ಬೆರಳ ಕೇಳಿದರೆ ಕೈಯ ಕೊಡುವವನು
ಕೈಯ ಕೇಳಿದರೆ ಕೊರಳನೆ ಕೊಡುವವನು
ನಮ್ಮ ಏಕಲವ್ಯ
ಕೊರಳ ಕೇಳಿದರೆ ಒಡಲನ ಕೊಡನೆ
ತನ್ನ ಪ್ರಾಣವ ತೆರನೆ
ಹೇ ಗುರು ದ್ರೋಣ
ಆ ಶಿಷ್ಯನಿರುವಂಥ ಗುರುಗಳೆ ಗುರುಗಳು
ಆ ಕತೆಯಿರುವಂಥ ಭಾರತವೆ ಭಾರತ
ಆವತ್ತಿಗಾ ಕತೆ ಈವತ್ತಿಗೇನೋ
ಹೇ ಗುರು ದ್ರೋಣ
ಕಾಲ ಬದಲಾಗುವುದು ಕತೆ ಬದಲಾಗುವುದು
ಗುರು ಬದಲಾಗುವರು ಶಿಷ್ಯರು ಬದಲಾಗುವರು
ಗುರುಭಕ್ತಿಯೆನ್ನುವುದು ನಗೆಪಾಟಲಾಗುವುದು
ಏಕಲವ್ಯ ಬರೆ ಭಿಲ್ಲನಾಗುವನು
ಹೇ ಗುರು ದ್ರೋಣ
ಭಿಲ್ಲನೇ ಅವನು ಭಿಲ್ಲನೆನ್ನುವುದು ಸರಿ
ಬಿಲ್ಲುವಿದ್ಯೆಯಲಿ ಪರಿಣತನು ಅಹುದು
ಅವನಿಗೇತಕೆ ಒಂದು ಮೂರುತಿಯ ಭಯಭಕುತಿ
ಅದು ಎಂಥ ಗುರುವೊ ಅದು ಎಂಥ ಋಣವೊ
ಹೇ ಗುರು ದ್ರೋಣ
ಕತೆ ಯಾಕಿಲ್ಲಿ ತಡೆಯುತ ಹೋಯಿತೊ
ಸಾಮ್ರಾಜ್ಯಗಳ ತಲೆ ಮುಗಿಯಿಸಿತೊ
ಕಲಿಸಿದ ಗುರು ಕಲ್ಪಿಸಿದ ಗುರು ಮನದೊಳು ಸಂಕಲ್ಪಿಸಿದ ಗುರು
ಕನಸಲಿ ಕಾಣಿಸಿದ ಗುರು
ಎಲ್ಲ ಗುರುಗಳು ಜಗದಾದಿ ಗುರುವೆಂದು
ಶರಣಾಯಿತೊ
ಹೇ ಗುರು ದ್ರೋಣ
*****