ಹನಿಗವನ ಅವಳ ನಗು ಲತಾ ಗುತ್ತಿ June 10, 2018February 13, 2019 ಅವಳು ಹಲ್ಕರಿದು ಊರಗಲ ಬಾಯಿ ಮಾಡಿ ನಕ್ಕಾಗ, ನಮ್ಮೂರ ಕೆರೆಯದಷ್ಟೇ ನೆನಪಲ್ಲ, ಅದರ ಒಡ್ಡಿಗೆ ಹಾಕಿದ ಹೇರು ಪೇರು ಕಲ್ಲಿನ ಸಾಲುಗಳದೂ ನೆನಪು. ***** Read More
ಹನಿಗವನ ಸವಿಗನಸು ಶ್ರೀನಿವಾಸ ಕೆ ಎಚ್ June 8, 2018March 25, 2018 ರಾತ್ರಿ ಎಲ್ಲರೂ ಮಲಗಿದ ಮೇಲೆ ಗುಟ್ಟಾಗಿ ನನ್ನ ಹಾಸಿಗೆಗೆ ಬಂದು ಸುಖಿಸಿ ಬೆಳಗಾಗುವಷ್ಟರಲ್ಲಿ ಮಂಗಮಾಯವಾಗುವುದರಲ್ಲೇನಿದೆ ಮಹಾ ಪೌರುಷ ಸವಿಗನಸೇ ನೀನೊಬ್ಬ ವಿಟ ಪುರುಷ. ***** Read More
ಹನಿಗವನ ಜಿರಲೆ ಪಟ್ಟಾಭಿ ಎ ಕೆ June 7, 2018June 10, 2018 ಮನೆಯಲ್ಲಿ ಜಿರಲೆ ಇರಲಿ; ಹೆಂಡತಿಯನ್ನು ಹಿಡಿತದಲ್ಲಿಡಲು ಮಾರ್ಗ ಇದಾಗಲಿ! ***** Read More
ಹನಿಗವನ ಕಸಬರಿಗೆ ಪರಿಮಳ ರಾವ್ ಜಿ ಆರ್ June 6, 2018April 8, 2018 ಕೆಲಸವಿಲ್ಲದ ಕವಿಯ ಕೈಗೆ ಕಸಬರಿಗೆ ಕೊಟ್ಟು ಬಿಡಿ ಗುಡಿಸುವನು ನಕ್ಷತ್ರ ರಾತ್ರಿ ಇಡಿ ಬೆಳಗಾಗುವುದರಲ್ಲಿ ನೇಸರ ಬಿಡಿಸಿ ***** Read More
ಹನಿಗವನ ವಯಾಗ್ರ ಪಟ್ಟಾಭಿ ಎ ಕೆ May 31, 2018April 10, 2018 ಜಿಯಾಗ್ರಫಿ ಭಯಾಗ್ರಫಿ ಓದಿದ್ದೇನೆ; ಯಾವುದೀ ವಯಾಗ್ರಫೀ! ***** Read More
ಹನಿಗವನ ಪ್ರಶ್ನೆ ಉತ್ತರ ಪರಿಮಳ ರಾವ್ ಜಿ ಆರ್ May 30, 2018April 8, 2018 ಪ್ರಶ್ನೆ ಎಲ್ಲಾ ದಿಕ್ಕಿನಲ್ಲಿ ‘ಉತ್ತರ’ಕೆ ದಿಕ್ಕೆ ಇಲ್ಲ ***** Read More
ಹನಿಗವನ ಊನ ಪಟ್ಟಾಭಿ ಎ ಕೆ May 24, 2018April 10, 2018 ನನ್ನವಳದ್ದು ಎಲ್ಲಾ ಸರಿ ಆದರೆ ಬರೀ ಮೌನ; ಅದೊಂದೆ ಅವಳಲ್ಲಿ ಊನ! ***** Read More
ಹನಿಗವನ ಅವತಾರ ಪರಿಮಳ ರಾವ್ ಜಿ ಆರ್ May 23, 2018April 8, 2018 ಹತ್ತಾವತಾರ ಮಗಳ ಹೆತ್ತಾವತಾರ ಮಾವನ ಅವತಾರ! ***** Read More
ಹನಿಗವನ ನಿನ್ನದೇ ಎಲ್ಲ ಲತಾ ಗುತ್ತಿ May 20, 2018February 13, 2019 ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! ***** Read More
ಹನಿಗವನ ಇತಿಹಾಸ ಪಟ್ಟಾಭಿ ಎ ಕೆ May 17, 2018April 10, 2018 ತಿರುಚಿ ಹೇಳುವ ಇತಿಹಾಸ ತರುತ್ತದೆ ಅತಿಹಾಸ! ***** Read More