ನಾ ಹಾಡಿರಲು…. ಏಲ್ಲೊ ಒಂದು ಮನ ಕುಣಿಯುತಿಹುದು…..
ನೀ… ಹಾಡಲು ಈ…ಜಗವೆ ಕುಣಿಯುವುದು…..
ಬದುಕು ರಂಗು ರಂಗೋಲಿಯಾಗಿದೆ ಕನಸಿನ ಬೆಟ್ಟದಲಿ…
ನಾ ನಾಚಿಹೆನು ಜಗತ್ತಿನ ಬಿಂಕ ನೋಟಕೆ……
ಸಂತೋಷದ ಮಡಿಲಿನಲಿ ಮಲಗಿಹೆ….
ನಿನ್ನ ಪ್ರೇಮವ ಪಡೆದು….
ಪುನಃ ಪುನಃ ನೋಡುವಾಸೆ….. ನಿನ್ನ ಪ್ರೇಮದ ಕಣ್ಣನು….
ಕಾಡಿಹೆ ಏಕೆ ಕನಸಿನಲಿ ಬಂದು….
ಆಸೆ ಮುಗಿಲಿನಲಿ… ನಾ ನಿಂತಿಹೆ ಪಾತಾಳದಲಿ….
ಬಾ… ಜೀವದ ಸ್ಪೂರ್ತಿ ನೀನು…
ನನ್ನ ಕನಸಿನ ನಾಡಿಗೆ…
ತೇಲಿಸು… ನೀ ನನ್ನ ಬದುಕಿನಾಚೆ… ನಾವಿಕೆಯಾಗಿ…..
ಕಾದಿಹೆನು ನಾ… ಉಸಿರು ಬಿಗಿ ಹಿಡಿದು…
ಜೀವದಂಚಿನಲಿ…. ನಿನ್ನ ಪ್ರೇಮವೆಂಬ… ಸ್ವಪ್ನಕೆ…..
-ಕಾಯುವಾಸೆ……
*****