ಹನಿಗವನ ಸುವ್ವಾಲೆ ಪರಿಮಳ ರಾವ್ ಜಿ ಆರ್ January 3, 2018January 2, 2018 ಬುಗರಿಯ ಬುಡದ ಮೊನೆಯ ಮೊಳೆ ನಾನು ಬಿಡಿಸಿರುವೆ ನೆಲದಲ್ಲಿ ಬಾಳ ರಂಗೋಲೆ ಹಾಡಿ ಸುವ್ವಾಲೆ! ***** Read More
ಹನಿಗವನ ಕತ್ತಲೆ – ಬೆಳಕು ಪರಿಮಳ ರಾವ್ ಜಿ ಆರ್ December 27, 2017October 15, 2017 ಮೊಗ್ಗಲ್ಲಿ ಅಡಗಿತ್ತು ಕತ್ತಲೆಯ ಇರಳು ಹೂವಲ್ಲಿ ಅರಳಿತ್ತು ಬೆಳಗಿನ ಬೆಳಗು ***** Read More
ಹನಿಗವನ ನಾನು ಪರಿಮಳ ರಾವ್ ಜಿ ಆರ್ December 20, 2017October 15, 2017 ತಿರುಗುವ ಬುಗುರಿಯು ನಾನೇ ಮುಟ್ಟುವ ಗುರಿಯು ನಾನೇ! ***** Read More
ಹನಿಗವನ ಮೌನ ಪರಿಮಳ ರಾವ್ ಜಿ ಆರ್ December 16, 2017October 15, 2017 ಎದೆಯಲ್ಲಿ ಢಬಢಬ ನಾದ ಬ್ರಹ್ಮ ತುದಿಯಲ್ಲಿ ಶೂನ್ಯ ಮಸಣ ಮೌನ! ***** Read More
ಕವಿತೆ ಪ್ರೀತಿ ಪರಿಮಳ ರಾವ್ ಜಿ ಆರ್ December 13, 2017October 15, 2017 ಪ್ರೀತಿ ಹೃದಯಗಳ ಹುಡುಕಾಟವಲ್ಲ ಹುಡುಗಹುಡಿಗಿಯರ ಹುಡುಗಾಟವಲ್ಲ ತಾಳಿಕಟ್ಟಿದ ಗಂಡನ ಗುಡುಗಾಟವಲ್ಲ ಮೇಘ ಮೌನದಲಿ ಮಿಂಚಾಟದಲಿ ಮೂಡಿ ಬರುವ ವಿದ್ಯುಲ್ಲತಾಲಾಪ! ***** Read More
ಹನಿಗವನ ಇಣಕು ನೋಟ ಪರಿಮಳ ರಾವ್ ಜಿ ಆರ್ November 29, 2017October 15, 2017 ಸೂರ್ಯನಂತೆ ಬೆಳಗಬೇಕೆಂದು ನಕ್ಷತ್ರದಂತೆ ಮಿನುಗುತ್ತೇವೆ ಪೂರ್ಣತೆ ಪಡೆಯಲು ಬಾಳನ್ನು ಓಣಿಯಲ್ಲಿ ಇಣಕಿ ನೋಡುತ್ತೇವೆ! ***** Read More
ಹನಿಗವನ ಕನಸು ಪರಿಮಳ ರಾವ್ ಜಿ ಆರ್ November 22, 2017October 15, 2017 ನಿದ್ರೆಯಲಿ ಕೊರಡಾಗಿ ಸಾಯುತ್ತೇನೆ ಬದುಕಿನಲಿ ಕೊರಡ ಕೊನೆರಿಸಿ ಕನಸು ಕಾಣುತ್ತೇನೆ ***** Read More
ಕವಿತೆ ಗುಡಿಸಲು-ಮಹಲು ಪರಿಮಳ ರಾವ್ ಜಿ ಆರ್ November 15, 2017October 15, 2017 ಮಜಲು ಮಜಲಿನಾ ಎತ್ತರದ ಮಹಲು ಆಕಾಶವ ನುಂಗಿತ್ತು ಸೂರ್ಯಚಂದ್ರರ ಬಾಚಿತ್ತು ಗಾಳಿಯ ರಾಚಿತ್ತು ಗುಡಿಸಲು ವಾಸಿಗೆ ಕಣ್ಣಿಗೆ ಕತ್ತಲು ಕಟ್ಟಿತ್ತು ಸೂರ್ಯಚಂದ್ರ ನಕ್ಷತ್ರ ಆಕಾಶಕ್ಕೆ ದುಡ್ಡು ಕೊಂಡಿ ಹಾಕಿತ್ತು ***** Read More
ಹನಿಗವನ ಪ್ರೀತಿ – ದ್ವೇಷ ಪರಿಮಳ ರಾವ್ ಜಿ ಆರ್ November 8, 2017October 15, 2017 ತುತ್ತುಂಡು ಬಿಕ್ಕಿದರೆ ಖಾರ ತಿನಿಸು ತುತ್ತುಂಡು ಕಕ್ಕಿದರೆ ಹಳಸು ಉಣಸು ತುತ್ತುಂಡು ನಕ್ಕರೆ ಸಿಹಿಯ ಕನಸು ತುತ್ತುಂಡು ದುಃಖಿಸಿದರೆ ಕಹಿಯ ಮನಸು ***** Read More
ಹನಿಗವನ ಮಿನಿ ಕವನ ಪರಿಮಳ ರಾವ್ ಜಿ ಆರ್ November 1, 2017October 15, 2017 ಕವಿಯ ಮನದಂತೆ ಬೆಂಕಿಪೊಟ್ಟಣ ಬೆಂಕಿ ಕಡ್ಡಿಗಳು ಸುಮ್ಮನೆ ಮಲಗಿರುತ್ತವೆ ಮನದ ಪೆಟ್ಟಿಗೆಯಿಂದ ಹೊರ ತೆರೆದು ಗೀರಿದರೆ ಕುಡಿ ಬೆಳಕ ಬೀರುತ್ತವೆ ಮಿನಿ ಕವನಗಳಂತೆ! ***** Read More