Home / ಕವನ / ಕವಿತೆ

ಕವಿತೆ

ಬೆಳಗು ದೀಪವೆ ಬೆಳಗುತಿರು ನೀ….. ನಿನ್ನ ಬೆಳಕಲಿ ಗುರಿಯಿದೆ….. ಅನಂತ ನಿಶೆಯನು ದೂಡೋ ನಿನ್ನಯ ನಿಯತಿಯಣತಿಗೆ ಗೆಲುವಿದೆ….. ನಿತ್ಯ ಮೂಡೋ ಸತ್ಯ ನೇಸರ ತುಂಬಿದಂಬರ ಕೀರ್ತಿಗೆ….. ಧ್ಯಾನ ಮನನದ ಗಾನ ತುಂಬುರ ಚಿದಂಬರಗೂಢ...

ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ|| ಭವಸಾಗರದೊಳು ಮುಳುಗಿ ಮುಳುಗುತಿರೆ ನವಿದು ನವಿದು ಯಮರಾಜನು ಕೊಲುವಾ ||ಅ. ಪ|| ಒಂಟೆಯ ಮೇಲೆ ಹತ್ತಿದೆನವ್ವಾ ಗಂಟೆಯ ನುಡಿಸಿದೆ ತಾಯವ್ವ ಕಂಟಕ ಹರಿಸಿ ಸೊಂಟರಗಾಳಿಯ ದಾಂಟಿನಡಿದು ಮತ್ತೆಂಟುಕೋ...

  ಸಂಜೆಗತ್ತಲಿನ ಸಂಗೀತವನ್ನು ಮೆಚ್ಚಿ ಬಂದು ಕುಳಿತಿದ್ದಾನೆ, ಅವನು ಬೆಚ್ಚಗೆ ಅವಳನ್ನೊದ್ದುಕೊಂಡು. ಗೂಡಿನ ಹೂವುಗಳು ಸ್ವೇಚ್ಛೆಯಾಗಿ ಮಿಡುಕಿದ ನಂತರ ಹೊರಗಿನ ಗಾಳಿ ಅಲೆ‌ಅಲೆಯಾಗಿ ಅಪ್ಪಳಿಸಿದೆ. ಕಾಡಿನ ಥಂಡಿಯ ವಾತಾವರಣದಲ್ಲಿ ಅವಳು ಕಲಿಸಿದ ...

ಮರಣಕ್ಕೆ ಒಳಗಾಗೊ ನರಕುರಿಗಳೆ ಅರುವಿರಲಿ ಸಾರವೆ ಕೇಳಿರಿ ||ಪ|| ಮರೆಯದೆ ಶ್ರೀಗುರುಮಂತ್ರ ಬರದೋದಿ ಜಪಿಸುತ ಸ್ಮರಣೆದಪ್ಪಲಾಗದಲೆ ತಕ್ಕೊಳ್ಳಿರಿ ||೧|| ದೇಹದೊಳಗೆ ಇದ್ದು ಮಾಯೆ ನೋವಿಗೆ ಬಿದ್ದು ಸಾವಿಗಂಜುತ ಬಾಯಿಬಿಡಬೇಡಿರಿ ಆಯತೀರದ ಮುನ್ನ ಜೀವಪರಮ...

(ತೊಗಲುಬೊಂಬೆಯಾಟ) ನೀಡಿರಮ್ಮ ಎದೆಯ ಹಾಲ ನಿಮ್ಮ ಕೂಸಿನ ಜೀವ ಪಾಲು ನೀಡಿ ಅಕ್ಕ ನೀಡಿ ತಂಗಿ ನೀಡಿ ತಾಯಿ ಎದೆಯ ಹಾಲು || ಜೀವದಮೃತ ಎದೆಯ ಹಾಲು ಸಾಟಿಯೆಲ್ಲಿದೆ ಮಗುವ ಪಾಲು ಜೀವ ಜೀವವ ಧಾರೆ ಎರೆದು ಒಕ್ಕಳ ಬಳ್ಳಿ ಕಿತ್ತು ಬಂದಿದೆ || ನಿಮ್ಮ ಬದುಕಿನ...

ಹುಟ್ಟಿದ್ದು ಹೊಲಿಮನಿ ಬಿಟ್ಹೊಂಟ್ಯೋ ಕಾಯ್ಮನಿ ಎಷ್ಟಿದ್ದರೇನು ಖಾಲಿಮನಿ ||ಪ|| ವಸ್ತಿ ಇರುವ ಮನಿ ಗಸ್ತಿ ಇರುವ ಮನಿ ಶಿಸ್ತಿಲೆ ಕಾಣೂವ ಶಿವನ ಮನಿ ||೧|| ಚಿಂತೆ ಕಾಂತೆಯ ಮನಿ ಸಂತಿ ಸವತಿಯ ಮನಿ ಅಂತು ಬಲ್ಲವರಿಗೆ ಆಡೂ ಮನಿ ||೨|| ಒಂಭತ್ತು ಬಾಗಿಲ...

ಬರಬಾರದೋ ಯೋನಿಯೊಳು ಜನಿಸಿ ತಿಳಿದು ಒಂದೊಂದು ಎಣ‌ಎಣಿಸಿ ||ಪ|| ರಕ್ತದಿ ಬಿದ್ದು ಬಂದಿಯೋ ಎದ್ದು ಬಂಧನದೊಳು ಬಂದು ಸಂದಿಸಂದಿಗೆ ||೧|| ಸಾವು ಸಂಗತಿಯಾಗಿ ಏಜೀದನ ಒಳಪೊಕ್ಕು ಮಾಯಕ್ಕೆ ಮರುಳಾಗಿ ಮಣ್ಣುಗೂಡಿಸಿ ||೨|| ಧರಿಯೊಳು ನವಲಗುಂದ ನಾಗಲಿಂಗ ಪ...

ಹೋಗುತಿಹುದು ಕಾಯ ವ್ಯರ್ಥ ಇದರ ಲಾಘವ ತಿಳಿದವ ಯೋಗಿ ಸಮರ್ಥ ||ಪ|| ಏಳು ಜನ್ಮಾಂತರದಿನವು ಹೀಂಗ ಹೇಳದೆ ಹೋದವು ನಿನಗಿಲ್ಲೋ ನೆನಹು ಭೋಗಲಂಪಟ ಸುಖಘನವು ಭವ ರೋಗದಿ ಮರಣಕ್ಕೆ ಆಯಿತೋ ಅನುವು ||೧|| ಬದುಕೇನು ಮಾಡಿದಿ ಇಲ್ಲೆ ಸುಳ್ಳೇ ಮುದುಕ್ಯಾಗಿ ಮೆರದ...

ಬೆಂಗಳೂರಿನ ಗಾಳಿಮಳೆಗೆ ಮೈ ಒಡ್ಡಿ ಮಲಗುವುದು ಸುಖದಾಯಕವೆನಿಸುತ್ತದೆ; ಎಲ್ಲೋ ಬೇರ್ಪಟ್ಟ ಕನಸುಗಳು ಮತ್ತೊಮ್ಮೆ ಸಾಕಾರಗೊಂಡಂತೆ. ಈ ವೇಳೆ ವಸತಿಗೃಹಗಳಲ್ಲಿ ಕಾಲ ನೂಕುತ್ತಿರುವ ಜನ ಕಳ್ಳ ನೋಟಗಳಲ್ಲಿ ತಲ್ಲೀನರಾಗಿರುತ್ತಾರೆ. ಕೋಣೆ ಬಾಗಿಲು ಎಡತಾಕುವ,...

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ ತೊರೆ, ನದಿಗಳ ಹಿಮದ ಜಾರುಂಡೆಗಳಲಿ ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ ನರ್ತನ ಗೈಯ್ಯುತಿದ್ದವು ಸಾವು ನೋವುಗಳು ತಾಂಡವ ರೂಪದ ವೀರಯೋಧರು ಭಾರತಾಂಬೆಯ ಹೆಮ್ಮೆ ಕುವರರು ಚಳಿಗಾಳಿ ಹಸಿವೆನ್ನದೆ ಜೈಹಿಂದ್ ಎನ್ನು...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...