ಸಾಗಿದ ದಾರಿ

ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ... ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ... ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು ಹೊಸತನದ ಹರುಷ ಕಳೆದ ಬಾಲ್ಯದ ನೆನಪು...

ನಿಸರ್ಗ ಸ್ವರ್ಗ

ಹಚ್ಚ ಹಸಿರಿನ ಉಡುಪುಟ್ಟ ನಮ್ಮಯ ಕಾನನ ಧಾಮ ಸ್ವರ್ಗ ಸಮಾನ ನಿಸರ್ಗ ಸದಾ ಸಂತಸ ಚೆಲ್ಲುವ ಜೀವನದುಸಿರಿನ ತಾಣ ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ ಧರೆಯ ಚುಂಬನಗೈಯುತ ತರು-ಲತೆಗಳ ಸಿಂಚನಗೈಯುತ ಧಾವಿಸಿ ಹರಿಯುತಿಹದು ಜಲಧಾರೆಯ ಜುಳು......

ಜೀವನತೆರೆ

ಜೀವನವೆಂಬ ಸಾಗರದಲಿ ಕಾಣದ ನಾವಿಕನಾಶ್ರಯದಿ ಪಯಣಿಸುವ ಪಯಣಿಗರು ಪ್ರಯಾಸ-ಪರಿಶ್ರಮದಲಿ... ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ ನಿರ್ಭೀತಿ-ನಿರ್ಲಿಪ್ತತೆ... ಹೊರದೂಡುತ ಗೆಲುವನು ದೂರದಲಿ ಕಾಣುತ... ಧೈರ್ಯದ ಸವಾರಿಯಲಿ ನಡೆಯುವಾ ನಿರಾಶೆಯ ತೆರೆಗಳ ತಳ್ಳುತ... ಆಶಾ-ಹಕ್ಕಿಗಳಾಗಿ ಹಾರುತ ಬಯಕೆಯ ಬಾನಲಿ ತೇಲುತ...

ಮಲಪ್ರಭೆ

ಹಸಿರು ತುಂಬಿದ ವನಸಿರಿಯು ಚೆಲುವು ಧರೆಯ ಶೃಂಗರಿಸಿಹದು ಗಿರಿಕಾನನಗಳ ಮೆರಗು ರಂಗುಸಿರಿಯು ಹೆಚ್ಚಿಹದು ಮೋಡಗಳಿಗೆ ಮುತ್ತಿಡುತ ಧರೆಗೆ ಜಲಧಾರೆ ಚೆಲ್ಲುತಲಿ ರೈತನ ಸಂತಸ ಹೆಚ್ಚಿಸುತ ನೊಂದ-ಬೆಂದ ಜನಗಳಿಗೆ ನೀ ಧಾಮ ಕಾಮಧೇನು ನಿನ್ನಡಿಯಲಿ ಕುಣಿಯುತಿಹಳು...

ಕರುನಾಡು

ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು ಪ್ರಾಣವನು ನೀಡಿಯಾದರೂ ಉಳಿಸಬೇಕು ಕನ್ನಡವಾ... ಜೀವನ...

ಸಾಮ್ರಾಜ್ಞಿ

ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ ಕಂಡು ಕಣ್ಣೀರಿನ ಹೊಳೆ ಹರಿಸುತಿಹಳು ಕಣ್ಣು...

ಗೆಳೆಯ

ಮುಂಜಾವಿನಮಂಜಿನಂತೆ ತುಂತುರ ಮಳೆ ಹನಿಯಂತೆ ನೈದಿಲೆಯ ಚಲುವಿನಂತೆ ಒಲವು ಸೂಸುತಾ ಮರೆಯಾದೆ ಸ್ನೇಹ-ಪ್ರೀತಿಗಳ ಸಂಗಮದ ಸಾಕಾರದಲಿ ಫಲಾಪೇಕ್ಷ ಬಯಸದ ನಿರ್‍ಮಲ ಸ್ನೇಹ ಸೇತುವೆ ಬದುಕು-ಬವಣೆಗಳೆನ್ನದೆ ಜನಸ್ಪಂದನೆಯಲಿ ಸಂತಸ ಕಾಣುತ ನಂಬಿಗೆಯ ಬಂಧನದ ಬಾಂಧವ್ಯದ ಕ್ಷೀರ......

ಮಾತು ಮೌನವಾಗುತ್ತದೆ

-ರವಿ ಕೋಟಾರಗಸ್ತಿ ಮಾತು ಮೌನವಾಗುತ್ತಿದೆ ದಿನ.. ದಿನವು ಕ್ಷಣ.. ಕ್ಷಣವು ಜಗದೆಲ್ಲೆಡೆ ಬಾಯಿ ಚಾಚುತಿಹ ಕೋಮು-ಮತೀಯ ವಿಷ ಜಂತುವಿನ ಉದ್ದನೆಯ ಕರಿ ನಾಲಗೆಯ ಕಂಡು... ಮಾತು ಮೌನವಾಗುತ್ತಿದೆ ನಾಡಿನ ಉದ್ದಗಲು... ಶಾಂತಿ... ಸೌಹಾರ್ದತೆ ದೂಡಿ...

ರಕ್ಷಕ

ಶಿಕ್ಷಕ... ನೀ... ರಕ್ಷಕ ಭವ್ಯ ಭಾರತದ... ಅರಳುವ ಕುಡಿಗಳ ಆರಾಧಕ ನಿನ್ನ ರಕ್ಷೆಯಲಿ ಮಕ್ಕಳು ಅರಿತು ಬೆರೆತು ವಿದ್ಯೆಯ ಕಲಿತು ನುರಿತರೆ ಬೆಳೆಯುವದು ಬಾನೆತ್ತರಕೆ... ಪ್ರೀತಿ ವಾತ್ಸಲ್ಯ ಮಕ್ಕಳೊಡನೆ ಹಂಚಿಕೊಳ್ಳುತ ನೀರುಣಿಸಿ ಪೋಷಿಸುವ... ಕುಶಲ...

ಸಾವಿರಪದ ಸರದಾರ

ಸಾವಿರ ಪದ ಸರದಾರ ಸಾವು ಮುತ್ತಿತೇ ಧೀರಾ ಮೂಢ ಸಾವು.. ನಿನ್ನ ಅರಿಯದೆ.. ಅಟ್ಟಹಾಸದಿ ಒಯ್ಯುತಿಹನೆಂಬ ಭ್ರಮೆಯಲಿ ಒಪ್ಪಿಸುತಿಹದು ಅಹವಾಲ ಯಮನಿಗೆ ಇನ್ನ... ನಗುವಿನ ಚೆಲುವು ಇಂಪಾದ ಕೋಗಿಲೆ ಧ್ವನಿಯು ಜೀವ ತುಂಬಿ ಜನ್ಮ...