Home / ಕವನ / ವಚನ

ವಚನ

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು – ವಿಜ್ಞಾನೇಶ್ವರಾ *****...

ಅಧಿಕ ಇಳುವರಿಗೆಂದೇನೇನೋ ಮಾಡುತಲಿರಲು ಅಧಿಕವಾಗಿಹುದಲಾ ಎಮ್ಮೊಳಗೆ ರೋಗರುಜಿನಗಳು ಬದನೆ ಬೆಂಡೆಯೊಳಿದ್ದ ರೋಗವನಲ್ಲಿಂದಲೋಡಿಸ ಲದುವೆ ಬಂದಡರಿಹುದೆಮ್ಮ ತನುವಿನೊಳು ಕಾದುವಾ ವಿಷವದರ ಹಿಂದು ಹಿಂದಿನೊಳು – ವಿಜ್ಞಾನೇಶ್ವರಾ *****...

ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? – ವಿಜ್ಞಾನೇಶ್ವರಾ ***...

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? – ವಿಜ್ಞಾನೇಶ್ವರಾ *****...

ವಿಧವಿಧದೊಳಿಲ್ಲಿರ್‍ಪ ಜೀವಕೆಲ್ಲಕು ಹುದುಗಿಹುದಲ್ಲಲ್ಲೇ ಪ್ರತ್ಯೇಕದನ್ನಡುಗೆ ಅದಕೆಂದೆ ಇಷ್ಟೊಂದು ಹಸುರುಡುಗೆ ಅದರನ್ನ ಇದಕಲ್ಲ ಕಿತ್ತೆಸೆವ ಕೇಡಿಲ್ಲ ಆದೊಡಂ ಮನಜನಿದಕಪವಾದವಲಾ – ವಿಜ್ಞಾನೇಶ್ವರಾ *****...

ವಿಷವನೌಷಧಿಯೆಂದು ಎಮ್ಮನ್ನದಾ ಕೃಷಿಯೊಳದಾವ ಹಿಡಿತವಿಲ್ಲದೆರೆಯುತಿರೆ ಔಷಧ ವಿಜ್ಞಾನಕಿಂದಮಿತದವಕಾಶವಲಾ ವೇಷದೊಳಿಪ್ಪಜ್ಞಾನವನೆ ವಿಜ್ಞಾನವೆನೆ ವಿಶೇಷದವಕಾಶವೆಲ್ಲರಿಗು ಭಲಾ – ವಿಜ್ಞಾನೇಶ್ವರಾ *****...

ಜಗದ ನಗುವಾಗಿ ಸೊಗದ ಬೆಳಕಾಗಿ ಆ ರೋಗ್ಯದಚ್ಚರಿಯೊಳನುದಿನವು ಬಪ್ಪಾ ಉಷೆಯ ಸೊ ಬಗನೆಲ್ಲರೊಳೆಲ್ಲೆಲ್ಲೂ ಉಳಿಸಿದರದನನು ರಾಗದೊಳೌಷಧಿ ಎನಬೇಕಲ್ಲದೊಡಿದೇನು ರೋಗವೋ ಕೃಷಿವಿಷವನೌಷಧಿ ಎನಲು – ವಿಜ್ಞಾನೇಶ್ವರಾ *****...

ಅನ್ನದಾನಗಳಿಂದ ಮುನ್ನದಾನಗಳಿಲ್ಲ ಉನ್ನತದೀ ಮಾತಿಗಿಂದಾವ ತೂಕವು ಇಲ್ಲ ದಾನದನ್ನವದಾರಿಗೆ ಬೇಕು? ದಾರಿ ದಾರಿಗು ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ – ವಿಜ್ಞಾನೇಶ್ವರಾ *****...

ಅನ್ನವೆಂದೇನು ಕೊಂಡಾಡುವುದೋ ಭತ್ತವೊಂ ದನೆ ಉಜ್ಜುಜ್ಜಿ ಬಿಳಿಗೊಳಿಸುತಲುಂಡನ್ನದಾ ಹೀನ ಮನವನ್ನ ಮೂಲವನೆಲ್ಲ ಕೆಡಿಸಿರಲು ಅನ್ನದೊಳಮಿತ ವಿಧವಿಹುದದನು ಋತು ಮಾನಕಪ್ಪಂತೆ ತಿನುವಾತ್ಮಜ್ಞಾನವಳಿದಿರಲು – ವಿಜ್ಞಾನೇಶ್ವರಾ *****...

ಅನ್ನದೊಳು ಕ್ರಾಂತಿಯೋ, ಜಗದೊಳೀ ಮನುಜ ಹುಟ್ಟುವ ಮೊದಲೆ ಹುಟ್ಟರಿ ವಿನೊಳದ್ಭುತವ ಮೆರೆದಿದ್ದ ಹಸುರು ಮಂದಿರದೊಳಗೆ ತನ್ನ ಬಲದೊಳಗಿನ್ನುಹುಟ್ಟದಧಿಕ ಫಸಲಿನ ಬೀಜ ತಿನ್ನುತ ಬಯಲು ಮಾಡಿದ ಬರಡು ನೆಲದೊಳಗೆ – ವಿಜ್ಞಾನೇಶ್ವರಾ *****...

1...7891011...37

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...