ಆಕಾರ

ದೊಡ್ಡ ಆನೆ ಒಂಟೆಯಲ್ಲಿಲ್ಲದ ವಿಷ ಸಣ್ಣ ಹಾವು ಚೇಳಿನೊಳಗೆ ಬಂತು ಉದ್ದ ತಾಳೆ ತೆಂಗಿಗಿಲ್ಲದ ಕಾರ ಗಿಡ್ಡ ಮೆಣಸಿನ ಗಿಡದೊಳಗೆ ಬಂತು ಬೆಟ್ಟಕ್ಕೆ ಸಲ್ಲದ ಭಯ ಭೀತಿ ಅದರ ಸಣ್ಣ ಕವಣೆ ಕಲ್ಲಿಗೆ ಬಂತು...

ಗತಿ

ಹೋಮ ಮಾಡಿದರು ಹವಿಸ್ಸು ಅರ್‍ಪಿಸಿದರು ಬೆಣ್ಣೆ ತುಪ್ಪ ಸುರಿದರು ಅಗ್ನಿಗೆ ಸಂತೈಸಿದರು ಅಡ್ಡಬಿದ್ದು ಆರಾಧಿಸಿದರು ಹೊರಗೆ ಬಂದರು ಸಿಗರೇಟು ಹಚ್ಚಿ ಸೇದಿದರು ಕೊನೆಗೆ ಉಳಿದ ಅಗ್ನಿಯ ಚೂರನ್ನು ಪಾಪ ಕಾಲಲ್ಲಿ ತುಳಿದು ಹೊಸಕಿದರು *****