ನೋಡೋಣ ಬಾರಾ ಹಂಪಿ

ವಿರುಪಾಕ್ಷಲಿಂಗವಿದ್ದ ಹಂಪಿ ನೋಡೋಣ ಬಾರಾ ಇಬ್ಬರು ಕೂಡಿ ||ಪ|| ಅಂಗಲಿಂಗ ಸುಖ ಎರಡು ಕೂಡಿ ಒಂದೆ ಶಿವ ಶಬ್ಬದೊಳಗೆ ||೧|| ಗಂಗಿ ಸರಸ್ವತಿ ಯಮುನಾ ತೀರ ಮಧ್ಯದಿ ಹುಡುಕೋಣ ಬಾರೆ ||೨|| ಶ್ರೀಶಂಕರನ ಪಾದದಡಿಯಲ್ಲಿ...

ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ

ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ ||ಪ|| ಮೇಧಿನಿಯೊಳು ಸಂಶಿಯ ಜನ ವಿನೋದದಿಂದು ಮಾಡಿದಂಥಾ ||ಅ. ಪ.|| ಧರಿಗೆ ಸಂಶಿ ಮರೆವ ಮೋಜಿನ ಪರಿ ಬಾರೆ ಪ್ಯಾಟಿ ಮಳಗಿ ಸಾಲ್ಗಳೆರದು ಬಾಜಿನ ನೆರೆ ಶುಭದಿ ಅದರೊಳಗಿರುವರೈ...

ತೋಟವ ನೋಡಿರಯ್ಯಾ

ತೋಟವ ನೋಡಿರಯ್ಯಾ ಸದ್ಗುರುವಿನ ಆಟವ ನೋಡಿರಯ್ಯಾ || ಪ || ನೀಟಗೂಡಿ ನಿಜ ಬ್ರಹ್ಮಜ್ಞಾನದಿ ಕೋಟಿ ಕರ್ಮ ಸಂಹರಿಸಿದ ಧರ್ಮವ ||ಅ.ಪ.|| ಬೈಲೊಳು ಬೈಲಾಗಿ ಕವಲಿಲ್ಲದ ಮೂಲ ಸಹಿತವಾಗಿ ಜೋಲುವ ಫಲಗಳು ಗಾಳಿಗೆ ಒಲಿಯಲು...

ಎರಗಿ ಬಿನ್ನಾ ಮಾಡದ್ಹೋದರು

ಎರಗಿ ಬಿನ್ನಾ ಮಾಡದ್ಹೋದರು ಗುರುವರನ ಗಣರಿಗೆರಗಿ ಬಿನ್ನಾ ಮಾಡದ್ಹೋದರು ನರಗುರಿಗಳು ಪರಿಹಾಸ್ಯದಿ ಜರಿದರು ಎನ್ನ ಕರೆಸಿದರೈ ಹರನ ಶಾಸ್ತ್ರಕೆ ವರಪ್ರಸ್ತಕೆ ಮರಿತರು ನಿಮಗರಿಕಿರಲೈ ||ಪ|| ಹಿಂದಕ್ಕೊಮ್ಮೆ ಪ್ರಥಮರೊಡನೆ ದ್ವಂದ್ವ ಬಯಸಿ ರೇಚಿತಂದೆ ಒಂದು ಕರಿಯ...

ಬಾರದಿರುವೆರೇನೇ ಭಾಮಿನಿ

ಬಾರದಿರುವರೇನೇ ಭಾಮಿನಿ ಬಾರದಿರುವರೇನೇ ||ಪ|| ಬಾರದಿರುವ ಕಾರಣವೇನಲೆ ಸಖಿ ದೂರದಿಂದ ಮುಖ ತೋರಿ ಸಮಯದಿ ||ಅ.ಪ. || ನಂಬದವನ ಕೂಡ ಭಾಮಿನಿ ಸಂಭ್ರಮಿಸುವದು ಬ್ಯಾಡ ನೋಡ ಅಂಬುಜಾಕ್ಷಿಯೇ ಕಂಬುಕಂದರಿಯೇ ಹಂಬಲಿಸುತ ನಿನ್ನ ಬೆಂಬತ್ತಿ ನಾ...

ಬಾರೇ ನೀರೆ ತೋರೇ ಮುಖ

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ ||ಪ|| ಆರಮುಂದೆ ಹೇಳಿದರೆ ತೀರದೀ ಮಾತು ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು ಬರತೀನಂತಾ ಹೇಳಿಹೋದೆಲ್ಲೆ ಮರೆತು...

ಇದು ಏನು ಸೋಜಿಗವೇ ಮಾನಿನಿಯಾಗಿ

ಇದು ಏನು ಸೋಜಿಗವೇ ಮಾನಿನಿಯಾಗಿ ಇದು ಏನು ಸೋಜಿಗವೇ ||ಪ.|| ಕಲ್ಲಿನೊಳಗೆ ಮುಳ್ಳು ಮುಳ್ಳಿನೊಳಗೆ ಜೊಳ್ಳು ಎಳ್ಳು ಕೋಲಿಯ ಕದ್ದು ಕಳ್ಳ ಕಾಡಿನೊಳೋದದ್ದೇನು ಸೋಜಿಗವೇ ||೧|| ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ ಹೊಕ್ಕಾ ಮುಂದಕ್ಕೆ...

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ ||ಪ|| ಬಾಳ ದಿವಸಾಯ್ತು ನಿಮ್ಮನ್ನು ಕೇಳಿ ಕೇಳಿ ದಣಿದೆ ನೊಂದೆ ಗಾಳಿ ಮಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು ||೧|| ಚಲುವೆ ಅನಿಮಿಷಾಗ್ರ ಕೊನಿಗೆ...

ಮರುಳಾದೆ ಮಾನಿನಿ

ಮರುಳಾದೆ ಮಾನಿನಿ ಮರುಳಾದೆ ಮಾರನಾಟದಿ ಮನಸ್ಸುಗೊಂಡೆನೇ || ಪ || ತರುಳರನ್ನು ನೀನು ಕಾಣುತ ಸ್ಮರನ ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ ಸರಸಿಜಾಕ್ಷಿ ಕರುಣಿಸು || ೧ || ಸುಂದರಾಂಗಿ ಚಂದ್ರವದನೆ ಮಂದಗಮನೆ...