ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ ಹಾದು ಬಂದಿದ್ದೇನೆ ಬಡಿದು ರೆಕ್ಕೆ ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ...

ಕೃತಜ್ಞತೆ

ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು ಹಳಿಯುವಂತೆ ಹೆತ್ತ ತಾಯನ್ನೇ ಹೋಗು ಹೋಗೆಂದು. ನಿನ್ನನ್ನು ಕರೆಸಿದ್ದು ಗರ್ಭಕ್ಕೆ ಇರಿಸಿದ್ದು, ಹೊರಬಂದಮೇಲೂ ಮೈ ಸೇರಿ ಪರಿಪರಿ ಮೆರೆಸಿದ್ದು ಸುತ್ತಲ ಬದುಕಲ್ಲಿ ಸರಿಗಮ ಹರಿಸಿ ಬಾಳೆಲ್ಲ ಪಟ್ಟೆ ಪೀತಾಂಬರ...

ಸೂರ್ಯಾಸ್ತ

ಇರುಳ ಗೂಳಿಯು ಜಿಗಿದು ಉಗಿದ ಬೆಳಕಿನ ಚಿಂದಿ ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ. ಮುರಿದ ಷರಟಿನ ಗುಂಡಿ ಬಿದಿಗೆ ಚ೦ದಿರ ದೂರ ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ *****

ನುಡಿಯಬೇಕು ಮದ್ದಲೆ

ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ...

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿ

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಮಣಿಗಿಳಿಯುವ ತನಕ ಬಾಳೆ ಇಲ್ಲ; ಬಳ್ಳಿ ಗಿಡ ಮರ ಎಲ್ಲ ಬೀಜದಲೆ ಇದ್ದರೂ ನೆಲದೊಳಗೆ ಕೃಪೆಯಿರದೆ ಸುಳ್ಳೇ ಎಲ್ಲ. ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಹಗಲಲ್ಲಿ ದಣಿವು ಆಲಸ್ಯ...

ಯಾತ್ರೆಯ ನಡುವೆ

ಮರೆಯಲ್ಲಿ ನಿಂತು ಮಣಿದಿಗಂತಗಳನ್ನು ಬರೆಯುವ ಸತ್ಯದ ತರಣಿಯೇ, ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ. ಈ ಮೊಗ್ಗು ಅರಳಿದ್ದು, ಹಂಬಲಕ್ಕೆ ಹೊರಳಿದ್ದು, ಮೆಚ್ಚಿದ ದುಂಬಿಯ ಹುಚ್ಚಿಗೆ ಕಾಯಿಬಿಟ್ಟು ಫಲಿಸಿದ್ದು ನಿನ್ನರಸಿ ಅಭಿನಯಿಸಿದ ಮಧುನೃತ್ಯದ...

ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ ಅದಕ್ಕಿಲ್ಲ ಸರಳಗತಿ ದಾರಿನೆರಳು ; ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು ಮಂಡೆ ಮೇಲೇ ಬಾಯಿಮಸೆವ ಬಿಸಿಲು. ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ ಸುರಿದ ಮರುಧರೆಯ ಅಮೂಲ್ಯ...

ಹೊಳೆಸಾಲಿನ ಮರ

ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು...

ನವವಸಂತ

ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ, ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ, ಸಾರದ ಸೇರದ ಎಂದೂ ಆರದ ಘನತರಣಿ, ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ. ಎದೆಯಾಳದಿ ಎವೆತೆರೆದಿವೆ ಗತಭವಗಳು ಹೊರಳಿ, ಎಂದಿನ...

ಶಿವಮೊಗ್ಗೆಯಲ್ಲಿ ಮಳೆ – ೧೯೪೬

ಹತ್ತು ದಿನದಿಂದ ಊರಲ್ಲಿ ರಚ್ಚಿಟ್ಟು ರಾಚುತ್ತಿದೆ ಮಳೆ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರಮೊಳೆ! ಊರಿನ ಕೆನ್ನೆಗೆ ಪಟಪಟ ಬಾರಿಸಿ ರೇಗಿಸಿ ಛೇಡಿಸಿ ಕೂಗಿ ತರಿಸುತ್ತಿದೆ ಎಲ್ಲರ ಎದೆಯಲ್ಲೂ ದಿಗಿಲು ತಿಂಗಳ ಹಿಂದೆ ಮಾತೇ ಬರದೆ...