ಆವೊತ್ತು….

ಬಾಲ್ಯದಲ್ಲಿ ನಾನು ಯಾವಾಗಲೂ ಸುಳ್ಳಿನ ಮಿಠಾಯಿ ಮೆಲ್ಲುತ್ತಿದ್ದೆ. ಲಾಭ-ನಷ್ಟದ ಪರಿವೆಯಿಲ್ಲದೆ ಸುಳ್ಳಿನ ಮೊಗ್ಗುಗಳನ್ನು ಪೋಣಿಸಿ ಮಾಡುತ್ತಿದ್ದೆ. ಈಗನಿಸುತ್ತದೆ ಆವೊತ್ತಿನ ಪ್ರತಿಯೊಂದು ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು ಕಲ್ಪನೆಯ ಅಪ್ರತಿಮ ಸೌಂದರ್ಯವಿತ್ತು.

ಕೃಷ್ಣ ಹೇಳಿದ್ದು

ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ....