ಹನಿಗವನ ಯುಗಾದಿ ಪಟ್ಟಾಭಿ ಎ ಕೆ January 18, 2018January 4, 2018 ವರ್ಷವಿಡೀ ಬೇವು ಎಲ್ಲ; ಇಂದು ಮಾತ್ರ ಬೇವು ಬೆಲ್ಲ! ***** Read More
ಹನಿಗವನ ಬೇಡ ಪರಿಮಳ ರಾವ್ ಜಿ ಆರ್ January 17, 2018January 2, 2018 ಮಾನಿಷಾದ ಬಿಲ್ಲೆತ್ತ ಬೇಡ ಓ ಕಟುಕ ಬೇಡ ಹಕ್ಕಿಯ ಜೋಡಿಯಲಿ ಉಕ್ಕಿ ಹರಿಯುತಿದೆ ಸಾಗರದ ಭೋರ್ಗರೆತ ಸಾಕು ಜಗಕೊಂದು ರಾಮಾಯಣ ಸಾಗುತಿರಲಿ ಸಾವಿರದ ಪ್ರೇಮಾಯಣ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೬ ಧರ್ಮದಾಸ ಬಾರ್ಕಿ January 15, 2018December 17, 2017 ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! ***** Read More
ಹನಿಗವನ ದಬ್ಬಾಳಿಕೆ ಪಟ್ಟಾಭಿ ಎ ಕೆ January 11, 2018January 4, 2018 ಸದಾ ದಬ್ಬುವುದೇ ದಬ್ಬಳದ ಆಳ್ವಿಕೆ ಒಂದರ್ಥದಲ್ಲಿ ದಬ್ಬಾಳಿಕೆ! ***** Read More
ಹನಿಗವನ ನಾವು – ನೀವು ಪರಿಮಳ ರಾವ್ ಜಿ ಆರ್ January 10, 2018January 2, 2018 ನಾವು - ನೀವು ಅವರು ಇವರು ಎಲ್ಲರೂ ಕಿತ್ತಳೆಯ ಜಾಕೆಟಿನ ಒಳಗಿರುವ ಒಗ್ಗಟ್ಟಿನ ತೊಳೆಗಳಂತೆ ಒಂದೇ ಬಾನು ಹೊದ್ದು ಭೂಮಿ ಗೋಳವಾದಂತೆ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೫ ಧರ್ಮದಾಸ ಬಾರ್ಕಿ January 8, 2018December 17, 2017 ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು - ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ...! ***** Read More
ಹನಿಗವನ ಪ್ಲುಟೋಯ್ ಲತಾ ಗುತ್ತಿ January 7, 2018February 13, 2019 ಮುಡಿಯಿಂದ ಅಡಿಯವರೆಗೆ ಸೂರ್ಯ ರಶ್ಮಿಗಳಲಿ ಮುಳುಗಿ ಎದ್ದು ತಣ್ಣನೆ ಕಿರಣಗಳನು ಸಿಂಪಡಿಸುತಿಹಳು ಚೆಲುವೆ ‘ಪ್ಲುಟೋಯ್’ ಸೂರ್ಯ ಕಿರಣಗಳಿಗಿಂತ ಮೊದಲು. ***** Read More
ಹನಿಗವನ ಗಲ್ಲ ಪಟ್ಟಾಭಿ ಎ ಕೆ January 4, 2018January 4, 2018 ನಲ್ಲನಿಗೆ ಬೇಕು ನಲ್ಲಳ ಗಲ್ಲ; ನಲ್ಲಳಿಗೆ ಬೇಕು ನಲ್ಲನ ಗಲ್ಲಾ! (ಹಣದ ಪೆಟ್ಟಿಗೆ) ***** Read More
ಹನಿಗವನ ಸುವ್ವಾಲೆ ಪರಿಮಳ ರಾವ್ ಜಿ ಆರ್ January 3, 2018January 2, 2018 ಬುಗರಿಯ ಬುಡದ ಮೊನೆಯ ಮೊಳೆ ನಾನು ಬಿಡಿಸಿರುವೆ ನೆಲದಲ್ಲಿ ಬಾಳ ರಂಗೋಲೆ ಹಾಡಿ ಸುವ್ವಾಲೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫೪ ಧರ್ಮದಾಸ ಬಾರ್ಕಿ January 1, 2018December 17, 2017 ಎಲ್ಲಾ ದಾರಿಗಳು ರೋಮಿಗೆ ಸೇರುತ್ತವೆ ನಿಜ. ಆದರೆ - ಎಲ್ಲರ ಪ್ರಯಾಣ ಅಲ್ಲಿ ಕೊನೆಗೊಳ್ಳುವುದಿಲ್ಲ! ***** Read More