ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ...

ಇರುವೆಗಳಿದಾವೆ

ಇರುವೆಗಳಿದಾವೆ ಜಾಗ್ರತೆ ಪುಟಾಣಿ ಇರುವೆಗಳು ಕಟಾಣಿ ಇರುವೆಗಳು ಎತ್ತಲೋ ಹೊರಟಿರ್‍ತ ಇತ್ತ ನೋಡೋಣಾಂತ ಸುತ್ತ ಬಂದಿವೆ ನಮ್ಮ ಅಟ್ಟುಂಬೊಳಕ್ಕೆ ಸಕ್ಕರೆ ತೆಗೆವಾಗ ಚೆಲ್ಲಿಬಿಟ್ಟೀರಿ ಸಕ್ಕರೆ ಎಂದರವಕ್ಕೆ ಪಂಚಪ್ರಾಣ ಬೆಲ್ಲದ ಡಬ್ಬವ ತೆರೆದೇ ಇಟ್ಟೀರಿ ಬೆಲ್ಲ...

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ ಸಂಗೀತ ಲೋಕದಲ್ಲಿ ಎದ್ದೆದ್ದು ಬಡಿದ ಘನ ಗಂಭೀರ ಸಮುದ್ರದಲೆಗಳು ಸ್ಥಬ್ಧವಾಗಿವೆ. ಮಿಲೆ ಸುರ್ ಮೇರ್ ತುಮ್ಹಾರಾ ತೊ ಸುರ್ ಬನೇ ಹಮಾರಾ ಭಾರತವನ್ನೊಂದುಗೂಡಿಸಿದ ತತ್ವ ಎಂತಹ ಮೋಡಿ ಆ ಗಾರುಡಿಗನದು?...

ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ ('ನಿನುವಿನಾ ನಾಮದೇಂದು' ಎಂಬ ತ್ಯಾಗರಾಜ ಕೃತಿಯಂತೆ) ಜಯಜಯಾ ನಮ್ಮೊಡೆಯಾ! ಜಗದೊಡೆಯಾ ಜಯಜಯಾ! ||ಪಲ್ಲ|| ಜಯಜಯ ಭಾರತದಜೊಡೆಯಾ! ಬಡವರೊಡೆಯ ಜಯಜಯಾ! ||ಅನು|| ಏನು ಚೆಲುವೊ ದೇವ ನಿನ್ನೀ ಭಾರತಮೂರ್ತಿ! ತೆರೆಯ ಗೆಜ್ಜೆ,...

ಕನ್ನಡ ತುತ್ತೂರಿ

ಕನ್ನಡ ತುತ್ತೂರಿ ಊದುವ ಬನ್ನಿ ಕನ್ನಡ ಜ್ಯೋತಿಯ ಬೆಳಗುವ ಬನ್ನಿ ನಿತ್ಯ ಉತ್ಸವದನಡೆಯಲ್ಲಿ ಜಯಕಾರವ ಮೊಳಗುವ ಬನ್ನಿ ವನರಾಶಿಯ ಕಲೆ ತಾಣದ ಸಿಂಹಸ್ವಪ್ನ ಕಲ್ಪಧಾರೆಯಲ್ಲಿ ||ನಿತ್ಯ|| ಕತ್ತಲಲ್ಲಿ ಬೆಳಕಾಗಿ ಬಂದ ಮಿಂಚು ಸ್ನೇಹ ಅಧರದಲ್ಲಿ...

ಬೈಜಾಂಟಿಯಮ್

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು; ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು; ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು ದೊಡ್ಡ ಚರ್‍ಚಿನ ಗಂಟೆ ಬಡಿದು, ಗಾಳಿಯಲೀಗ ರಾತ್ರಿಂಚರರ ಹಾಡು. ಚಿಕ್ಕಯೋ...

ನಂಜಿ ರತ್ನ ತೋಟ್ಕ್ ಓಗಿದ್ರು

ನಂಜಿ ರತ್ನ ತೋಟ್ಕ್ ಓಗಿದ್ರು ಒಂದಾರ್‌ ಮಾತಾಡ್ನಿಲ್ಲ; ಔರ್ಗೊಳ್ ಮಾತಾಡ್ನಿಲ್ಲಾಂತಲ್ಲ- ಆಡೋಕ್ ಮನಸಾಗ್ನಿಲ್ಲ. ೧ ನಂಜಿ ರತ್ನಂಗ್ ತೋರಿದ್ಲೊಂದು ದುಂಬಿ ತಬ್ಬಿದ್ ಊವ! ರತ್ನನ್ ಮನಸಿನ್ ಅಡಗ್ ಸೇರಿತ್ತು ನಂಜಿ ಮನಸಿನ್ ರೇವ! ೨...

ಗೃಹಿಣಿ

ಏಳು ಮೆಟ್ಟಿನ ಹುಲಿಯ ಬೀರ ಬೇಂಟೆಯ ಬಿಡಿಸಿ ಮಗುವ ಮುದ್ದಾಡುವೊಲು ಮಾಡಿದಾಕೆ. ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ ತಾನೆ ತನ್ನಷ್ಟಕ್ಕೆ ಹಾಡಿದಾಕೆ. ತಳಿರಿನುಡುಗೆಯನುಟ್ಟು ಗರಿತೊಡುವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ. ಗಿಡಕೆ ಗುಡಿಯನು ಕಟ್ಟಿ,...

ಎಷ್ಟೊಂದು ಗಾಳಿ

ಎಂಥ ಗಾಳಿ ಎಷ್ಟೊಂದು ಗಾಳಿ ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ ಬಯಲ ಮೇಲಿಂದ ಬೀಗ್ಯಾವ ಗಾಳಿ ಎತ್ತರದ ಗಾಳಿ ಉತ್ತರದ ಗಾಳಿ ಉತ್ತರ ಧ್ರುವದಿಂದ ನಿರುತ್ತರ ಗಾಳಿ ಗುಡುಗು ಮಿಂಚುಗಳ ಮುಟ್ಟಿದ ಗಾಳಿ ಸಾಗರದಲೆಗಳ...

ಕಂಡಿದ್ದೇನೆ ನಾನು

ಧರ್‍ಮದ ಠೇಕೇದಾರರಿಂದ ಭೂಮಿಯ ಮೇಲೆ ದೆವ್ವದ ಕುಣಿತ ನೋಡಿದ್ದೇನೆ ನಾನು! ಗುಜರಾತಿನ ನರಮೇಧದಲ್ಲಿ ಮನುಷ್ಯತ್ವದ ಕತ್ತು ನಾಚಿಕೆಯಿಂದ ಕೆಳಗಾಗಿದ್ದನ್ನು ಕಂಡಿದ್ದೇನೆ ನಾನು! ಧರ್‍ಮ ರಾಜಕೀಯದಲಿ ಅಧರ್‍ಮದ ಕತ್ತಿ ಝಾಳಪಿಸಿದ ಗುಜರಾತನು ಕಣ್ಣಾರೆ ಕಂಡಿದ್ದೇನೆ ನಾನು!...