ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ ಒಂದಾಗಿರಬೇಕು, ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ ಆಲ್ಕೋಹಾಲಿಕ್ಕು, ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ ಹುಣ್ಣಿಮೆಗಳ ಮಧ್ಯೆ ತೊಳಲಾಡೋ ಅಬ್‌ನಾರ್ಮಲ್ ಡಿಪ್ರೆಸ್ಸಿವ್ - ಮೇನಿಯಕ್ಕು....
ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ ಆಸಾಮಿ *****
ಇಂದು ಮುಂಜಾನೆ ಸೂರ್ಯ ಮಂಜಿನ ಕ್ರೀಮು ಹಚ್ಚಿ, ತೆಳುಮೋಡದ ಸ್ಕ್ರೀನು ಮುಸುಕಿ ಹಾಕಿ ಥೇಟ್ ಚಂದ್ರನಂತೆ ಕಾಣುತ್ತಿದ್ದ, ಕೆರೆಯೊಳಗಿನ ಅವನ ಪ್ರತಿಬಿಂಬ ಹುಣ್ಣಿಮೆಯ ಚಂದ್ರನಂತೆಯೇ ಕಾಣುತ್ತಿತ್ತು. ಆದರೆ ಹತ್ತೇ ನಿಮಿಷದಲ್ಲಿ ಹತ್ತಿಕೊಂಡುರಿಯುವ ಅವನ ಮುಖ...