***** Read More
ಹನಿಗವನ ದ್ವಂದ್ವ ಜರಗನಹಳ್ಳಿ ಶಿವಶಂಕರ್ June 6, 2022December 28, 2021 ಅಗಾಧ ಕಡಿಲಿಗು ಹಾರಿ ಮುಗಿಲಾಗಿ ಹನಿ ಹನಿಯಾಗುವ ಆಸೆ ಈ ನೆಲದ ಪ್ರತಿ ಹನಿಗೂ ಓಡಿ ಓಡಿ ಕಡಲಾಗುವ ಆಸೆ ***** Read More
ಹನಿಗವನ ನಂಟು ಜರಗನಹಳ್ಳಿ ಶಿವಶಂಕರ್ May 30, 2022December 28, 2021 ಮುಗಿಲಿನಲ್ಲಿ ಹಾರುವ ಹದ್ದಿಗು ಬಾಯಾರಿಕೆ ನೀರಿಗೆ ಬರಲೇಬೇಕು ಭೂಮಿಗೆ ***** Read More
ಹನಿಗವನ ಅಗೋಚರ ಜರಗನಹಳ್ಳಿ ಶಿವಶಂಕರ್ May 23, 2022December 28, 2021 ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು ***** Read More
ಹನಿಗವನ ವೈಚಿತ್ರ್ಯ ಜರಗನಹಳ್ಳಿ ಶಿವಶಂಕರ್ May 16, 2022December 28, 2021 ಮುಗಿಲುಗಳಿಗೆ ಘಳಿಗೆಗೆ ನೂರು ಬಣ್ಣ ಅಲ್ಲಿ ಹುಟ್ಟಿ ಬರುವ ನೀರಿಗೆ ನಿರ್ವರ್ಣ ಆ ನಿರ್ಮಲ ನೀರಿನೊಳಗೆ ತೂರಿ ಬರುವ ಬೆಳಕಿಗೊ ಬಣ್ಣಿಸಲಾಗದು ಏಳು ಬಣ್ಣ ***** Read More
ಹನಿಗವನ ಸ್ವಯಂವರ ಜರಗನಹಳ್ಳಿ ಶಿವಶಂಕರ್ May 9, 2022December 28, 2021 ಭೋರ್ಗರೆದು ಹರಿಯುತಿದ್ದ ಹರೆಯದ ನೀರು ಕೊಳದಲ್ಲಿ ಮುಳುಗಿ ಮೈ ಮರೆತು ಮಲಗಿ ತಾವರೆಗಳು ಹುಟ್ಟಿ ವಧುಗಳಾಗಿ ಬಿರಿದು ದುಂಬಿಗಳು ಸಾಲು ಕಟ್ಟಿ ವರಗಳಾಗಿ ನೆರೆದು ಸುಂದರ ಸರೋವರ ***** Read More
ಕವಿತೆ ಯೋಗ ಜರಗನಹಳ್ಳಿ ಶಿವಶಂಕರ್ May 2, 2022December 28, 2021 ಕಾರಂಜಿಗಳಲ್ಲಿ ಪುಟಿಯುತ್ತೆ ನಡಿಗಳಲ್ಲಿ ಹರಿಯುತ್ತೆ ಜಲಪಾತಗಳಲ್ಲಿ ಧುಮುಕುತ್ತೆ ಜಲಾಶಯಗಳಲ್ಲಿ ನಿಲ್ಲುತ್ತೆ ಚರಂಡಿಗಳಲ್ಲಿ ನಾರುತ್ತೆ ನೀರು ಆವಿಯಾಗಿ ಆಕಾಶಕ್ಕೆ ಹಾರಿ ಮುಗಿಲಾಗಿ ಪರಿಶುದ್ಧ ಮಗುವಾಗಿ ಮರುಜನ್ಮ ತಾಳಿ ಮಳೆಯಾಗಿ ಭೂಮಿಯ ಮಡಿಲಿಗೆ ಬೀಳುವ ಭಾಗ್ಯ ಎಲ್ಲ... Read More