ಹಲವು ಯೋಚನೆಯಿಂದ ಬಳಲಿದರೇನಿದು

ಹಲವು ಯೋಚನೆಯಿಂದ ಬಳಲಿದರೇನಿದು ಸುಲಭದಿ ಸದ್ಗುರುಸೇವೆಯೊಳಿರದೆ ||ಪ|| ತಿಳಿದು ಪರಮ ಜೀವರೊಂದುಗೂಡಿಸಿ ತತ್ವ- ಗಳ ಅರಿತು ಮಾಯಾ ಅಳಿಯೆ ಮುರಿಯದೆ ||೧|| ನರಜನ್ಮ ಸ್ಥಿರವೆಂದು ಜರೆಮರಣದೊಳು ನೊಂದು ಮರಳಿ ಮರಳಿ ಭವಕೆ ಬರಬಹುದೆ ||೨||...

ಸಂಸಾರದ ಗೊಡವಿ ಇನ್ನ್ಯಾಕೆ

ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ|| ಭವಸಾಗರದೊಳು ಮುಳುಗಿ ಮುಳುಗುತಿರೆ ನವಿದು ನವಿದು ಯಮರಾಜನು ಕೊಲುವಾ ||ಅ. ಪ|| ಒಂಟೆಯ ಮೇಲೆ ಹತ್ತಿದೆನವ್ವಾ ಗಂಟೆಯ ನುಡಿಸಿದೆ ತಾಯವ್ವ ಕಂಟಕ ಹರಿಸಿ ಸೊಂಟರಗಾಳಿಯ ದಾಂಟಿನಡಿದು...

ಮರಣಕ್ಕೆ ಒಳಗಾಗೊ ನರಕುರಿಗಳೆ

ಮರಣಕ್ಕೆ ಒಳಗಾಗೊ ನರಕುರಿಗಳೆ ಅರುವಿರಲಿ ಸಾರವೆ ಕೇಳಿರಿ ||ಪ|| ಮರೆಯದೆ ಶ್ರೀಗುರುಮಂತ್ರ ಬರದೋದಿ ಜಪಿಸುತ ಸ್ಮರಣೆದಪ್ಪಲಾಗದಲೆ ತಕ್ಕೊಳ್ಳಿರಿ ||೧|| ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ ಜೀವಪರಮರೊಂದು ಠಾವು...

ಹುಟ್ಟಿದ್ದು ಹೊಲಿಮನಿ

ಹುಟ್ಟಿದ್ದು ಹೊಲಿಮನಿ ಬಿಟ್ಹೊಂಟ್ಯೋ ಕಾಯ್ಮನಿ ಎಷ್ಟಿದ್ದರೇನು ಖಾಲಿಮನಿ ||ಪ|| ವಸ್ತಿ ಇರುವ ಮನಿ ಗಸ್ತಿ ಇರುವ ಮನಿ ಶಿಸ್ತಿಲೆ ಕಾಣೂವ ಶಿವನ ಮನಿ ||೧|| ಚಿಂತೆ ಕಾಂತೆಯ ಮನಿ ಸಂತಿ ಸವತಿಯ ಮನಿ ಅಂತು...

ಬರಬಾರದೋ ಯೋನಿಯೊಳು ಜನಿಸಿ

ಬರಬಾರದೋ ಯೋನಿಯೊಳು ಜನಿಸಿ ತಿಳಿದು ಒಂದೊಂದು ಎಣ‌ಎಣಿಸಿ ||ಪ|| ರಕ್ತದಿ ಬಿದ್ದು ಬಂದಿಯೋ ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧|| ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨|| ಧರಿಯೊಳು ನವಲಗುಂದ...

ಹೋಗುತಿಹುದು ಕಾಯ ವ್ಯರ್ಥ

ಹೋಗುತಿಹುದು ಕಾಯ ವ್ಯರ್ಥ ಇದರ ಲಾಘವ ತಿಳಿದವ ಯೋಗಿ ಸಮರ್ಥ ||ಪ|| ಏಳು ಜನ್ಮಾಂತರದಿನವು ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು ಭೋಗಲಂಪಟ ಸುಖಘನವು ಭವ ರೋಗದಿ ಮರಣಕ್ಕೆ ಆಯಿತೋ ಅನುವು ||೧|| ಬದುಕೇನು...

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ

ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ ಈ ಅ- ಸ್ಥಿರ ಶರೀರವ ನಂಬಲಿಬ್ಯಾಡಾ ||ಪ|| ಮರಳಿ ಮರಳಿ ಬಹು ತ್ವರದಿ ಭವಕೆ ಬಂದು ಸೊರಗಿ ಸುಖ-ದುಃಖ ಎರಡರ ಮಧ್ಯದಿ ||೧|| ಆತ್ಮವಿಚಾರವು ಆತ್ಮದೊಳಗಿರುತಿರೆ ಆತ್ಮ ಪರಮಾತ್ಮನ ಪ್ರಮಾಣಿಸಿ...

ಕಾಣದೆ ನೀ ಬೊಗಳಬ್ಯಾಡ

ಕಾಣದೆ ನೀ ಬೊಗಳಬ್ಯಾಡ  ಕೋಣನಂಥ  ರಂಡೆ ಜಾಣಜನರು ಕೂಡಿ ನಿಮ್ಮೋಣಿಯಲ್ಲ್ಹಾಯ್ದಿರಲು ಕೋಣಿಬಾಗಿಲಲಿ  ನಿಂತು ಗೋಣತಿರುವುವ ಮುಂಡೆ                   ||೧|| ನೆಟ್ಟಗಿಲ್ಲ ಮೈಬಣ್ಣ ರೊಟ್ಟಿ  ಹಂಚಿನ ಕರದ ತಟ್ಟದಲೆ ಬಿಟ್ಟು  ಮೋತಿಮ್ಯಾಲಿನ ಸೆರಗ ಜರದ ಉಟ್ಟ ಸೀರಿ...

ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ ಹುಟ್ಟಗರತಿಯ ಕಾಣಲಿಲ್ಲಾ ||ಪ|| ಹುಟ್ಟಗರತಿಯ ಕಾಣಲಿಲ್ಲಾ ಪಟ್ಟಗುಡುಮ ರಂಡೆ ನೀನು ಪಟ್ಟದಯ್ಯನವರಿಳಿಯ ಬಂದರೆ ಎಟ್ಟಿ ಮಾತುಗಳಾಡುತೀದಿ ||೧|| ಮಾನವಂತರ ಮನೆಯೊಳ್ಹುಟ್ಟಿ ಆದೆಲ್ಲ ಕೊಟ್ಟಿ ಅಪಕೀರ್ತಿ ಅವಗ ತಂದಿಟ್ಟಿ ಮಾನ ಹೋದ...

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ ಎದ್ದು ಹೋಗುತೇನಿ ತಾಳೆಲೋ ||ಪ|| ಎದ್ದು ಹೋಗುತೇನಿ ತಾಳೆಲೋ ಇದ್ದು ಇಲ್ಲೇ ಭವಕೆ ಬೀಳೊ ಸಧ್ಯ ಸದ್ಗುರು ಶಾಪ ನಿನಗೆ ಸಿದ್ಧಲಿಂಗನ ಪಾದಸಾಕ್ಷಿ ||ಅ.ಪ|| ಹಟದಿ ನಮ್ಮನ್ನ್ಯಾಕ...