Home / ಲೇಖನ / ವಿಜ್ಞಾನ / ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಇತ್ತೀಚೆಗೆ ಮನುಷ್ಯನಲ್ಲಿ ಉಂಟಾಗುವ ಅಂಗ ವೈಕಲ್ಯತೆಗಳ ಬಗೆಗೆ ಹಲವು ಶೋಧನೆಗಳು ನಡೆದಿದ್ದು ಕೆಲವು ಸತ್ಯಗಳು ಈ ರೀತಿ ಹೊರಬಿದ್ದಿವೆ.
೧. ಹೆಣ್ಣಿನ ಅಂಡಾಣುವು ಗಂಡಿನ ರೇತುಕಣವು ಹೊರಬಿದ್ದ ಮೇಲೆ ಹೊತ್ತುಕಳೆದಂತೆಲ್ಲ ಅವುಗಳ ಚೈತನ್ಯ ಕುಂದುತ್ತ ಬರುತ್ತದೆ. ಸಾಕಷ್ಟು ಚೈತನ್ಯವಿಲ್ಲದಂತಹ ಇಂಥವು ಒಂದುಗೂಡಿದರೆ ಹುಟ್ಟುವ ಪಿಂಡ ಸರಿಯಾಗಿ ಬೆಳೆಯದೇ ದುರ್ಬಲವಾಗುವದು ಇಲ್ಲವೇ ವಿಕಲಾಂಗವಾಗುವದು.

೨. ಗರ್‍ಭವತಿಯು ಔಷಧಿಯ ಪೂರ್‍ವಾಪರ ತಿಳಿಯದೇ ಸೇವಿಸುವದರಿಂದ ವಿಕಲಾಂಗ ಶಿಶುವಿಗೆ ಜನ್ಮಕೊಡುವ ಸಂಬಂಧಗಳು ಹೆಚ್ಚು.

೩. ಗರ್‍ಭಿಣಿ ಸ್ತ್ರೀಯ ಒಳಾಂಗಣವನ್ನು ಪರೀಕ್ಷಿಸುವ ಸಲುವಾಗಿ ಕ್ಷ-ಕಿರಣ ಸಹಾಯದಿಂದ ಛಾಯಾಚಿತ್ರ ತೆಗೆಯಬೇಕಾಗಬಹುದು. ಬೆಳೆಯುವ ಭ್ರೂಣದ ಮೇಲೆ ಈ ಕ್ಷ- ಕಿರಣಗಳು ಕೆಲವು ಸಲ ದುಷ್ಪರಿಣಾಮ ಬೀರಿ ವಿಕಲತೆನ್ನುಂಟು ಮಾಡಬಹುದು.

೪. ಗರ್‍ಭಧಾರಣೆಯ ಸಮಯದಲ್ಲಿ ಈ ವರ್ಣ ತಂತುಗಳ ಸಮ್ಮಿಲನ ಅಸ್ವಾಭಾವಿಕ ರೀತಿಯಲ್ಲಿ ಉಂಟಾದರೆ ಅಥವಾ ಪ್ರಕೃತಿಗೆ ವಿರುದ್ದವಾದ ಕ್ರಮದಲ್ಲಿ ಉಂಟಾದರೆ ವಿಕಲಾಂಗ ಶಿಶುಗಳು ಜನಿಸುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

೫. ವಿವಿಧ ಅಂಟುರೋಗಗಳಿಂದ ನರಳುತ್ತಿರುವ ಸ್ತ್ರೀಯು ವಿಕಲಾಂಗ ಶಿಶುಗಳಿಗೆ ಜನ್ಮ ನೀಡುವ ಸಂಭವವಿದೆ. ಗರ್ಭಿಣಿಸ್ತ್ರೀಯು ಕೋಪಿಷ್ಟೆಯಾದರೆ ಅವಳ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡಗಳು ಜನಿಸುವ ಶಿಶುವಿನ ಮೇಲೆ ಭೀಕರ ಪರಿಣಾಮ ಬೀರಬಲ್ಲವು. ಸ್ತ್ರೀಯು ನಿರ್ನಾಳ ಗ್ರಂಥೀಗಳಲ್ಲಿ ಪ್ರಮುಖವಾದ ಪಿಟ್ಯುಟರಿ ಗ್ರಂಥಿಯ ಸ್ರಾವದಲ್ಲಿನ ಹೆಚ್ಚಳ ಅಥವಾ ಇಳುವರಿಯಿಂದಾಗಿ ಉದ್ದನೆಯ ಅಥವಾ ತೆಳ್ಳನೆಯ ಶಿಶುವಿಗೆ ಜನ್ಮನೀಡಬಹುದು.

೬. ಕೂಡಿದ ಅಂಡಾಣುಗಳು (ಯುಗ್ಮ ಜೀವಕಣಗಳು) ಬೇರೆ ಬೇರೆಯಾಗಿದ್ದರೆ ಅವು ಅವಳಿ ಜವಳಿಯಾಗುತ್ತವೆ.

೭. ಅನೇಕ ಬಾರಿ ಗರ್ಭದಲ್ಲಿ ಕೂಡಿದ ಯುಗ್ಮಜೀವಕಣಗಳು ಕೋಶ ವಿಭಜನೆಯ ವಿವಿಧ ಹಂತಗಳಲ್ಲಿ ಬೇರ್ಪಡದೆ ಜೊತೆಗೂಡಿ ಇರುತ್ತವೆ. ಇದರಿಂದ ಹುಟ್ಟುವ ಶಿಶುಗಳಲ್ಲಿ ಸಾಮಾನ್ಯವಾಗಿ ತಲೆ, ಹೊಟ್ಟೆ, ಬೆನ್ನು ಮುಂತಾದ ಅಂಗಗಳು ಒಂದುಗೂಡುವ ಸಂಭವವಿದೆ.

೮. ಕಡುಬಡ ಜನರು ಆರೋಗ್ಯವಿಲ್ಲದೇ, ಜೀವಸತ್ವಗಳ ಆಹಾರಗಳ ಕೊರತೆ ಇದ್ದವರು ಪೌಷ್ಟಕಾಂಶಗಳ ಕೊರತೆ ಇದ್ದವರೂ ಜೀವ ಧಾತುಗಳ ಕೊರತೆ ಇದ್ದವರು ಇಂದಿನ ವಿಷಕಾರ ಮದ್ದುಗಳ ಗೊತ್ತು ಗುರಿ ಇಲ್ಲದ ಸೇವನೆ ಮಾಡುವ ಗಂಡ ಹೆಂಡಿರಿಂದ ಹುಟ್ಟುವ ಮಕ್ಕಳು ವಿಕಲಾಂಗವಾಗುತ್ತವೆ.

೯. ಇಂಥಹ ವೈಕಲ್ಯತೆಗಳಿಗೆ ಪ್ರಮುಖ ಕಾರಣಗಳನ್ನೂ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅನುವಂಶೀಯ ಮತ್ತು ಪರಿಸರದ ಪರಿಣಾಮಗಳು, ಕೆಲವು ವೈಕಲ್ಯತೆಗಳು ತಂದೆ, ಅಥವಾ ತಾಯಿಯಿಂದ ಕಾರಣವಾಗಿರಬಹುದು. ಮಗುವು ಕೈ ಬೆರಳು ಇಲ್ಲವೇ ಕಾಲುಬೆರಳಗಳನ್ನು ಮಾಮೂಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿರುವುದು ಸಂತತಿಯಿಂದ ಸಂತತಿಗೆ ಸಾಗಣೆಯಾಗಬಹುದು.

೧೦. ಅಂಗವೈಕಲ್ಯತೆಗೆ ಇನ್ನೊಂದು ಕಾರಣ ಸುತ್ತಲಿನ ಪರಿಸರ ಪರಮಾಣು ವಿಕಿರಣಗಳ ಪರಿಣಾಮಗಳು ಭ್ರೂಣದ ಮೇಲೆ ಬಹಳ ಪ್ರಭಾವ ಬೀರುವವು. ಅಂಥಹ ಪ್ರಭಾವವನ್ನು ಈಗಲೂ ನಾವು ಜಪಾನ್‌ನಲ್ಲಿ ಕಾಣಬಹುದು. ಮನುಷ್ಯ ಇಂದು ಕೃತಕವಾಗಿ ನಿರ್ಮಿಸುತ್ತಿರುವ ವಿಕಿರಣ ಕ್ರಿಯಾಶಕ್ತಿಯು ಸುತ್ತಲಿನ ಪರಿಸರವನ್ನು ಮಲೀನಗೊಳಿಸಿ ಭ್ರೂಣಗಳ ವಿಕಸನದ ಮೇಲೆ ದುಷ್ಪರಿಣಾಮ ಬೀರುತ್ತವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...