ಇನ್ನೇನು ಬೇಕು?

ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು ಉಸಿರಾಡಲು ಒಂದಿಷ್ಟು ಗಾಳಿ ಇನ್ನೇನು ಬೇಕು? ಕಚ್ಚಲೊಂದು ಬಣ್ಣದ ಚೆಂಡು ಚಚ್ಚಲೊಂದು ಮರದ ಕುದುರೆ ಇನ್ನೇನು ಬೇಕು? ಬರೆಯಲೊಂದು ಮಣಿಕಟ್ಟಿನ ಸ್ಲೇಟು ಬತ್ತಾಸು ಕೊಳ್ಳಲು ಆರು ಕಾಸು ಇನ್ನೇನು...

ಪವಿತ್ರವಾದ ಸಮಯ

ಜಗತಿನಲ್ಲಿ ಈಗ ಎಲ್ಲಿ ಯಾರೇ ಅಳುತ್ತಿರಲಿ, ಕಾರಣವಿಲ್ಲದೆ ಅಳುತ್ತಿದ್ದರೆ, ನನಗಾಗಿ ಅಳುತಿದ್ದಾರೆ. ಜಗತ್ತಿನಲ್ಲಿ ಈಗ ಎಲ್ಲಿ ಯಾರೇ ನಗುತ್ತಿರಲಿ, ಕಾರಣವಿಲ್ಲದೆ ನಗುತ್ತಿದ್ದರೆ, ನನ್ನ ಕಂಡು ನಗುತ್ತಿದ್ದಾರೆ. ಜಗತಿನಲ್ಲಿ ಈಗ ಎಲ್ಲಿ ಯಾರೇ ಹೋಗುತ್ತಿರಲಿ, ಕಾರಣವಿಲ್ಲದೆ...

ಮರಿ ಪಿಶಾಚಿ ಪದ್ಯ

ಭಾಗ-೧ ಒಮ್ಮೆ ಒಂದು ಮರಿಪಿಶಾಚಿ ಊರ ಸುತ್ತಲದಕೆ ತೋಚಿ ಪೊಟರೆಯಿಂದ ಇಳಿಯಿತು ಧೈರ್ಯದಿಂದ ನಡೆಯಿತು ನಡೆದು ನಡೆದು ಬರಲು ಕೊನೆ ಬಿತ್ತು ಕಣ್ಣಿಗೊಂದು ಮನೆ ಬಾಗಿಲಿಗೆ ಬೀಗವಿತ್ತು ಕಿಟಕಿ ಮಾತ್ರ ತೆರದೆ ಇತ್ತು ಅರೆ!...

ಬೀಜ ಯಜ್ಞ

ಮರುಳ... ‘ಕುಡಿ’ಹಣ್ಣೆಂದು ಮೆಟ್ಟಿದೆಯಾ? ಹೆಂಗೂಸೆಂದು ಅಟ್ಟಿದೆಯಾ? ನಾನು ತಾಯಿಯಲ್ಲ ನಾನು ಹೆಂಡತಿಯಲ್ಲ ನಾನು ಮಗಳಲ್ಲ ತೊಲಗಾಚೆ ಇನ್ನು ನಾ ನಿನ್ನ ಪೊರೆವವಳಲ್ಲ... ನಾನು ಮಮತಯಲ್ಲ ನಾನು ಸಹನೆಯಲ್ಲ ನಾನು ಶಾಂತಿಯಲ್ಲ ತೊಲಗಾಚೆ ಇನ್ನು ನಾ...

ಏಕಾಂತ

ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು...

ಏನಂತಿ

ಏನಂತಿ ವಾಸಂತಿ ಬಾ ನನ್ನ ಕೂಡೆ ಸಂತಿ ತಲೆ ತುಂಬ ಸೇವಂತಿ ಮುಡಿಸುವೆನು ಏನಂತಿ ದೂರದ ಹಾದಿಯಲ್ಲ ಯಾರದು ಭೀತಿಯಿಲ್ಲ ಸಾಗೋಣ ಮೆಲ್ಲ ಮೆಲ್ಲ ವಾಸಂತಿ ವಾಸಂತಿ ಏನಂತಿ ರೂಪವಂತಿ ಬಳೆಯಂಗಡಿಯುದ್ದಕು ಎಷ್ಟೊಂದು ಬಣ್ಣ...

ಕರೇ ಮನುಷ್ಯಾ ದಿಗಿಲು ಯಾಕ?

ಕರೇ ಮನುಷ್ಯಾ ದಿಗಿಲು ಯಾಕ? ಮಲ್ಲಿಗೆ ಹುಡುಗಿ ಒಲಿದಾಳ ನಿನಗ ಕಣ್ಣನಾಗ ಚಿಕ್ಕಿ ಬಳಗ ಸುರಗಿ ಕ್ಯಾದಗಿ ಎದೆಯಾ ಒಳಗ ಹಾಡೊ ಕೋಗಿಲ ಕೂಳ್ಳಿನ ಕೆಳಗ ಆಡೊ ನವಿಲು ಹೆಜ್ಜೆಯ ತಳಗ ಬೆಂಕಿಯ ದೇಹಾ...

ಯಾರು ಕರೆದರು

ಕೋಳಿ ಕೂಗುವ ಮುನ್ನ ಯಾರು ಕರೆದರು ನನ್ನ ಹೇಳು ಮನಸೇ ಹೇಳು ಕತೆಯ ನಿನ್ನ ಗುರುತು ಪರಿಚಯವಿರದ ದೇಶದಲಿ ನಾನಿರಲು ಯಾರು ಬಯಸಿದರಿಂದು ನನ್ನ ಕಾಣಲೆಂದು ಯಾರೆಂದು ನೋಡಿದರೆ ಬಾಗಿಲಲಿ ಯಾರಿಲ್ಲ ಎಲ್ಲಿ ಹೋದರು...

ಕೋವಿಯಲಿ

ಕೋವಿಯಲಿ ಜೀವ ಅಂಕುರಿಸುವ ಮೊದಲು... ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ...