ಹನಿಗವನ ಅತಿ ಸಂತಾನ ಪಟ್ಟಾಭಿ ಎ ಕೆ April 6, 2017March 29, 2017 ‘ಅತಿ ಸಂತಾನ’ ಎಂದರೆ ಬೆಂಕಿಯೊಡನೆ ಸರಸ; ಅದಕ್ಕಾಗಿಯೇ ಬೇಕು ವಂಕಿಯ ಸಹವಾಸ! ***** Read More
ಹನಿಗವನ ಮಾತು – ಮೌನ ಪರಿಮಳ ರಾವ್ ಜಿ ಆರ್ April 5, 2017September 18, 2017 ಮಾತಿಗೂ - ಮೌನಕ್ಕೂ ಅಂತರ ಒಂದು ತಬಲಾ ನಾದ ಇನ್ನೊಂದು ಮೀಟಿದ ತಂಬೂರಿ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೪ ಧರ್ಮದಾಸ ಬಾರ್ಕಿ April 3, 2017February 4, 2017 ನನ್ನ ಜೀವನದ ಹಾದಿಯಲ್ಲಿ ನಾನು ನನ್ನನ್ನೆಂದೂ ಪ್ರಶ್ನಿಸದೇ ಹೋದೆ. ಕೊನೆಯಲ್ಲಿ ನಾನೇ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದೆ! ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ March 31, 2017September 18, 2017 ಮಣ್ಣಿಗೂ ಕಣ್ಣಿಗೂ ವ್ಯತ್ಯಾಸವಿಷ್ಟೆ ಮಣ್ಣು ನೀರ ಇಂಗುತ್ತದೆ ಕಣ್ಣು ನೀರ ನುಂಗುತ್ತದೆ ***** Read More
ಹನಿಗವನ ಅಧರ ಪಟ್ಟಾಭಿ ಎ ಕೆ March 30, 2017March 29, 2017 ಅಧರ ಮಧುರ; ಉದರಕ್ಕಲ್ಲ ಮತ್ತೊಂದು ಅಧರಕ್ಕೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೩ ಧರ್ಮದಾಸ ಬಾರ್ಕಿ March 27, 2017February 4, 2017 ಸಣ್ಣವರ ದಡ್ಡತನ, ದೊಡ್ಡವರ ಸಣ್ಣತನಕ್ಕಿಂತ ಮೇಲು! ***** Read More
ಹನಿಗವನ ಹುಡುಕಾಟ ಲತಾ ಗುತ್ತಿ March 26, 2017February 13, 2019 ಎಣ್ಣೆ ದೀಪದ ಬೆಳಕಿನ ಪ್ರೀತಿ ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು- ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ ಈಗ ಹುಡುಕಾಡುತ್ತ ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ. ***** Read More
ಹನಿಗವನ ಖಾಲಿ ಶೀಷೆ ಪಟ್ಟಾಭಿ ಎ ಕೆ March 23, 2017March 29, 2017 ಹಳೆ ಪೇಪರ್ ಖಾಲಿ ಶೀಷೆಯವ ಬೀದಿಯಲ್ಲಾ ಅಲೆದು ಸುಸ್ತಾಗಿ ಸೇಂದಿ ಅಂಗಡಿ ಸೇರಿದ; ಸೇಂದಿ ಶೀಷೆ ಖಾಲಿ ಮಾಡಿ ‘ಕೊನೆಗೂ ಖಾಲಿ ಶೀಷೆ ಒಂದಾದರೂ ದಕ್ಕಿತಲ್ಲಾ’ ಎಂದು ಸಾಂತ್ವನಗೊಂಡ! ***** Read More
ಹನಿಗವನ ರಂಗನಾಣೆ ಪರಿಮಳ ರಾವ್ ಜಿ ಆರ್ March 22, 2017September 18, 2017 ನಿನಗೂ ಆಣೆರಂಗ ಎನಗೂ ಆಣೆ ನಿ-ನಗು ನಾ-ನಗು ನಮ್ಮಿಬ್ಬರಿಗೂ ನಗುವಿನ ಬಾಳು ಇದು ರಂಗನಾಣೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೨ ಧರ್ಮದಾಸ ಬಾರ್ಕಿ March 20, 2017February 2, 2017 ಗುರು ಎಂದರೆ ಹಲವರಿಗೆ ಕಿಟಕಿ ಕೆಲವರಿಗೆ ಗೇಟು! ***** Read More