ನೆನಪು

ಚುಮು ಚುಮು ನಸಕು ಪಂಚಮಿಯ ರಿಪಿರಿಪಿ ಮಳೆಗಾಲ- ಹಂಡೆಯಲ್ಲಿ ಕುದಿಯುವ ನೀರು ಜೀರೋ ಬಲ್ಬಿನ ಬೆಳಕು ಹೊಗೆ - ಉಗಿ ತುಂಬಿದ ಬಚ್ಚಲಿನಲ್ಲಿ ಸ್ನಾನ, ಏನು ಮುದ ಏನು ಹಿತವಿತ್ತು ನನ್ನಜ್ಜಿಯ ಹಳ್ಳಿಯ ಮನೆಯಲ್ಲಿ;...

ಬಂದವರು

ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್‍ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! *****

ಅಲೆಗಳು

ಈ ಪ್ರೀತಿಗೆ ತರಂಗಗಳೇ ಇಲ್ಲದೆ ಹೋಗಿದ್ದರೆ ಜಗತ್ತು ಬರಡಾಗುತ್ತಿತ್ತೇನೋ ಆದರೆ ಹಗಾಗಲೇ ಇಲ್ಲ ತರಂಗ ಸೆಟಲೈಟುಗಳು ಹೆಚ್ಚಾದುದರಿಂದ ಅಲೆಗಳು ಅತ್ತಿತ್ತ ಬಡೆದೂ ಬಡೆದೂ ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ, ಉದುರಿಕೊಳ್ಳುತ್ತಲೇ ಇದೆ.