
ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ – ವಿಜ್ಞಾನೇಶ್ವರಾ *****...
ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *****...
ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...
ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು – ವಿಜ್ಞಾನೇಶ್ವರಾ *****...
ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ *****...
ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು – ...
ಮಲ ಶೋಧನೆಯ ವೇಳೆ ವ್ಯರ್ಥವಾಗದಂದದಲೆನ್ನ ಒಳ ಮನವೆನ್ನ ಜೀವನವನವಲೋಕಿಸುತಿರಲಾಗ ತಳೆದಿರ್ಪ ಕವನಗಳಿವ್ ಗೊಬ್ಬರವೆಂದವಗಣಿಸದಿರಿ ಫಲವಂತ ಮರಕೆಲ್ಲದಕು ಮೂಲ ಗೊಬ್ಬರವಲಾ ಬೆಲೆಬಾಳ್ವಾರೋಗ್ಯಕ್ಕೆ ಮೂಲ ಮಲ ಶೋಧವಲಾ – ವಿಜ್ಞಾನೇಶ್ವರಾ *****...
ಕಳಿತ ಹಣ್ಣನಿಕ್ಕುವುದೆನ್ನ ಕವನದ ಬಯಕೆ ಹುಳಿತವಾದೊಡಂ ಉಣಲಕ್ಕು ಹುಳಿಗೊಜ್ಜಿಗಕ್ಕು ಕೊಳೆತೊಡದುವೇ ಬಿತ್ತಾಗಿ ಹೊಸ ಮರ ಬಕ್ಕು ಕಳಿತ ಗೊಬ್ಬರಕು ಕಳಿತ ಹಣ್ಣಿನಾ ಬೆಲೆ ಇಕ್ಕು ಫಲಿತದೊಳು ತಿಪ್ಪೇಶನಾರಾಧನೆಗೆ ಮಹತಿಕ್ಕು – ವಿಜ್ಞಾನೇಶ್ವರಾ **...
ಅಟ್ಟುಣಲಪ್ಪಂತ ಕುಂಭಕಾರಿಕೆ ಎನ್ನೊಲವು ಎಷ್ಟು ಮಾಡಿದರೆನಗೆ ಸಂದಿಲ್ಲವಾ ಕೌಶಲವು ಕಷ್ಟ ಪಟ್ಟೋಡಿಷ್ಟ ಸಿದ್ಧಿಯಲಾ? ಎನಗಾ ಛಲವು ಅಷ್ಟು ಮಾಡಲೊಂದೆರಡು ದಕ್ಕಿದರು ನಲಿವು ಒಟ್ಟೆಲ್ಲ ಕುಂಡವಾದೊಡಷ್ಟೆನಗೆ ನೂಕು ಬಲವು – ವಿಜ್ಞಾನೇಶ್ವರಾ *****...
ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು ಆನೇನ ಮಾಡಲೆಲ್ಲಿ ಪೋದರು ಪೊ...














