ಹನಿಗವನ ನಿರೀಕ್ಷೆ ಜರಗನಹಳ್ಳಿ ಶಿವಶಂಕರ್ December 6, 2020January 6, 2020 ಮನೆಗೆ ಬಂದವರೆಲ್ಲ ಬರಲು ಸಾಧ್ಯವೆ ಮನದೊಳಗೆ ಬೆಳಕು ಬರುವಂತೆ ಕಾಮನಬಿಲ್ಲು ಬರುವುದೆ ಮನೆಯೊಳಗೆ ***** Read More
ಹನಿಗವನ ಪಶ್ಚಾತ್ತಾಪ ಜರಗನಹಳ್ಳಿ ಶಿವಶಂಕರ್ November 29, 2020January 6, 2020 ದಹ ದಹಿಸಿ ಉರಿವ ಕೆಂಡಗಳೂ ತಲೆ ಮರೆಸಿಕೊಳ್ಳುತ್ತವೆ ಬೂದಿಯೊಳಗೆ ***** Read More
ಹನಿಗವನ ಸ್ಥಾವರ ಜರಗನಹಳ್ಳಿ ಶಿವಶಂಕರ್ November 22, 2020January 6, 2020 ಕಲ್ಲುಗಳೇ ಹಾಗೆ ಕಿಡಿಗಳನ್ನು ಮಾತ್ರ ಹಾರಿಸುತ್ತವೆ ತಾವೆಂದೂ ಉರಿಯದೆ ಹಾಗೇ ಉಳಿಯುತ್ತವೆ ***** Read More
ಹನಿಗವನ ದಬ್ಬಾಳಿಕೆ ಜರಗನಹಳ್ಳಿ ಶಿವಶಂಕರ್ November 15, 2020January 6, 2020 ಕತ್ತಲ ಗುಣ ಸೌಮ್ಯ ಸೌಜನ್ಯ ಅದರ ಮೇಲೆ ಬೆಳಕು ಮಿಂಚಾಗಿ ಎರಗಿ ನಡೆಸುತ್ತೆ ದೌರ್ಜನ್ಯ ***** Read More
ಹನಿಗವನ ಹೊಂಚು ಜರಗನಹಳ್ಳಿ ಶಿವಶಂಕರ್ November 8, 2020January 6, 2020 ದೀಪಕ್ಕೆ ಕತ್ತಲ ಓಡಿಸಿದ ತೃಪ್ತಿ ನಗೆ ದೀಪದ ಕೆಳಗೆ ಕತ್ತಲು ಕದ್ದು ಬಚ್ಚಿಟ್ಟುಕೊಂಡಿರುತ್ತೆ ಕಾಯುತ್ತ ಮತ್ತೆ ಹೂಡಲು ಲಗ್ಗೆ ***** Read More
ಹನಿಗವನ ಅನ್ಯೋನ್ಯ ಜರಗನಹಳ್ಳಿ ಶಿವಶಂಕರ್ November 1, 2020January 6, 2020 ಬೆಳಕು ನೀಡುವ ಬತ್ತಿಯ ಜೊತೆಗೆ ಬೇವಿನ ಎಣ್ಣೆಯಾದರೇನು ಗೋವಿನ ತುಪ್ಪವಾದರೇನು ***** Read More
ಹನಿಗವನ ಅಪಮೌಲ್ಯ ಜರಗನಹಳ್ಳಿ ಶಿವಶಂಕರ್ October 25, 2020January 6, 2020 ಕನಸು ಕಾಣುವ ಕಣ್ಣುಗಳ ಮುಂದೆ ಕತ್ತಲು ಬೆಳಕಿಗೆ ಏನು ಕೆಲಸ ಕರಿ ಮೋಡಗಳ ಮಿಲನದ ಒಳಗೆ ಬೆಳಕು ಮಿಂಚಾಗಿ ಪಾಪ ನಾಗಾಲೋಟ ***** Read More
ಹನಿಗವನ ಹಣತೆ ಜರಗನಹಳ್ಳಿ ಶಿವಶಂಕರ್ October 18, 2020January 6, 2020 ಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ! ***** Read More
ಹನಿಗವನ ಅಡಗುದಾಣ ಜರಗನಹಳ್ಳಿ ಶಿವಶಂಕರ್ October 11, 2020January 6, 2020 ಜ್ವಾಲೆಯಾಗಿ ಉರಿದು ಬೂದಿಯಾಗಿ ಸಾಯುವ ಭಯ ಬೆಂಕಿಗೆ ಕಾಣದ ಕಿಡಿಯಾಗಿ ಬಚ್ಚಿಟ್ಟುಕೊಂಡಿದೆ ಪಾಪ ಕಲ್ಲಿನೊಳಗೆ ***** Read More
ಹನಿಗವನ ಮಿಲನ ಜರಗನಹಳ್ಳಿ ಶಿವಶಂಕರ್ October 4, 2020January 6, 2020 ಬತ್ತಿಯಲ್ಲಿರುವ ಪ್ರತಿ ಎಳೆಯಲ್ಲು ಅಡಗಿ ಕುಳಿತಿದೆ ಬೆಳಕಿನ ಕಿರಣ ಎಣ್ಣೆಯಲ್ಲಿರುವ ಪ್ರತಿ ಕಣದಲ್ಲು ತುಡಿಯುತ್ತಿದೆ ಬೆಳಕಿನ ಹೂರಣ ಮಣ್ಣಿನ ಹಣತೆಯ ಹಾಸಿಗೆಯಲ್ಲಿ ಎಣ್ಣೆ ಬತ್ತಿ ಬೆರೆತು ಬಿರಿಯುತ್ತಿದೆ ಬಿರುಸು ಬಾಣ ***** Read More