ಹನಿಗವನ ದೋಸ್ತಿ ಪರಿಮಳ ರಾವ್ ಜಿ ಆರ್ March 30, 2016February 2, 2016 ಬಾಲ್ಯದ ಗೆಳೆಯ ಚಡ್ಡಿ ದೋಸ್ತ್ ಈಗ ಅವನು ದಢಿಯಾ! ಬಾಲ್ಯದ ಗೆಳತಿ ‘ಗುಡಿಯಾ’ ಈಗ ಅವಳು, ‘ಬಢಿಯಾ’! ***** Read More
ಹನಿಗವನ ಕೂಲಾಗಿರೋಕೆ ಶ್ರೀನಿವಾಸ ಕೆ ಎಚ್ March 28, 2016February 4, 2016 ಸೂರ್ಯ, ಸೂರ್ಯ ಇವನೊಬ್ಬನೇಂತ ಎಷ್ಟೇ ಹಾಡಿ ಹೊಗಳಿದರೂ, ಅವನಿಗೆ ಹೊತ್ತಿಕೊಂಡು ಉರಿಯೋದೊಂದೇ ಗೊತ್ತಿರೋದು ನನ್ನ ಥರ ಕೂಲಾಗಿರೋಕೆ ಅವನ ಜನ್ಮದಲ್ಲೂ ಸಾಧ್ಯವಿಲ್ಲ. ***** Read More
ಹನಿಗವನ ಕಿವಿಗಳು ಪರಿಮಳ ರಾವ್ ಜಿ ಆರ್ March 23, 2016February 2, 2016 ಕಿವಿಗಳು ಬೇಕು ಸಾರ್ ಕಿವಿಗಳು! ಕತ್ತೆಯ ಕಿವಿಗಳು ಕುದರೆಯ ಕಿವಿಗಳು ಹಸುವಿನ ಕಿವಿಗಳು ಎತ್ತಿನ ಕಿವಿಗಳು ಕವಿಯ ಭಂಡಾರ ತುಂಬಲು ಆನೆಯ ಕಿವಿಗಳು ಸಮಯವಿದ್ದರೆ ಕಾವ್ಯಕ್ಕೆ ಮಾನವನ ಕಿವಿಗಳು! ***** Read More
ಹನಿಗವನ ಚಂದ್ರನ ಗೋಳು ಶ್ರೀನಿವಾಸ ಕೆ ಎಚ್ March 21, 2016February 4, 2016 ಬೆಳಗಿಂದ ಸಂಜೆಯವರೆಗೂ ಕಣ್ಣಿಗೆ ಕಂಡಿದ್ದನ್ನೆಲ್ಲಾ ಅವನು ಕಾಯಿಸುತ್ತಲೇ ಇದ್ದರೆ ರಾತ್ರಿ ಬೆಳಗೂ ನಾನು ಎಷ್ಟೂಂತ ಅದನ್ನು ತಣಿಸೋದು. ***** Read More
ಹನಿಗವನ ನಾನು – ಅವಳು ಪರಿಮಳ ರಾವ್ ಜಿ ಆರ್ March 16, 2016February 2, 2016 ದೃಷ್ಟಿ ಯುದ್ಧ ಮೊದಲು ಮುಷ್ಟಿ ಯುದ್ಧ ಎರಡು ಸೃಷ್ಟಿ ಯುದ್ಧ ಮೂರು ವರ್ಷ ಉರಳಿ ಅವಳಿ ಜವಳಿ ನಾವು ಆದೆವು ನಾಲ್ಕು! ***** Read More
ಹನಿಗವನ ರಾತ್ರಿ ಸರದಾರ ಶ್ರೀನಿವಾಸ ಕೆ ಎಚ್ March 14, 2016February 4, 2016 ಆಕಾಶದ ತುಂಬಾ ರಂಗೋಲೆ ನಕ್ಷತ್ರ ಮಾಲೆ ನವ ವಧುವಿನಲಂಕಾರ ಏನೇನೋ ಶೃಂಗಾರ ಎಲ್ಲ ಅವನ ಸ್ವಾಗತಕ್ಕಾಗಿ ಮೂಡಿ ಬರ್‍ತಾ ಇದ್ದಾನೆ ನೋಡಿ ಅವನ ಮೋಡಿ ಅವನೇ ಚಂದ್ರ, ರಾತ್ರಿಯ ಸರದಾರ. ***** Read More
ಹನಿಗವನ ಮ್ಯಾಚಿಂಗ್ ಪರಿಮಳ ರಾವ್ ಜಿ ಆರ್ March 9, 2016February 2, 2016 ಶರ್ಟಿಗೆ ಬೇಕು ಮ್ಯಾಚಿಂಗ್ ಪ್ಯಾಂಟು ಸೀರೆಗೆ ಬೇಕು ಮ್ಯಾಚಿಂಗ್ ಬ್ಲೌಸ್ ಗಂಡಿಗೆ ಬೇಕು ಮ್ಯಾಚಿಂಗ್ ಹೆಣ್ಣು ಎಲ್ಲಕೆ ಮಿಗಿಲು ಹೃದಯಕೆ ಬೇಕು ಸರ್‍ಚಿಂಗ್ ಕಣ್ಣು! ***** Read More
ಹನಿಗವನ ಮಾಡೋದೇನು ಶ್ರೀನಿವಾಸ ಕೆ ಎಚ್ March 7, 2016February 4, 2016 ಹತ್ತಿ ಹಿಂಜಿ ಮೋಡದ ರಜಾಯಿ ಮೈತುಂಬಾ ಹೊದ್ದು ಮುಸುಕಿ ಹಾಕಿ ಮಲಗಿ ಬಿಟ್ಟಿದ್ದಾನೆ ಚಂದ್ರ, ಯಾವಾಗ್ಲೂ ಓಡೋಡಿ ಬರೋನು ಮೋಡದಿಂದ ಹೊರಗೆ ಬರ್‍ತಾನೆ ಇಲ್ಲ ಇವತ್ತು ಇವನಿಗೆ ಮೂಡೇ ಇಲ್ಲ ಮಾಡೋದೇನು? ***** Read More
ಹನಿಗವನ ಶಕುನ ಪರಿಮಳ ರಾವ್ ಜಿ ಆರ್ March 2, 2016February 2, 2016 ಬೆಕ್ಕು ಅಡ್ಡ ಬಂದರೆ ಕೆಲಸಕ್ಕೆ ಅಪಶಕುನ ಹುಡುಗಿ ಅಡ್ಡ ಬಂದರೆ ಮದುವೆಗೆ ಶುಭ ಶಕುನ. ***** Read More
ಹನಿಗವನ ಏನುಂಟು ಮಾರಾಯ್ರೆ ಶ್ರೀನಿವಾಸ ಕೆ ಎಚ್ February 29, 2016February 4, 2016 ಕದ್ದಾ ಕದ್ದಾಂತ ಕಂಪ್ಲೇಂಟ್ ಕೊಡ್ಲಿಕ್ಕೇನುಂಟು ಮಾರಾಯ್ರೆ ಬೆಂಕಿ ಕದ್ದು ಬೆಳದಿಂಗಳು ಹಂಚಿದ್ರೆ ಏನ್ರಿ ಹೋಯ್ತು ಅವರಜ್ಜನ ಗಂಟು ನೀವೇ ಹೇಳಿ ರಾಯರೇ ***** Read More