ಹನಿಗವನ ಅನುಮತಿ ಜರಗನಹಳ್ಳಿ ಶಿವಶಂಕರ್ September 27, 2020January 6, 2020 ಎಣ್ಣೆ ತುಪ್ಪ ಬತ್ತಿ ಹಣತೆ ಎಲ್ಲವೂ ಇದೆ ದೀಪ ಉರಿಯಲು ಗಾಳಿಯ ಅನುಮತಿ ಖಂಡಿತ ಬೇಕಿದೆ ದೀಪಗಳನ್ನು ಸದಾ ಅಪಹರಿಸುವ ಯಮ ಗಾಳಿ ಯಾರ ಕಣ್ಣಿಗೆ ಬಿದ್ದಿದೆ ಹೇಳಿ ***** Read More
ಹನಿಗವನ ವಿಯೋಗ ಜರಗನಹಳ್ಳಿ ಶಿವಶಂಕರ್ September 20, 2020January 6, 2020 ಬತ್ತಿಯಾದ ಹತ್ತಿ ನೊಂದುಕೊಳ್ಳುತ್ತೆ ತನ್ನ ಒಡಲೊಳಗೆ ಬೆಚ್ಚಗೆ ಅಡಗಿದ್ದ ಬೀಜವೇ ಎಣ್ಣೆಯಾಗಿ ತನ್ನನ್ನೇ ಸುಡುತ್ತಿದೆಯೆಂದು ***** Read More
ಹನಿಗವನ ವ್ಯತ್ಯಾಸ ಜರಗನಹಳ್ಳಿ ಶಿವಶಂಕರ್ September 13, 2020January 6, 2020 ತಾಕಿದರು ಸಾಕು ನೇರ ನಾಟಿಕೊಂಡು ಉಳಿದೇ ಬಿಡುತ್ತವೆ ಮುಳ್ಳುಗಳು ಬಚ್ಚಿಟ್ಟು ಕೊಂಡರೂ ಅಳಿದು ಹೋಗುತ್ತವೆ ಹೂಗಳು ***** Read More
ಹನಿಗವನ ನೆನಪು ಜರಗನಹಳ್ಳಿ ಶಿವಶಂಕರ್ September 6, 2020January 6, 2020 ಬಾಡುವ ಹೂವಿನ ಮಧುರ ಮಕರಂದ ಹಳಸುವುದಿಲ್ಲ ಜೇನ ಗೂಡಿನಲ್ಲಿ ***** Read More
ಹನಿಗವನ ಜಂಜಾಟ ಜರಗನಹಳ್ಳಿ ಶಿವಶಂಕರ್ August 30, 2020January 6, 2020 ಈ ಭೂಮಿಗು ತಪ್ಪಿಲ್ಲ ಸಂಸಾರದ ಜಂಜಾಟ ಹಾಲುಣಿಸಬೇಕು ತೆನೆಗೆ ನೀರು ಕುಡಿಸಬೇಕು ಗೊನೆಗೆ ಸಂಸ್ಕಾರವ ಮಾಡಬೇಕು ವೃದ್ಧವೃಕ್ಷಕ್ಕೆ ಕೊನೆಗೆ ***** Read More
ಹನಿಗವನ ಸಾರ್ಥಕ ಜರಗನಹಳ್ಳಿ ಶಿವಶಂಕರ್ August 23, 2020January 6, 2020 ಮಣ್ಣ ಸೇರಿ ಮೊಳೆವ ಮೊದಲೆ ಕುಡಿ ಬೀಜವ ಹಿಂಡಿ ಹಿಪ್ಪೆ ಮಾಡಿ ಕೊಂದರು ಗಾಣ ದಾರಿ ದೀಪಗಳಲ್ಲಿ ಎಣ್ಣೆಯಾಗಿ ನೀಡುತ್ತದೆ ಬೆಳಕಿನ ಪ್ರಾಣ ***** Read More
ಹನಿಗವನ ಕಾವು ಜರಗನಹಳ್ಳಿ ಶಿವಶಂಕರ್ August 16, 2020January 6, 2020 ಉರಿ ಬಿಸಿಲ ಬೇಸಿಗೆಯಲ್ಲಿ ಸೊಂಪಾಗಿ ತಂಪಾಗಿ ನೆರಳಾಗಿ ನಿಲ್ಲುವ ರಮಣೀಯ ಮರಗಳ ಆಶ್ರಯಿಸಿ, ವಿಶ್ರಮಿಸಿ ಚಳಿಗಾಲಕ್ಕೆ ಕಡಿದು ಕತ್ತರಿಸಿ ಹೊತ್ತಿಸಿ ಬೆಂಕಿ ಊದಿ ಊದಿ ಉರಿಸುತ್ತೇವೆ ತಂತಮ್ಮ ಮೈಯ ಕಾವಿಗಾಗಿ ***** Read More
ಹನಿಗವನ ಅಂತರ ಜರಗನಹಳ್ಳಿ ಶಿವಶಂಕರ್ August 9, 2020January 6, 2020 ಪುರಾಣ ಗ್ರಂಥಗಳ ಹೊತ್ತು ಕೂತರೆ ವ್ಯಾಸ ಪೀಠಗಳಲ್ಲಿ ತಾಳೆ ಗರಿಗಳು ಗುಡಿಸಲು ಗುರುಕುಲಗಳ ಮೇಲೆ ಒಣಗಿ ನೆರಳ ನೀಡಿ ಕಾದವು ಸೂರಲ್ಲಿ ತೆಂಗಿನ ಗರಿಗಳು ***** Read More
ಹನಿಗವನ ವ್ಯತ್ಯಾಸ ಜರಗನಹಳ್ಳಿ ಶಿವಶಂಕರ್ August 2, 2020January 6, 2020 ಈಚಲ ಮರದಲ್ಲಿ ಗೀಜಗ ಕಟ್ಟುತ್ತವೆ ಗೂಡುಗಳು ನಾವೂ ಕಟ್ಟುತ್ತೇವೆ ಗಡಿಗೆಗಳು ***** Read More
ಹನಿಗವನ ಅದೃಷ್ಟ ಜರಗನಹಳ್ಳಿ ಶಿವಶಂಕರ್ July 26, 2020January 6, 2020 ಕಬ್ಬು ಅರೆವ ಗಾಣಕ್ಕೆ ಬಿದಿರು ವೇಣು ಗಾನಕ್ಕೆ ***** Read More