ಆರನೇ ಕ್ಲಾಸಿನ ಹುಡುಗಿ ಹೋಂ ವರ್ಕ್ ಮಾಡದೇ ಶಾಲೆಗೆ ಬರುತಿದ್ದಳು. ಮೇಷ್ಟ್ರಿಗೆ ಕೋಪ ಬಂದು "ಶಾಲೆಯ ಗಿಡ ಮರಗಳಿಗೆ ನೀರು ಹಾಕಿ ಬಾ" ಎಂದು ಶಿಕ್ಷೆ ಕೊಟ್ಟರು. ಹುಡುಗಿಗೆ ಬೇಸರವೂ ಆಗಲಿಲ್ಲ. ಕಣ್ಣೀರು ಬರಲಿಲ್ಲ....
ಎರಡು ಪುಟ್ಟ ಹುಡುಗಿಯರು "ಟೂ, ಟೂ" ಎಂದು ಜೊತೆ ಬಿಟ್ಟರು. ಒಂದು ಪಟ್ಟು ಹುಡುಗ ಬಂದು ಕೇಳಿದ "ಏಕೆ ಟೂ ಬಿಡ್ತೀಯಾ?" ಎಂದು. "ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ....
ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ "ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?" ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನನ್ನ ಪ್ರಿಯೆ...
ಅವನೊಬ್ಬ ಕಾಮುಕ. ಮೊದಲ ಹೆಂಡತಿಗೆ ಮೂರು ಮಕ್ಕಳಾದ ಮೇಲೆ ಅವಳನ್ನು ಬಿಟ್ಟು ಎರಡನೇಯ ಮದುವೆ ಆದ. ಅವಳಿಗೆ ಎರಡು ಮಕ್ಕಳಾದ ಮೇಲೆ ಮೂರನೇಯವಳನ್ನು ಕಟ್ಟಿ ಕೊಂಡ. "ನನ್ನದು ಇದೀಗ ಪುನರ್ ಜನ್ಮ. ನಾನು ಇವಳೊಂದಿಗೆ...
ಹುಡುಗಿ ತಪ್ಪು ಹೆಜ್ಜೆ ಇಟ್ಟಿದ್ದಳು. ಸಮಾಜವನ್ನು ಎದುರಿಸಲಾರದಾದಳು. ಸತ್ಯವನ್ನು ಹೂತಿಡಲು ಆತ್ಮಹತ್ಯೆ ಮಾಡಿಕೊಂಡಳು. ಅವಳು ಸತ್ತಳು. ಸತ್ಯ ಸಾಯಲಿಲ್ಲ. "ಅವಳಿಗೆ ಮೂರು ತಿಂಗಳು ತುಂಬಿತ್ತು" ಎಂಬ ಸತ್ಯ ಎಲ್ಲರ ಬಾಯಲ್ಲೂ ಕುಣಿದಾಡುತಿತ್ತು. *****