ಗಳಿಗೆಬಟ್ಟಲ ತಿರುವುಗಳಲ್ಲಿ – ೪೯

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೮

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೭

ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೪೨

ಚರಿತ್ರೆಯಲಿ ದಾಖಲಾಗುವ ಹಂಬಲದಲಿ ಹಸಿವು ನೂರಾರು ದಾರಿಗಳಲಿ ಚೆಲ್ಲಾಪಿಲ್ಲಿ. ಆಗೊಮ್ಮೆ ಈಗೊಮ್ಮೆ ಮಾತ್ರ ದಾರಿಯೇ ಇರದ ದುರ್ಗಮಾರಣ್ಯದ ರೊಟ್ಟಿಯ ಅಕ್ಕರೆಯ ಸೆಳೆತ.

ಗಳಿಗೆಬಟ್ಟಲ ತಿರುವುಗಳಲ್ಲಿ – ೪೧

ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ. *****