ಪ್ರಶ್ನೆಗಳು

ಎಲ್ಲಿ ನೀನು, ನಿನ್ನೆ ನೆಲೆಯು,
ತಿಳಿವುದೆಂತು ನಿನ್ನೊಳದನಿ,
ಬಣ್ಣವೇರಿ ನಿಂತ ಮೊಗಕೆ,
ಕಾಣಬಹುದೆ ನಿಜ ದನಿ?
ವಿಸ್ತೃತ ಜಗವೆ ಕಿರಿದು ಮಾಡಿ
ಕೀರ್ತಿ ಶಿಖರವೇರಿ ನಿಂತು
ನನ್ನ-ನಿನ್ನ ದೂರಮಾಡಿದೆ,
ಸರಕು-ಸಂಸ್ಕೃತಿ ದಾಳದಲ್ಲಿ
ಏನೆಲ್ಲ ಕಳೇದೀಡಾಡಿದೆ….?
ಬೆಳೆದೆ ಬೆಳೆದೆ ಬರಿದೆ ಬೆಳೆದೆ…?
ಸಣ್ಣ ಸಣ್ಣವನಾಗಿಯುಳಿದೆ…!
ಯಾವ ಕಾರಣ… ನಿನ್ನ ಹರಣ…
ಮಾರಿ ಮಸಣಕೆ ತೋರಣ…!
ತೈಲ ತೀರಿದಾ ಹಣತೆಯಂತೆ…
ದಿನವು ಕಮರಿದೆ ಚಿತೆಯಲಿ
ನಗುವುದೆಂತಿನ್ನು ನೀನು
ಪ್ರೀತಿಸೆಲೆಯ ಬರದಲಿ
ಮಾತೇ ಇರದ ಶೂನ್ಯ ಮುಖದಲಿ

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿದ್ದಿಯಬೇ ಮುದುಕಿ
Next post ಕುಂಬಾರಕಿ ಈಕಿ ಕುಂಬಾರಕಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…