ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಆ ಸರ್ಕಲ್ಲೇ ಹಾಗೆ ಭಯಪಡಬೇಡಿ, ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು. ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು ಅದೇನು ತರಾತುರಿ ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ...

ಸೆರಗು

ಅದೇ ಮೊದಲನೆಯ ಸಲ ಸೀರೆ ಉಟ್ಟು ಮಾಂಗಲ್ಯಕಟ್ಟಿಸಿಕೊಂಡ ಹುಡುಗಿ- ಮದುವೆ ಮುಗಿಸಿ ಬಿಟ್ಟುಹೊರಡುವ ತಂದೆತಾಯಿಯರ ಅಗಲಿಕೆಯ ನೋವಿಗೆ ಅರಿಯದೇ ಕಣ್ಣೀರು ತುಂಬಿದ್ದು ಬಿಕ್ಕುತ್ತ ಸೆರಗಂಚಿನಿಂದ ಕಣ್ಣೊರಸಿಕೊಳ್ಳುವ ಮದುವಣಗಿತ್ತಿ- ಕಂಪ್ಯೂಟರ್ ಮೇಲೆ ಕೈಚಳಕವಾಡಿಸಿ ಹಾಯ್ ಸುಜಿ,...

ಗರ್ದಿಗಮ್ಮತ್ತು ಮತ್ತು ಹಾಲಿವುಡ್

ನಡುರಾತ್ರಿ ಜೋರಾಗಿ ಮಳೆ ಬೀಳಾಕ ಸುರುವಾಗಿತ್ತು ಹಾಲಿವುಡ್ ಪಿಕ್ಚರ್ ಅರ್ಧನೋಡಿ ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು. ಅದರ ಕನಸು ಬಿದ್ದದ್ದು ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ ದಿಲ್ಲಿದರ್ಬಾರ್ ಕುತುಬ್‌ಮಿನಾರ್ ತಾಜಮಹಲ್ ಬಾಂಬೆ ಬಜಾರ್ ಸುರಯ್ಯಾ...

ನಾವು

ಯಾರಿಗಾದರೂ ಏನಾದರೂ ಆಗಬಹುದು ಮುಂದಿನ ಕ್ಷಣಗಳಲಿ ಸಾಯಬಹುದು ಸ್ವಲ್ಪದರಲ್ಲಿಯೇ ಮರುಹುಟ್ಟು ಪಡೆಯಲೂಬಹುದು. ಗಳಿಸಬಹುದು ಕಳೆದುಕೊಳ್ಳಲೂಬಹುದು ಹೀಗೇಽ ಇನ್ನೂ ಏನೇನೋ...... ಆದರೂ ಒಳತೋಟಿಗೆ ಕನಸುಗಳೇನೂ ಕಡಿಮೆ ಇಲ್ಲ ಸದ್ದು ಗದ್ದಲಲ್ಲೇ ಹೆಣೆದುಬಿಡುವ ಸೌಧಕ್ಕೂ ಗೆದ್ದಲಿರುವೆಗಳ ಕಾಟ...

ಕಾಷ್ಠ

ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ ಒಳ ಹೊರಗೆಲ್ಲ ಸುಟ್ಟು ಕರಕಲು ಬೆಚ್ಚನೆಯ ಬೂದಿಯೊಳಗೆ  ಸದಾ ಅವಳ ಚಿತ್ರ. ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು ಬರಸೆಳೆತದ ಚಿಗುರು ಎಲೆ ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ ಮನೆ ತುಂಬ ರಂಗೋಲಿಯ...

ಅಂದುಕೊಂಡಷ್ಟು…..

ಕೊನೆಗೂ ಮರುಭೂಮಿ ದಾಟಿ ಬ೦ದದ್ದಾಯಿತು- ಎಂದುಕೊಂಡದ್ದು ಎಷ್ಟರಮಟ್ಟಿಗೆ ನೆಮ್ಮದಿ. ಮಳೆಯೊಳಗೆ ತೇಲಿಬಿಡುವ ಕನಸುಕಂಡು ಹಸಿರುನಾಡಿನಲ್ಲಿದ್ದದ್ದೇನೋ ನಿಜ. ರಸ್ತೆ ತುಂಬ ಹೊಗೆ ಗಂಟುಮುಖ ಗಬ್ಬುವಿಚಾರಗಳ ಮೂಟೆ ಎಲ್ಲೆಲ್ಲೂ ದೊಡ್ಡವರ ದಡ್ಡತನ ಸಣ್ಣತನಗಳ ಕೂಪ ವಿಶಾಲತೆ ಕಾಣದ...

ನೆನಪು ನೆನಪು ನೆನಪು

ಕೆಂಪುಸಮುದ್ರದ ಕಡಲಿನೊಳಗಿನ ಮೀನುಗಳಿಗೆ ಮುತ್ತಿಟ್ಟ ನೆನಪು, ಮರುಭೂಮಿಯ ಬಿಸಿ ಉಸುಕಿನೊಳಗೆ ಹೆಸರು ಬರೆದು ಓಡಾಡಿದ ನೆನಪು, ಸೊಕ್ಕಿನ ಸೂರ್ಯ ಒರಟು ಕ್ಯಾಕ್ಟಸ್‌ ತರಚಿ ಉರಿಸಿದ ನೆನಪು. ಬುರ್ಕಾದೊಳಗಿನ ಕಥೆ ಕನಸುಗಳು ಹೇಳುವ ಕಣ್ಣುಗಳ ನೆನಪು,...

ಮುಖವಾಡ

ಅಂತರಂಗ ಬಹಿರಂಗಕ್ಕೊಂದೊಂದು ಆಕಾರ ವಿಕಾರ ಆದರೂ ಸಾಕ್ಷಾತ್ಕಾರಿಯ ಮಾತು ದುರಹ೦ಕಾರಿಯ ವರ್ತನೆ ಮನಸೇ, ನಿನಗೆಷ್ಟೊಂದು ಮುಖಗಳು! ಮನ ಮನಸಿನೊಳಗೆ ಸ್ಪರ್ಧೆಗಿಳಿಸಿ ಬೆಂಕಿ ನಾಲಿಗೆಗೆ ಎಲ್ಲವನೂ ಎಲ್ಲರನೂ ಕರಕಲಾಗಿಸಿ ಮೃತ್ಯು ಮಂಟಪಕೆ ಹೂಮಾಲೆ ಹಾಕುವ ಕೈಗಳು....

ಬ್ರಿಗೇಡ್ ರಸ್ತೆ

ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ ಮೌನ ಮಾತನಾಡಿಯೇ ಬಿಡುವ ನವಿಲುಗರಿಯೂ ಚಿತ್ತಾರಕೆ ಚಿಗುರಿ ಮುದುಕರೂ ಹರಯರಾಗುವ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ- ಹದಗೊಳ್ಳುವ ಮನಸುಗಳ ತು೦ಬೆಲ್ಲ ಕನಸಿನ ಸಾಮ್ರಾಜ್ಯದ ಲಗ್ಗೆ ದಶದಿಕ್ಕು ದಶಾವತಾರದ ಚಿತ್ತ...

ವಾಸ್ತವ

ಮರುಳು ಮಾಡುವ ಹೆಜ್ಜೆಗಳು ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ ಭ್ರಮೆಬೇಡ ಪ್ರಮಾಣಪತ್ರ ಬೇಕೆ ಗೊತ್ತು ಗುರಿ ಇಲ್ಲದ ಹೊತ್ತಿಗೆ ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು. ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ ಒಳಗೊಳಗೇ ಕೊರೆವ ಚಳಿ...