ಹನಿಗವನ ಧಾರೆ ಪರಿಮಳ ರಾವ್ ಜಿ ಆರ್ April 25, 2018April 8, 2018 ಕಾವು ಕೊಟ್ಟರೆ ಹುಟ್ಟುವುದು ಕಾವ್ಯ ಧಾರೆ ಜೀವಕೊಟ್ಟರೆ ಹುಟ್ಟುವುದು ಜೀವನ್ಮುಕ್ತಿ ಧಾರೆ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೭೦ ಧರ್ಮದಾಸ ಬಾರ್ಕಿ April 23, 2018December 17, 2017 ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ... ನಿಮಗನ್ನಿಸುವುದಿಲ್ಲವೆ? ***** Read More
ಹನಿಗವನ ನಮ್ಮೂರ ಹುಡುಗಿಯರು ಶ್ರೀನಿವಾಸ ಕೆ ಎಚ್ April 20, 2018March 25, 2018 ಎಲೆ ಮರೆಯ ಕಾಯಿಗಳನ್ನು ಹಣ್ಣಾಗುವ ಮೊದಲೇ ಯಾರ್ಯಾರೋ ಕಿತ್ತುಬಿಟ್ಟರು. ನಮ್ಮೂರ ಚೆಂದದ ಹೆಣ್ಣುಗಳನ್ನು ಇನ್ನೂ ಕಣ್ಣು ಬಿಡುವಷ್ಟರಲ್ಲೆ ಯಾರ್ಯಾರೋ ಮದುವೆಯಾಗಿಬಿಟ್ಟರು. ***** Read More
ಹನಿಗವನ ಅಣ್ವಸ್ತ್ರ ಪಟ್ಟಾಭಿ ಎ ಕೆ April 19, 2018April 10, 2018 ನಮ್ಮಲ್ಲಿ ಅಣ್ವಸ್ತ್ರಕ್ಕೆ ಸುಭಿಕ್ಷ; ಅನ್ನ-ವಸ್ತ್ರಕ್ಕೆ ದುರ್ಭಿಕ್ಷ! ***** Read More
ಹನಿಗವನ ಜಾಣ – ಪೆದ್ದ ಪರಿಮಳ ರಾವ್ ಜಿ ಆರ್ April 18, 2018April 8, 2018 ಗೆದ್ದ ಎತ್ತಿನ ಬಾಲ ಹಿಡಿದು ಪೆದ್ದನೂ ಹದ್ದಾಗಿ ಹಾರಿದ್ದ ಸಿದ್ದಿ ಸಾಧಿಸುವ ಜಿದ್ದಿನಲಿ ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬೯ ಧರ್ಮದಾಸ ಬಾರ್ಕಿ April 16, 2018December 17, 2017 ಬೆಳಕನರಸಿ ಹೊರಟದ್ದು ಬೇರೇನೂ ಆಗಿರಲಿಲ್ಲ; ಬೆಳಕೇ ಆಗಿತ್ತು! ***** Read More
ಹನಿಗವನ ಬಯಕೆ ಲತಾ ಗುತ್ತಿ April 15, 2018February 13, 2019 ಅವಳಿಗೆ ನಾನು ರೋಮಿಯೋ ಆಗಿಯೋ ಮಜ್ನೂ ಆಗಿಯೋ ನನ್ನ ಅಸ್ತಿತ್ವವನ್ನೆಲ್ಲಾ ಕಳಚಿ ಅವಳನ್ನು ಮನಸಾರೆ ತಬ್ಬಿ ಚುಂಬಿಸಿ ಚಳಿಯೊಳಗೊಂದಾಗಿ ಬೆಚ್ಚಗಾಗುವ ಬಯಕೆ. ***** Read More
ಹನಿಗವನ ಓಯಸಿಸ್ಸು ಶ್ರೀನಿವಾಸ ಕೆ ಎಚ್ April 13, 2018March 25, 2018 ಈ ಜರೆಯ ಬಗೆ ಹರಿಯದ ಜಂಜಾಟಗಳ ಹೊರೆಯ ಮರಳುಗಾಡಿನ ಮೂಲೆಯಲ್ಲೆಲ್ಲೊ ಒಂದು ಕಡೆ ಹುಡುಕುತ್ತದೆ ಹುಚ್ಚು ಮನಸ್ಸು ಹದಿಹರೆಯದ ಕನಸುಗಳ ಬಚ್ಚಿಟ್ಟ ನೆನಪುಗಳ ಓಯಸಿಸ್ಸು. ***** Read More
ಹನಿಗವನ ರಾಜಕಾರಣ ಪಟ್ಟಾಭಿ ಎ ಕೆ April 12, 2018April 10, 2018 ರಾಜಕಾರಣದಲ್ಲಿ ಹಾಕುವ ಗಾಳ ಯಾರಿಗೂ ಸಿಗದ ಆಳ! ***** Read More
ಹನಿಗವನ ಹೊತ್ತಿನ ಮಹಿಮೆ ಪರಿಮಳ ರಾವ್ ಜಿ ಆರ್ April 11, 2018April 8, 2018 ಹೊತ್ತು ಬಂದಾಗ ಕೊಡೆ ಹಿಡಿದು ಸೊತ್ತು ಸಂಪಾದಿಸಿದ್ದ ತಿಮ್ಮ ಹೊತ್ತಿಲ್ಲದ ಹೊತ್ತಲ್ಲಿ ಹೋಗಿ ಆಪತ್ತು ತಂದು ಕೊಂಡಿದ್ದರೆ ತಿಳಿಗೇಡಿ ತಮ್ಮ ***** Read More