ಹನಿಗವನ ದೃಷ್ಟಿ – ಅಂತರ ಪರಿಮಳ ರಾವ್ ಜಿ ಆರ್ April 26, 2017September 18, 2017 ಹರೆಯದ ದೃಷ್ಟಿಗೆ ಮನೆ ಜೈಲು ಮಕ್ಕಳು ಐಲು - ಪೈಲು ಹೆಣ್ಣು ಸುಗ್ಗಿಯ ಕುಯಿಲು ಮುಪ್ಪಿನ ದೃಷ್ಟಿಗೆ ಮನೆ ವೃಂದಾವನ ಹೆಣ್ಣು ಗೃಹದೇವಿ ಮಕ್ಕಳು ಮಾಣಿಕ್ಯ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೭ ಧರ್ಮದಾಸ ಬಾರ್ಕಿ April 24, 2017February 4, 2017 ‘ಚಂಪಾ’ಗೆ ಕೇಳಿದೆ: "sun ಪದದ ಕನ್ನಡ ಅನುವಾದ ಹೇಳಿ". "ಇಗೋ ಬರಕೊಳ್ಳಿ: ‘ಮಿಂಚುಳ್ಳಿ’ ಎಂದು ಹೇಳುತ್ತ ‘ಕನ್ನಡ ಕನ್ನಡ ಬನ್ನಿ ನನ್ನ ಸಂಗಡ’ ಎನ್ನುತ್ತಾ ಮಾಯವಾದರು! ***** Read More
ಹನಿಗವನ ಚಕ್ರ ಲತಾ ಗುತ್ತಿ April 23, 2017February 13, 2019 ದೇಶದ ಹೊಲಸೆಲ್ಲ ಸಮುದ್ರದೊಡಲಿಗೆ ಒಡಲಕಿಚ್ಚು ಆಕಾಶಕ್ಕೇರಿ ಹನಿಹನಿಯಾಗಿ ಧರೆಗೆ. ***** Read More
ಹನಿಗವನ ರಜ ಪಟ್ಟಾಭಿ ಎ ಕೆ April 20, 2017March 29, 2017 ಕೆಲವೊಮ್ಮೆ ರಜೆಗಳು ಒಂಟೊಂಟಿಯಾಗಿ ಅಲ್ಲ; ಹಿಂಡು ಹಿಂಡಾಗಿ ಬರುತ್ತವೆ ಕಷ್ಟ ಪರಂಪರೆಗಳಂತೆ! ***** Read More
ಹನಿಗವನ ಗಂಡು ಹೆಣ್ಣು ಪರಿಮಳ ರಾವ್ ಜಿ ಆರ್ April 19, 2017September 18, 2017 ಗಂಡು - ಬ್ರಹ್ಮಾಂಡದ ಕಣ್ಣು ಹೆಣ್ಣು - ಬ್ರಹ್ಮಾಂಡದ ಹಣ್ಣು ಮಗು - ಬ್ರಹ್ಮಾಂಡದ ಮೈದಾನ, ಮಣ್ಣು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೬ ಧರ್ಮದಾಸ ಬಾರ್ಕಿ April 17, 2017February 4, 2017 ದೂರದ ಆಗಸದಲ್ಲಿ ‘ನಕ್ಷತ್ರಗಳು’ ಮುಕ್ತಿ ಪಡೆದಾಗ ಭವ್ಯ ಭುವಿಯ ಮೇಲೆ ‘ಮುಂಚುಳ್ಳಿ’ಗಳಾಗುತ್ತವೆ! ***** Read More
ಹನಿಗವನ ಮಳೆ ಲತಾ ಗುತ್ತಿ April 16, 2017February 13, 2019 ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬದಬನೆ ನಿಸರ್ಗ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೊಡುತ್ತಿದೆ. ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ April 13, 2017March 29, 2017 ಗಂಡನಿಗೆ ತೆರಿಗೆ ಭಾರ ಹೆಂಡತಿಗೆ ಹೆರಿಗೆ ಭಾರ ಮಕ್ಕಳಿಗೆ ಪುಸ್ತಕ ಭಾರ ಇದೇ ಸಂಸಾರ! ***** Read More
ಹನಿಗವನ ಅಂತರ ಪರಿಮಳ ರಾವ್ ಜಿ ಆರ್ April 12, 2017September 18, 2017 ಇಪ್ಪತ್ತರಲ್ಲಿ ಬಾಳು ಎಳನೀರ ತೆಂಗಿನಕಾಯಿ ಎಪ್ಪತ್ತರಲ್ಲಿ ಬಾಳು, ನೀರು ಕೊಬ್ಬರಿ ಇಲ್ಲದ ಬರಿಚಿಪ್ಪಿನ ತೆಂಗಿನ ಗರಟ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೫ ಧರ್ಮದಾಸ ಬಾರ್ಕಿ April 10, 2017February 4, 2017 ಹಾಗೆ ನೋಡಿದರೆ ಕತ್ತಲೆಯೇ ನಿಜವಾದ ಬೆಳಕು! ***** Read More