೧ ಸುಳಿಗಾಳಿ ತೀಡುತಿತ್ತು, ಮೆಲುನಗೆಯು ಮೂಡುತಿತ್ತು ಮೂಡಲಲಿ ವೈಭವವು ನಲಿದಾಡುತಿತ್ತು; ಸೀರುಂಬೆ ಸೀರುತಿತ್ತು, ಜತೆಗೂಡಿ ಜಾರುತಿತ್ತು ವೈಭವದಿ ಸೊಬಗಿನಲಿ ಆಡುತಿತ್ತು; ನಿಶೆಜಾರಿ ಚಲಿಸಿತ್ತು, ಉಷೆ ಬೀರಿ ನಲಿದಿತ್ತು ತಿಳಿ ಹೊಳೆಯ ಬಾನಿನಲಿದೋರಿ...

ನದಿನೇರದಿ ಸರಿವಂದದಿ ವನಸಲೆಯಲಿ ಮುಗುಳಂದದಿ ಗಿರಿಗಗನದಿ ಗೆಲುವಂದದಿ ಭುವಿಬಯಲಲಿ ಬಲುನಯದಲಿ ಮೆರೆಯುವ ಮೃದುಮಾಯಾ! ಬೆರೆಸಿಹೆ ಸವಿ ಛಾಯಾ! ಪಡುಬಾನಲಿ ಗೆಲುಹರುಷದಿ ಖಗಕುಕಿಲದ ಸವಿರಾಗದಿ ಝರಿಜಾಣ್ಮೆಯ ತಡಿಎಡೆಯಲಿ ಹೊಲಹಸುರಿನ ಸರಿಜತೆಯಲಿ ಮೆರೆಯುವ ...

ಹೂಗೊಂಚಲ, ಕೊನೆಮಿಂಚಲು ಮರದೆಲೆಗಳು, ನಿವಿರೇಳಲು ಬಂದುದು ವಸಂತ ತಂದುದು ಸಿರಿಸಂತಸ ಹಳಹಚ್ಚಲು, ಹಸುರಾಗಲು ಹೊಲಸುತ್ತಲು, ಸವಿಕಾಣಲು ಮೆರೆದುದು ವಸಂತ ತಂದುದು ಸಿರಿಸಂತಸ. ಗಿಡಮರದಲಿ, ಕುಕಿಲೇರಲು ಹೂಮುಗುಳಲಿ, ಭ್ರಮಹಾರಲು ಬಂದುದು ವಸಂತ ಸ೦ದುದು ...

೧ ನಸುಗಾಳಿ ಮೆಲ್ಲನೆ, ಸುಳಿಸುಳಿದು ತೆಳ್ಳನೆ, ತೀಡುತಿತು ಮೋದದಲಿ ಆನಂದವನದಿ; ಮುಗುಳಿನ ಸಲೆಕಂಪು, ಕುಕಿಲಗಳ ಕೊರಲಿಂಪು ಮನವನ್ನೆ ಮಿಡಿದಿತ್ತು ಸಂತಸದಿ ಅ೦ದು. ೨ ಝುರಿನೀರು ತಿಳಿ ಹರಿದು, ಚಿಗಿಚಿಗಿದು ನಡೆನೆಗೆದು, ಬನವನ್ನು, ಮನವನ್ನು ಏಕದಲಿ ಬ...

ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೧ ಕೊನೆಯ ಹಸುರ ಜತೆಯಸೇರಿ ಒಲುಮೆ ಮಿಲನ ಗೆರೆಯಕೂಡಿ ಬೆಳೆಯಬಾಳ, ಬಣ್ಣ ತೋರಿ ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೨ ಕಿರಿಯ ಎಳೆಯ ಬಾಲರೆಡೆ ಕೆಳೆಯ ಗೆಳತಿ ಮಿಳಿತದೆಡೆ ಹೊಸದುಹಾಡಿ, ಹರು...

ಅಂದು ನೀರವರಾತ್ರಿ! ಬೆಳೆಗಿದಳು ಚಲುಧಾತ್ರಿ! ಸುತ್ತುಮುತ್ತಲು ಸರಿದು, ಎತ್ತಲೆತ್ತಲು ಹರಿದು; ಮುಸುಕಿನಲಿ ನುಸುಳಿ ಮೆರೆದು! ಗಗನದಲಿ ಬಿಳಿಮುಗಿಲು, ಬಿಂಬ ಬಯಲಲಿ ನಗಲು; ನೀರವರಾತ್ರಿಯಲಿ, ಸೊಗದ ಶಾಂತಿಯಲಿ; ಧಾತ್ರಿ ಮೆರೆದಳು ನಸುಕಿನಲ್ಲಿ! ತಟನಿ...

ಜೀವನ ಝರಿಯಲ್ಲಿ ಜಾರುತಿಹೆ ನಾನು ಭಾವರಸ ಸುಪ್ತಿಯಲಿ ಸಂದು, ಮನಸಿಜನ ಮರೆಯಲ್ಲಿ, ಸುಳಿಗಾಳಿ ತೆರೆಯಲ್ಲಿ ತೂರುತಿಹೆ ಸಾದರದ ಸವಿಯನೆಣಿಸಿ, ಪ್ರೇಮಮಯ ಪಾವನದಿ ಮೂಡುವಲಿ ಭಾನು, ಬಾಗಿರುವೆ ಮೈದೋರಿ ಬಕುತಿ ತೋರಿ, ಅಭ್ಯುದಯ ಸಂಪತ್ತು, ಹುಮ್ಮಸದ ಹುರುಪ...

ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಸರಸೀತೀರದ ಮರದಾನೆರಳಲಿ ಸುಳಿವಾಗಾಳಿಯ ತೆರೆಯಾಮರೆಯಲಿ ಸುಳಿದಳು, ಸುಳಿದಳು, ಛಾಯಾ! ಮೆರೆದಳು, ಮೆರೆದಳು, ಮಾಯಾ! ಪಡುವಾಕಾ೦ತಿಯ ಬೆಳಕಾಕಳೆಯುತ ತೆಂಕಲಗಾಳಿಯ ಗೆಲುವಾತೋರುತ ಸುಳಿದಳು, ಸುಳ...

ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ? ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು! ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ! ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು! ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು; ಸಿ...

ಕುಟೀರವಾಸಿ, ಬಂಧುನಿವಾಸಿ! ಸೇರಿದ ದೇಗುಲ ಹೊತ್ತಿನಲಿ- ಮಿನಿಗಿತು ಭಾನು, ಹೊಳೆಸಿತು ವಿದ್ಯುತ್; ತಿಮಿರದ ತೀರದ ಕುಟೀರದಲಿ ಗಗನದ ನೋಟದ ಮಲೆಶಿಖರ ಥಳಥಳಿಸಿತು ವಿದ್ಯುತ್-ಮುಖರ. ಕುಟೀರವಾಸಿ, ಬ೦ಧುನಿವಾಸಿ! ಮೆರೆದನು ಭವನದ ಸನಿಹದಲಿ- ಉದರಿತು ಹನಿಹ...