ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೬ ರೂಪ ಹಾಸನ March 5, 2019April 9, 2019 ಹಸಿವಿನ ಸ್ವಾರ್ಥಕ್ಕೆ ಸಿಕ್ಕು ನುಚ್ಚು ನೂರಾಗುವ ರೊಟ್ಟಿಯೆಂಬೋ ಸಂತ ಹಸಿವಿನ ಒಡಲಲ್ಲಿ ಸದ್ದಿಲ್ಲದೇ ಮೆಲ್ಲನೆ ಬಿತ್ತುತ್ತದೆ ಸಾವಿರಾರು ಪ್ರೀತಿಯ ಬೀಜ. Read More
ಹನಿಗವನ ಸೂರ್ಯ ದಂಡೆ ಪರಿಮಳ ರಾವ್ ಜಿ ಆರ್ March 5, 2019February 19, 2019 ಸೂರ್ಯದಂಡೆಯಲಿ ಕಿರಣ ಒಂದು ಚಂದ್ರಕೆಯ ಸ್ವಪ್ನದ ಕಾಮನ ಬಿಲ್ಲು ಎದೆಯಲ್ಲಿ ಹೊತ್ತು ಬೆಳಗುತ್ತಿತ್ತು ***** Read More
ಹನಿಗವನ ಲಿಂಕು ಶ್ರೀವಿಜಯ ಹಾಸನ March 3, 2019January 6, 2019 ಚುಟುಕು ಬರೆಯಲು ಹೊಳೆಯಲಿ ಲಿಂಕು ಎರಡು ಸಾಲು ಬರೆದೊಡನೆ ಮುಗಿಯಿತು ಇಂಕು ಕುಣಿಯಲಾರದವಳೆಂದಳಂತೆ ನೆಲಡೊಂಕು ಇಲ್ಲಾ ನನ್ನ ಲೇಖನಿಯ ತುದಿಯೇ ಕೊಂಕು ***** Read More
ಹನಿಗವನ ಎಂಕು ಪಣಂಬೂರಿಗೆ ಶ್ರೀನಿವಾಸ ಕೆ ಎಚ್ March 1, 2019February 15, 2019 ಅಲ್ಲಿಗೆ ಅಲ್ಲಿಗೆ ಎಂದು ನಾನಂದದ್ದು ನಿಜ ಮಹರಾಯ ಆದರೆ ಯಾಕೆ ಎಲ್ಲಿಗೆ ಎಂದೊಂದು ಮಾತನ್ನೂ ಕೇಳದೆ ನೀನು ಸದ್ದಿಲ್ಲದಂತೆದ್ದು ಬಿಡುವುದೇ ದಿಲ್ಲಿಗೆ? ***** Read More
ಹನಿಗವನ ಕನ್ನಡಮ್ಮ ಪಟ್ಟಾಭಿ ಎ ಕೆ February 28, 2019June 10, 2018 ಕನ್ನಡಮ್ಮನಿಗೆ ನವ ಅಂಬರ ಪ್ರತಿ ನವಂಬರ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೫ ರೂಪ ಹಾಸನ February 26, 2019April 9, 2019 ತಿನ್ನುವ ಮೊದಲೂ ನಂತರವೂ ಹೆಸಿವು ಅಸ್ವಸ್ಥ. ರೊಟ್ಟಿ ಸದಾ ನಿರುಮ್ಮಳ ಏನೇನೂ ಆಗಿಯೇ ಇಲ್ಲವೆಂಬಂತೆ ತಟಸ್ಥ. Read More
ಹನಿಗವನ ಸೂರ್ಯನ ಹೆಜ್ಜೆ ಪರಿಮಳ ರಾವ್ ಜಿ ಆರ್ February 26, 2019February 19, 2019 ಸೂರ್ಯನ ಹೆಜ್ಜೆಗೆ ಭೂಮಿಯ ಗೆಜ್ಜೆ ವ್ಯೋಮಕಾಶದ ಅನಂತಗೀತಕೆ ರಾಗ ತಾಳ ಲಯ ಶಾಂತಿಯ ಸಜ್ಜೆ ***** Read More
ಹನಿಗವನ ತಳಹದಿ ಶ್ರೀವಿಜಯ ಹಾಸನ February 24, 2019January 6, 2019 ಮಕ್ಕಳಿಗೆ ಹಾಕಬೇಕು ಶಿಕ್ಷಣದ ತಳಹದಿ ಯಾರೂ ಕದಿಯದ ವಿದ್ಯೆಯೆಂಬ ಶ್ರೀನಿಧಿ ಕೋಟಿ ಕೋಟಿ ಬೆಳ್ಳಿ ಬಂಗಾರ ನಶ್ವರ ನೀವು ನೀಡಿದ ವಿದ್ಯೆಯೊಂದೇ ಅಮರ ***** Read More
ಹನಿಗವನ ದೂರವಾಣಿ ಶ್ರೀನಿವಾಸ ಕೆ ಎಚ್ February 22, 2019February 15, 2019 ನಮಗಿರುವ ಒಬ್ಬನೇ ಮಾಣಿ ಅವನ ಮುದ್ದಿನ ರಾಣಿ ಇಬ್ಬರೂ ವಿದೇಶದಲ್ಲಿ ಒಳ್ಳೇ ಕೆಲಸ ಹಿಡಿದು ಅಲ್ಲೇ ನೆಲಸಿದ ಮೇಲೆ, ನಮಗೇನಿದ್ದರೂ ಉಳಿದಿರುವುದು ಬರೀ ದೂರವಾಣಿ ***** Read More
ಹನಿಗವನ ಎಡಬಿಡಂಗಿ ಪಟ್ಟಾಭಿ ಎ ಕೆ February 21, 2019June 10, 2018 ಅಂಗಡಿಗೆ ಹೋಗಿ ಕೊಂಡೆನೊಂದು ಅಪರೂಪದ ಅಂಗಿ; ಧರಿಸಲೀಗ ನಾನು ಎಡಬಿಡಂಗಿ! ***** Read More