ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೮ ರೂಪ ಹಾಸನ March 19, 2019April 9, 2019 ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ. Read More
ಹನಿಗವನ ಸೂರ್ಯಪ್ರಸ್ಥಾನ ಪರಿಮಳ ರಾವ್ ಜಿ ಆರ್ March 19, 2019March 19, 2019 ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು ***** Read More
ಹನಿಗವನ ಪ್ರಪಾತ ಶ್ರೀವಿಜಯ ಹಾಸನ March 17, 2019March 17, 2019 ಆಶೆಗಳ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದವು ಗಗನಕ್ಕೆ ಹಿಡಿಯಲು ಹೋದವರೆಲ್ಲಾ ಬಿದ್ದರು ಪ್ರಪಾತಕ್ಕೆ ***** Read More
ಹನಿಗವನ ಜೆಂಡರ್ ಶ್ರೀನಿವಾಸ ಕೆ ಎಚ್ March 15, 2019March 15, 2019 ಕ್ಯಾಲೆಂಡರ್ ನ್ಯೂಟ್ರಲ್ ಜೆಂಡರ್ ಯಾಕೆಂದರೆ ಗಂಡೂ ಹುಟ್ಟಬಹುದು ಹೆಣ್ಣು ಹುಟ್ಟಬಹುದು, ಎರಡು ಅಲ್ಲದ್ದೂ ಹುಟ್ಟಿಬಿಡಬಹುದು. ***** Read More
ಹನಿಗವನ ಬರ ಪಟ್ಟಾಭಿ ಎ ಕೆ March 14, 2019March 14, 2019 ದೇಶದಲ್ಲಿ ಬರ ಎಂಬ ಅಬ್ಬರ ಒಂದು ಕಡೆ; ಹಣದುಬ್ಬರ ಮತ್ತೊಂದೆಡೆ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೭ ರೂಪ ಹಾಸನ March 12, 2019April 9, 2019 ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ. Read More
ಹನಿಗವನ ಸೂರ್ಯೋಪಾಸನೆ ಪರಿಮಳ ರಾವ್ ಜಿ ಆರ್ March 12, 2019March 12, 2019 ಚಂದ್ರದಂಡೆಯಲಿ ಬೆಳದಿಂಗಳಲಿ ಕರಗಿ ನಕ್ಷತ್ರ ಒಂದು ಸೂರ್ಯೋಪಾಸನೆಯಲಿ ಆಲಾಪಿಸುತಿತ್ತು ***** Read More
ಹನಿಗವನ ಸಂಚಕಾರ ಶ್ರೀವಿಜಯ ಹಾಸನ March 10, 2019January 6, 2019 ಈಗಂತೂ ಸಾಮಾನ್ಯ ರಸ್ತೆ ಅಪಘಾತ ಎದೆ ನಡುಗಿಸುವ ಭೀಕರ ಆಘಾತ ಚಾಲಕರ ಸ್ವಚ್ಫಂದತೆಯ ವಿಹಾರ ಜನಸಾಮಾನ್ಯರ ಪ್ರಾಣಕ್ಕೆ ಸಂಚಕಾರ ***** Read More
ಹನಿಗವನ ಕ್ಯಾಲೆಂಡರ್ ಶ್ರೀನಿವಾಸ ಕೆ ಎಚ್ March 8, 2019February 15, 2019 ನಾವು ಯಾವಾಗಲಾದರೊಮ್ಮೆ ನೋಡುತ್ತೇವೆ ಕ್ಯಾಲೆಂಡರ್ ಆದರೆ ಅದನ್ನು ದಿನವು ನೋಡಿ ಬಡ್ಡಿ ಎಣಿಸುತ್ತಾನೆ ಪಾನ್ ಬ್ರೋಕರ್, ಮನಿಲೆಂಡರ್. ***** Read More
ಹನಿಗವನ ಉಬ್ಬರವಿಳಿತ ಪಟ್ಟಾಭಿ ಎ ಕೆ March 7, 2019June 10, 2018 ಸಮುದ್ರ ಮತ್ತು ಹಣ ಒಂದಕ್ಕೊಂದು ಉಂಟು ನಂಟು; ಉಬ್ಬರವಿಳಿತಗಳು ಎರಡಕ್ಕೂ ಉಂಟು! ***** Read More