ಹನಿಗವನ ಎಚ್ಚರ! ಶ್ರೀವಿಜಯ ಹಾಸನ August 14, 2022December 29, 2021 ಸಾಹಿತ್ಯವೊಂದು ಸುಂದರ ಸಾಗರ ಮುತ್ತುರತ್ನ ಹವಳಗಳ ಆಗರ ಉಪ್ಪು ನೀರಿನ ಮಹಾಪೂರ ಮೊಸಳೆ ತಿಮಿಂಗಿಲಗಳಿವೆ ಎಚ್ಚರ! ***** Read More
ಹನಿಗವನ ಸೇವಾರ್ಥವೋ, ಜಾಹೀರಾತೋ? ನಂನಾಗ್ರಾಜ್ August 13, 2022January 9, 2022 ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. ***** Read More
ಹನಿಗವನ ಜೇಬು ಪರಿಮಳ ರಾವ್ ಜಿ ಆರ್ August 13, 2022December 19, 2021 ಹಣದ ಜೇಬು ಒಂದು ಝಣ ಝಣ ವಾದ್ಯ ಎಚ್ಚರಿಕೆ ವಹಿಸಬೇಕು ಶೃತಿ, ಲಯ, ತಾಳದ ನಡೆಯ ಕಾಪಾಡಲು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೭ ಶರತ್ ಹೆಚ್ ಕೆ August 12, 2022November 28, 2021 ಮಿತಿಯ ಮಾತು ಮಡಿಯುವಂತೆ ಮಾಡಿದ ನೀನು ಮಿತಿಮೀರಿ ಮಾತಾಡಲು ಬಂದಾಗ ಅತಿಯಾದ ಮೌನ ತಾಳಿದ್ದು ಸರಿಯೇ? ***** Read More
ಹನಿಗವನ ಮುಡಿ ಜರಗನಹಳ್ಳಿ ಶಿವಶಂಕರ್ August 8, 2022October 10, 2022 ನಾನು ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮಾಡಿ ಮುಡಿ ಕೊಡಬೇಕೆಂದು ಹರಕೆ ಹೊತ್ತಿದ್ದೆ ದೇವರೇ ನನ್ನ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ ಬೇಕಾದರೆ ನೋಡಿ ಬೋಳಾಗಿದೆ ನನ್ನ ತಲೆ ***** Read More
ಹನಿಗವನ ಹಸಿವು ೨ ವೆಂಕಟಪ್ಪ ಜಿ August 7, 2022December 29, 2021 ಹಸಿವು ಕ್ಷುದ್ರ ಮಾಡಿದೆ ಬಾಳು ಛಿದ್ರ! ಛಿದ್ರ! ***** Read More
ಹನಿಗವನ ಕಳಕಳಿ ಶ್ರೀವಿಜಯ ಹಾಸನ August 7, 2022December 29, 2021 ಅರ್ಧ ಸಂಬಳಕ್ಕೆ ಎಲ್ಲಾದರೂ ಸರಿ ಕೆಲಸ ಮಾಡುವೆವು, ವಿನಮ್ರ ಕಳಕಳಿ ಕೊಟ್ಟರಾಯಿತು ವೇತನ ಏರಿಸಿರೆಂದು ಹೂಡುವರು ಉಗ್ರ ಚಳುವಳಿ ಹೇಗಿದೆ ಸರ್ಕಾರಿ ನೌಕರರ ನಡಾವಳಿ? ***** Read More
ಹನಿಗವನ ಜೋಕೆ ಪರಿಮಳ ರಾವ್ ಜಿ ಆರ್ August 6, 2022December 19, 2021 ಮಾವಿನ ಮರಕೆ ಕಲ್ಲು ಹೊಡೆದರೆ ಮಾವಿನ ಹಣ್ಣು ಹೆಣ್ಣಿಗೆ ಕಣ್ಣು ಹೊಡೆದರೆ ಚಳ್ಳೆ ಹಣ್ಣು! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೬ ಶರತ್ ಹೆಚ್ ಕೆ August 5, 2022November 28, 2021 ಮಾನವತೆಯ ಹೊರತು ಎಲ್ಲವನೂ ಹೂತು ಜಗದ ಮಾತು ಮರೆತು ಬಿಡೋಣ ಜೊತೆಯಲಿ ಕೂತು ***** Read More
ಹನಿಗವನ ಭಂಡಾರ ಜರಗನಹಳ್ಳಿ ಶಿವಶಂಕರ್ August 1, 2022December 28, 2021 ಅಕ್ಷರ ಎಂದರೆ ಬರಿ ಆಚಾರ ವಿಚಾರ ವ್ಯವಹಾರ ಭಾಷೆ ಬರೆವ ವ್ಯಾಪಾರ ಅಲ್ಲ ವ್ಯಾಸ, ವಾಲ್ಮೀಕಿ ದಾಸರ, ಶರಣರ ಮುಕ್ತಿಯ ಸೂತ್ರ ಭಕ್ತಿಯ ಸಾರ ಬಿಚ್ಚಿಟ್ಟ ಭಂಡಾರ ಬಚ್ಚಿಟ್ಟ ಸಾಗರ ***** Read More