ಸೂರ್ಯೋದಯ

ಕೆಂಪಿನ ಓಕುಳಿ ಸ್ನಾನದಲಿ, ಇಂಪಿನ ಕೋಗಿಲೆ ಗಾನದಲಿ, ಬಾನಿನ ಗದ್ದಿಗೆ ಏರಿದನು, ಭಾನುವು ಹೊಂದಲೆ ತೋರಿದನು. ಆ ದಿನನಾಥನ ಮೂರುತಿಗೆ ಆದವು ಹೂಗಳು ಆರತಿಗೆ; ಕೋಳಿಯು ಕಹಳೆಯ ಊದಿದುದು, ಗಾಳಿಯು ರಾಯಸ ಓದಿದುದು. *****...

ಚಂದ್ರನನ್ನು ತಾ!

ತಾರಮ್ಮಯ್ಯ, ತಂದು ತೋರಮ್ಮಯ್ಯ! ದೂರದ ಬಾನೊಳು ಏರಿದ ಚಂದ್ರನ ತಾರಮ್ಮಯ್ಯ ತಂದು ತೋರಮ್ಮಯ್ಯ! ಹರಿಯುವ ನೀರಿನ ಪರಿಯ ಬಾನಿನ ಮೇಲೆ ಇರುಳಲ್ಲಿ ಬೆಳ್ಳಗೆ ಅರಳಿದ ಹೂವನ್ನು, -ತಾರಮ್ಮಯ್ಯ ತಣ್ಣಗೆ ಮೊಸರಲ್ಲಿ ಬೆಣ್ಣೆ ಮುದ್ದೆಯ ಹಾಗೆ...

ಉದಯ ರಾಗ

ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್‍ಯನು ನೋಡುವನು, ಬಿಸಿಲೂಡುವನು; ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರದೂಡುವನು. ಬಂಗಾರದ ಚೆಲು ಬಿಸಿಲ ಕಿರೀಟದ...

ನಾಗಣ್ಣನ ಕನ್ನಡಕ

"ಓಡಿ ಬನ್ನಿರಿ! ಕೂಡಿ ಬನ್ನಿರಿ! ನೋಡಿ ಬನ್ನಿರಿ! ಗೆಳೆಯರೆ! ನೋಡಿ ನಮ್ಮಯ ಕನ್ನಡಕಗಳ! ಹಾಡಿ ಹೊಗಳಿರಿ, ಗೆಳೆಯರೆ! "ಊರುಗನ್ನಡಿ! ಉರುಟು ಕನ್ನಡಿ! ದೂರನೋಟದ ಕನ್ನಡಿ! ಓರೆಕಣ್ಣಿಗೆ ನೇರು ಕನ್ನಡಿ! ಮೂರು ಚವುಲಕೆ ಕೊಡುವೆನು. "ಹಸುರು...

ಹೊಗೆಯ ಗಾಡಿ

ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ, ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ಮಿಗೆ ಕಾದ ನೀರ ಹಬೆಯಿಂದ ಬಲು ಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ. ಸೋಲಿಪುದು ಗಾಳಿಯನ್ನು ಬಲು ವೇಗದಿಂದ; ಮೇಲೆ ಹೊಗೆಯುಗುಳುತಿಹುದೀ ಕೊಳವೆಯಿಂದ; ಕಾಲಕ್ಕೆ ಸರಿಯಾಗಿ...

ಉದ್ಯಮ

ಬಿಡಬೇಡ! ಕಬ್ಬಿಣದ ಮೊಳೆಯನ್ನು ಜಡಿಯೈ! ಬಿಡಬೇಡ! ಆಣಿಯಾ ತಲೆಗೊಂದು ಹೊಡಿಯೈ! ಬಿಡಬೇಡ! ಬಲದಿಂದ ಕಬ್ಬಿಣವ ಹಿಡಿಯೈ! ಬಿಡಬೇಡ! ಕಾದಿರಲು ಸಲೆಸಾಗ ಬಡಿಯೈ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ, ಕಟ್ಟಿ ಕೈಗಳ...

ಇಡು ಭಕ್ತಿ, ನಡೆ ಮುಂದೆ

ಅನುದಿನವು ಇಡು ಭಕ್ತಿಯನ್ನು ದೇವನಡಿಯಲ್ಲಿ ಅನುಸರಿಸು ಸನ್ಮಾರ್‍ಗವನೆ ನಿತ್ಯ ಮುದದಿ. ಎತ್ತಲುಂ ಕತ್ತಲೆಯು ಸುತ್ತಿಹುದು ದಾರಿಯನು ಕಿತ್ತುಬಿಡು ಭಯವನ್ನು, ಎತ್ತು ಪೌರುಷವಾ. ಅತ್ತಿತ್ತ ಕದಲದಿರು, ಚಿತ್ತವನು ಸ್ಥಿರಗೊಳಿಸು, ಎತ್ತರದೊಳಿದೆ ತಾರೆ, ಉತ್ತಮದಿ ನಡಿಸಲ್. ಕಡು...

ಸ್ಥಿರ ಪ್ರಯತ್ನ

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು...

ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ...