ಹನಿಗವನ ಗೊರಕೆ ಶ್ರೀವಿಜಯ ಹಾಸನ October 25, 2020March 14, 2020 ಇರುಳೆಂದರೆ ಹೆದರಿಕೆ ನಿಜ ಹೇಳಬೇಕೆ? ಗಂಡನ ಗೊರಕೆ! ***** Read More
ಹನಿಗವನ ಮೊಗ್ಗು ಶ್ರೀವಿಜಯ ಹಾಸನ October 18, 2020March 14, 2020 ಬಿಸಿಲಿನ ಕಾವಿಗೆ ಅರಳುವುದೇ ಮಲ್ಲಿಗೆ ಮೊಗ್ಗು ಬೆಂದೊಡಲ ಕಾವಿಗೆ ಮೂಡುವುದೇ ನಗೆಯ ಬುಗ್ಗೆ ***** Read More
ಹನಿಗವನ ಮಂಗಮಾಯ ಶ್ರೀವಿಜಯ ಹಾಸನ October 11, 2020March 14, 2020 ಭಾರತೀಯ ನಾರಿ ತುಳಿದಿರುವ ದಾರಿ ನವೀನತೆಗೆ ಬೆರಗಾಗಿ ಆಧುನಿಕ ಪರಿ ಕುಂಕುಮ ಬಳೆ ಕರಿಮಣಿ ಎಲ್ಲಾ ಕಲಾಮಯ ಭಾರತೀಯ ಸಂಸ್ಕೃತಿ ಮಂಗಮಾಯ ***** Read More
ಹನಿಗವನ ದೇವರು ಶ್ರೀವಿಜಯ ಹಾಸನ October 4, 2020March 14, 2020 ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ದೇವರಿಲ್ಲ ಎನ್ನುವ ಕಷ್ಟಗಳ ಸುರಿಮಳೆಯಾದಾಗ ದೇವರೆಲ್ಲೆಂದು ಹುಡುಕುವ ***** Read More
ಹನಿಗವನ ಅಕ್ಕರೆ ಶ್ರೀವಿಜಯ ಹಾಸನ September 27, 2020March 14, 2020 ತಾತಮುತ್ತಾಂದಿರಿಗೆ ಮೊಮ್ಮಕ್ಕಳೆಂದರೆ ಬಲು ಅಕ್ಕರೆ ಅನುವಂಶೀಯವಾಗಿ ಬಿಟ್ಟುಹೋಗಿದ್ದಾರೆ ರಕ್ತದಲ್ಲಿ ಅಪಾರ ಸಕ್ಕರೆ ***** Read More
ಹನಿಗವನ ಕಿರುನದಿ ಶ್ರೀವಿಜಯ ಹಾಸನ September 20, 2020March 14, 2020 ಕವನ ಭೋರ್ಗರೆಯುವ ಜಲಪಾತ ಚುಟುಕು ಶಾಂತತೆಯ ಕಿರುನದಿ ***** Read More
ಹನಿಗವನ ಭರವಸೆ ಶ್ರೀವಿಜಯ ಹಾಸನ September 13, 2020March 14, 2020 ನಿರಾಶೆ ಹತಾಶೆಗಳಿಗೆ ಜೀವ ಮುರುಟಿಕೊಳ್ಳುತ್ತದೆ ಮುಟ್ಟಿದರೆ ಮುನಿಯಂತೆ ಆಸೆ ಭರವಸೆಗಳ ಗಾಳಿ ಸೋಕಿದೊಡನೆ ಕ್ಷಣದಲ್ಲಿ ತೆರೆದುಕೊಳ್ಳುತ್ತವೆ ***** Read More
ಹನಿಗವನ ಭಾವನೆಗಳು ಶ್ರೀವಿಜಯ ಹಾಸನ September 6, 2020March 14, 2020 ಭಾವನೆಗಳು ಹೊರಹೊಮ್ಮುತ್ತವೆ ಭೋರ್ಗರೆಯುವ ಪ್ರವಾಹದಂತೆ ಕಾಗದ ಪೆನ್ನು ಕೈಗೆತ್ತಿಕೊಂಡಾಗ ಮರೆಯಾಗುತ್ತವೆ ಬರಡು ಭೂಮಿಯಂತೆ ***** Read More
ಹನಿಗವನ ನತದೃಷ್ಟ ಶ್ರೀವಿಜಯ ಹಾಸನ August 30, 2020March 14, 2020 ಕ್ಷಣಿಕ ಸುಖಕ್ಕೆ ಬೆರಗಾಗಿ ದೀಪವನ್ನು ಚುಂಬಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತದೆ ನತದೃಷ್ಟ ಪತಂಗ ***** Read More
ಹನಿಗವನ ಹಿತನುಡಿ ಶ್ರೀವಿಜಯ ಹಾಸನ August 23, 2020March 14, 2020 ಕುಡಿಯ ಬೇಡವೆಂದರೂ ಕೇಳಲಿಲ್ಲ ಹಿತನುಡಿ ಕುಡಿದು ಕುಡಿದು ತಂದುಕೊಂಡ ಸಾವಿನಗಡಿ ಆಮೇಲೆ ಬುದ್ಧಿ ಬಂದರೇನು? ಬಿಡಿ ವ್ಯರ್ಥವಾಯಿತು ಮಾನವಜನ್ಮ ನೋಡಿ ***** Read More