ತಿಮ್ಮ ಸ್ವಲ್ಪ ಪೆದ್ದ. ನಲವತ್ತಾದರು ಮದುವೆಯಾಗಿರಲಿಲ್ಲ. ಶ್ರೀಮಂತ ಕನ್ಯೆಯೊಬ್ಬಳನ್ನು ನೋಡಲು ಮನೆಯವರೆಲ್ಲಾ ಹೋಗಿದ್ದರು. ತಿಮ್ಮನ ತಾಯಿ ಮೊದಲೇ ಹೇಳಿದ್ರು, ಹೋದಾಗ ಹುಡುಗಿ ಮನೆಯವರೆದರು ದೊಡ್ಡ ದೊಡ್ಡ ಮಾತನಾಡೆಂದು. ಹುಡುಗಿಯ ಊರಿಗೆ ಬಸ್ಸಲ್ಲೇ ಹೋಗಿ ಅಲ್ಲಿಂದ ಕಾರುಮಾಡಿಸಿಕೊಂಡು ಹೋದರು. ಹುಡುಗಿ ಕಡೆಯವರು ಕಾರಿನಲ್ಲಿ ಬಂದಿರಾ ಎಂದಾಗ ತಮ್ಮ “ಇಲ್ಲ ಬಸ್ಸಿನಲ್ಲಿ ಬಂದೆ ಎಂದನು. ಯಾಕೆಂದ್ರೆ ಕಾರಿಗಿಂತ ಬಸ್ಸೇ ದೊಡ್ಡದಲ್ಲ.
ಹುಡುಗಿಯ ತಾಯಿ ಕೇಳಿದರು. “ನಿಮಗೆ ಲೋಟದಲ್ಲಿ ಕಾಫಿ ಕೊಡ್ಲಾ?”
ಆಗ ತಿಮ್ಮ ಹೇಳಿದ “ಬೇಡ ನಮಗೆ ಚೊಂಬಿನಲ್ಲಿ ಕೊಡಿ” ಯಾಕೆಂದರೆ ಲೋಟಕ್ಕಿಂತ ಚೊಂಬೆ ದೊಡ್ಡದಲ್ಲ.
ಸ್ವಲ್ಪ ಹೊತ್ತಿನ ನಂತರ ತಿಮ್ಮ ಸಣ್ಣದಾಗಿ ಕೆಮ್ಮಿದ. ಅಗ ಹುಡುಗಿಯ ತಂದೆಯು ಕೇಳಿದ, “ನಿಮಗೆ ಕೆಮ್ಮೆ?”
ಆಗ ತಿಮ್ಮ ಹೇಳಿದ “ಇಲ್ಲ ನನಗೆ ಟಿಬಿ ಕಾಯಿಲೆ ಇದೆ”, ಯಾಕೆಂದರೆ ಕೆಮ್ಮಿಗಿಂತ ಟಿಬಿ ದೊಡ್ಡ ಕಾಯಿಲೆಯಲ್ಲವೇ.
*****