ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ

ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ ಕೇಳುವಳು ನಿನ್ನ ಶ್ರೀಮಂತ ಪ್ರಶಂಸೆಯನು ; ಹೊನ್ನಿನಕ್ಷರಗಳ ಅಮೂಲ್ಯ ಪದ ಪಂಕ್ತಿಯಲಿ ಸಿಂಗರಿಸಿ ಎಲ್ಲ ಪ್ರತಿಭೆಗಳು ರಚಿಸಿದುದನ್ನು. ಒಳ್ಳೆನುಡಿ ಅವರು ಬರೆಯಲು, ನಾನು ಮನದೊಳಗೆ ಒಳ್ಳೆಯದ ಚಿಂತಿಸುವೆ....

ನನ್ನ ವಾಣಿಯ ನೀನು ವರಿಸಿದವನೇನಲ್ಲ

ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ...

ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು

ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು, ನನಗು ಗಟ್ಟಿಗನೊಬ್ಬ ನಿನ್ನ ಹೆಸರನು ಬಳಸಿ ಸಮೆಸಿರುವ ಅದಕೆಂದೆ ತನ್ನೆಲ್ಲ ಸತ್ವವನು, ಕಟ್ಟಿಹೋಗಿದೆ ನನ್ನ ನಾಲಿಗೆಯೆ ನುಡಿಯಳಿಸಿ. ನಿನ್ನ ಗುಣಶೀಲ ಸಾಗರದಲ್ಲಿ ತೇಲುವುದು ಹಿರಿಜಹಜು ಕಿರುದೋಣಿ ಭೇದ ಏನಿಲ್ಲದೆ....

ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ

ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ; ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ...

ನನ್ನ ವಾಣಿಗೆ ಸಾರವಾಗೆಂದು ಮರಮರಳಿ

ನನ್ನ ವಾಣಿಗೆ ಸಾರವಾಗೆಂದು ಮರಮರಳಿ ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ, ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ. ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು ಇನ್ನಿಂಥ ದಡ್ಡನನೂ...

ತೋರುವುದು ಕನ್ನಡಿ ಈ ಚೆಲುವು ಕರಗುವುದ

ತೋರುವುದು ಕನ್ನಡಿ ಈ ಚೆಲುವು ಕರಗುವುದ, ಗಡಿಯಾರ ಕೈಮುಳ್ಳು ಗಳಿಗೆಗಳು ಜರುಗುವುದ; ಈ ಖಾಲಿ ಪುಟಗಳಲಿ ಬರೆ ಮನದೊಳಿರುವುದ, ರುಚಿನೋಡಿ ಬಳಸು ಈ ಪುಸ್ತಕದ ಒಳತಿರುಳ. ಕನ್ನಡಿಯು ಬಿಂಬಿಸುವ ಮುಖದ ಮುರಿನೆರಿಗೆಗಳು ಕೆಳಕುಸಿದ ಗೋರಿಗಳ...

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ?

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು....

ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ

ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ, ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ; ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ. ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ ಕಾಲ...

ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆಹಿಡಿದು

ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆ- ಹಿಡಿದು ಜಾಮೀನಿರದೆ ಕೊಂಡೊಯ್ಯುತಿರುವಾಗ. ಈ ಬರೆಹ ತಾಗಿಕೊಂಡಿದೆ ನನ್ನ ಬಾಳಿಗೆ, ಇರಲಿ ಇದು ನಿನ್ನ ಬಳಿ, ನಿನಗಿತ್ತ ಸ್ಮಾರಕ. ಇವನು ನೋಡುತ್ತಿರಲು ಮೊಳೆಯುವುದು ತಾನಾಗಿ ನಿನಗಾಗಿ ಹರಸಿಟ್ಟ...

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ...