ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೬ ಶರತ್ ಹೆಚ್ ಕೆ October 14, 2022November 28, 2021 ಅಂಜಿಕೆಯ ತೊಟ್ಟು ಕಳಚಿಟ್ಟು ಅವಳೊಳಗೆ ಒಂದಾದರೆ ಬದುಕು ಹಸನಾಗುವುದೆಂಬ ಕಲ್ಪನೆ ಭ್ರಮೆಯೂ ಇರಬಹುದು ***** Read More
ಹನಿಗವನ ಕಾವಲು ಜರಗನಹಳ್ಳಿ ಶಿವಶಂಕರ್ October 10, 2022October 10, 2022 ಅರಮನೆಯಲ್ಲಿ ಅರಳುವ ಗುಲಾಬಿಯ ಸುತ್ತ ಮುತ್ತ ಆಳು-ಕಾಳು, ಮುಳ್ಳು ಸರ್ಪಗಾವಲು ಆದರೇನು ದುಂಬಿಗೆ ಸದಾ ತೆರೆದ ಬಾಗಿಲು ***** Read More
ಹನಿಗವನ ಹೊಣೆ ಶ್ರೀವಿಜಯ ಹಾಸನ October 9, 2022October 9, 2022 ಬದುಕಿನ ಆಟದಲ್ಲಿ ಸೋಲು ಗೆಲುವುಗಳಿಗೆ ಯಾರು ಹೊಣೆ? ದೈವವೇ? ಅದೃಷ್ಟವೇ ಇಲ್ಲ, ನಮ್ಮೆಲ್ಲ ಸಾಧನೆಗೆ ಪರಿಶ್ರಮವೇ ಹೊಣೆ ***** Read More
ಹನಿಗವನ ಸಮ ವಯಸ್ಕರು ನಂನಾಗ್ರಾಜ್ October 8, 2022January 9, 2022 ಸರಕಾರಿ ಕಛೇರಿಯಲ್ಲಿ ಎಲ್ಲರದೂ ಪರ್ಸೆಂಟ್ ಏಜ್ ಊ ***** Read More
ಹನಿಗವನ ಸಾಮರಸ್ಯ ಪರಿಮಳ ರಾವ್ ಜಿ ಆರ್ October 8, 2022December 19, 2021 ಅನ್ನದ ತಪ್ಪಲೆಗೆ ನನ್ನ ತಲೆಗೆ ಒಂದೇ ಸಾಮರಸ್ಯ ಇಬ್ಬರೂ ಕುದಿಯುತ್ತೇವೆ ಒಂದು ಒಲೆ ಮೇಲೆ ಒಂದು ಒಲೆ ಇಲ್ಲದೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೫ ಶರತ್ ಹೆಚ್ ಕೆ October 7, 2022November 28, 2021 ಅವಳ ನೆನಪು ಕತ್ತಲಲ್ಲಿ ಬೆಳಕು ಹಂಚ್ಚುವ ಮಿಂಚು ಹುಳು ***** Read More
ಹನಿಗವನ ಗರತಿ ಷರೀಫಾ ಕೆ October 6, 2022March 3, 2022 ಮಂಗಳ ಸೂತ್ರಕ್ಕೆ ಮೂರ್ಹೊತ್ತು ಪೂಜಿಸಿ ಕಣ್ಣಿಗೊತ್ತಿಕೊಳ್ಳುವ ನಮ್ಮೂರ ಗರತಿ ಗಂಡನಿಲ್ಲದ ಹೊತ್ತು ಪಕ್ಕದ ಮನೆಯವನ ಒಳಗಿಟ್ಟುಕೊಂಡು ಬಾಗಿಲಿಗೆ ಚಿಲಕ ಜಡಿದದ್ದು ಕಂಡು ಬೆರಗಾಗಿ ನಿಂತೆ ***** Read More
ಹನಿಗವನ ಅಂತರ ಜರಗನಹಳ್ಳಿ ಶಿವಶಂಕರ್ October 3, 2022December 28, 2021 ಏರಿದರೆ ಮಂಚ, ಗದ್ದುಗೆ, ಸಿಂಹಾಸನ ಹೆಚ್ಚೆಂದರೆ ಎರಡು ಮೂರಡಿ ಮೇಲೆ ಜಾರಿದರೆ ಗೋರಿ, ಸಮಾಧಿ, ಬೃಂದಾವನ ಹೆಚ್ಚೆಂದರೆ ಎರಡು ಮೂರಡಿ ಕೆಳಗೆ ***** Read More
ಹನಿಗವನ ಅಂತರಂಗ ಶ್ರೀವಿಜಯ ಹಾಸನ October 2, 2022December 29, 2021 ನಿನ್ನ ಅಂತರಂಗ ಅರಿಯದೆ ಹೃದಯ ಹಸಿರಾಗಿ ಪ್ರೀತಿ ಹೂವಾಗಿ ಅರಳಿತ್ತು ನಿನ್ನ ಅಂತರಂಗ ಅರಿವಾಗಿ ಹೃದಯ ಕಲ್ಲಾಗಿ ಪ್ರೀತಿ ಹಾವಾಗಿ ಕಡಿದಿತ್ತು ***** Read More
ಹನಿಗವನ ಪರಿವಾರ ಪರಿಮಳ ರಾವ್ ಜಿ ಆರ್ October 1, 2022December 19, 2021 ಅಜ್ಜಿ.... ಊಟದ ಘಂಟೆ! ಅಜ್ಜ.... ಪಾಠದ ನಿಘಂಟು! ಅಕ್ಕ.... ಫ್ಯಾಷನ್ ಸೆಂಟು! ಅಮ್ಮ.... ಪ್ರೀತಿ ನಂಟು! ಅಪ್ಪ.... ಆಸ್ತಿಯ ಗಂಟು!! ***** Read More