ಬೀಜ ಯಜ್ಞ

ಮರುಳ... ‘ಕುಡಿ’ಹಣ್ಣೆಂದು ಮೆಟ್ಟಿದೆಯಾ? ಹೆಂಗೂಸೆಂದು ಅಟ್ಟಿದೆಯಾ? ನಾನು ತಾಯಿಯಲ್ಲ ನಾನು ಹೆಂಡತಿಯಲ್ಲ ನಾನು ಮಗಳಲ್ಲ ತೊಲಗಾಚೆ ಇನ್ನು ನಾ ನಿನ್ನ ಪೊರೆವವಳಲ್ಲ... ನಾನು ಮಮತಯಲ್ಲ ನಾನು ಸಹನೆಯಲ್ಲ ನಾನು ಶಾಂತಿಯಲ್ಲ ತೊಲಗಾಚೆ ಇನ್ನು ನಾ...

ಕರೇ ಮನುಷ್ಯಾ ದಿಗಿಲು ಯಾಕ?

ಕರೇ ಮನುಷ್ಯಾ ದಿಗಿಲು ಯಾಕ? ಮಲ್ಲಿಗೆ ಹುಡುಗಿ ಒಲಿದಾಳ ನಿನಗ ಕಣ್ಣನಾಗ ಚಿಕ್ಕಿ ಬಳಗ ಸುರಗಿ ಕ್ಯಾದಗಿ ಎದೆಯಾ ಒಳಗ ಹಾಡೊ ಕೋಗಿಲ ಕೂಳ್ಳಿನ ಕೆಳಗ ಆಡೊ ನವಿಲು ಹೆಜ್ಜೆಯ ತಳಗ ಬೆಂಕಿಯ ದೇಹಾ...

ಕೋವಿಯಲಿ

ಕೋವಿಯಲಿ ಜೀವ ಅಂಕುರಿಸುವ ಮೊದಲು... ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ...

ಸಾವು

ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ...

ನಾಳೆ

ನಾಳೆ ಕೊಯ್ಲಾಗುವುದು ಹಕ್ಕಿಗಳಿಗೆ ಹುತ್ತರಿ ಹಾಡು ವಿದಾಯ ಹೇಳುವುದು ತೆನೆಗಳೊಡನೆ ಆಟವಾಡಲು ಬರುವ ಸುಳಿಗಾಳಿ ನಿರಾಶೆಯಿಂದ ಮರಳಬೇಕಾಗುವುದು ಇನ್ನಿಲ್ಲಿ ನರಿ ಊಳಿಡದು ಇಲಿ ಬಿಲ ತೋಡದು ಕವಣೆ ಬೀಸುವ ಹುಡುಗರಿಗಿನ್ನು ಕೆಲಸವಿರದು ಬೆದರು ಬೊಂಬೆಯೂ...

ಕಣ್ಣು, ಬೂದಿ ಮತ್ತು ಜಗತ್ತು

ಆ ಕಣ್ಣು ನೀರು ನೆಲ ಆಕಾಶ ತನ್ನಲ್ಲೆ ಅಂದಿತು ಆ ಕಣ್ಣು ಮೋಹ ಮದ ಮತ್ಸರ ತನ್ನಲ್ಲೆ ಅಂದಿತು ಆ ಕಣ್ಣು ಕ್ರಿಮಿ ಕೀಟ ಪಶು ಪಕ್ಷಿಗೆ ಕನ್ನಡಿ ತಾನೆಂದಿತು ಆ ಕಣ್ಣು ಹುಟ್ಟು-ಸಾವು...

ಬೇಡ…

ಭಯ ಹುಟ್ಟಿಸಬೇಡ... ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ... ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ... ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ... ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ... ಮೊಟ್ಟೆಗೆ ಕಾವಿಟ್ಟು ಮರಿ ಮಾಡುತ್ತೇನೆ ಮುನಿಯಬೇಡ... ಮಾರನಿಗೊಲಿದು ಮೈ ಮರೆಯುತ್ತೇನೆ...

ಮಾತನಾಡಿಸಬೇಕು

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನೂ ಕರಗುತ್ತಿರುವ ಮಂಜನ್ನೂ ಮಾತನಾಡಿಸಬೇಕು ಆಕಾಶ-ಕಾಯದೊಳಗೆ ಅವಿನಾಶಿ ಸೂರ್‍ಯ! ದೇವರೆ... ಇವರದ್ದು...

ಕಾಲು ದಾರಿಯೆ ಸಾಕು…

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ...

ಮೋಂಬತ್ತಿ

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ... ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕನ...