ಪಂಪ್ಕಿನ್ ಗಾಡಿ

ಗಡ ಗಡ ಗಾಡಿ ಗುಡು ಗುಡು ಗಾಡಿ ಹೋದಲ್ಲೆಲ್ಲಾ ತೆಗೆದು ಲಗಾಡಿ ಇದೇನು ಲಟಾರೀಂತ ನಗಾಡಬೇಡಿ ನಗಾಡಿದವರನದು ಎತ್ಕೊಂಡು ಹೋಗುತೆ ಇದು ಪಂಪ್ಕಿನ್ ಗಾಡಿ ಧುಡು ಧುಡು ಬರುತೆ ಧುಡು ಧುಡು ಹೋಗತೆ ಎದುರಿಗೆ...

ಮೇಕೆ

ಉಬಿಸ್ತೇವೆ ಕೊಬ್ಬಿಸ್ತೇವೆ ನಿನ್ನಯ ಕೀರುತಿ ಹಬ್ಬಿಸ್ತೇವೆ ಆಮೇಲೆ ನಿನ್ನ ತಲೆ ಕಡಿತೇವೆ ಓಕೇನಾ? ಓಕೆ ಓಕೆ ಎಂದಿತು ಮೇಕೆ ಆದರೆ ಜೋಕೆ! ನಾನೂ ಹಂಗೇ ಮಾಡುತ್ತಿದ್ದೆ ಹಿಂದಿನ ಜನ್ಮದಲಿ! *****

ನಮ್ಮ ಚಂದ್ರಾಮ

ನಮ್ಮ ಚಂದ್ರಾಮ ಬೆಳುದಿಂಗಳಲಿ ಮಿಂದಾಂವ ತಂಪಿನ ಬೆಳಕನು ಚೆಲ್ಲಾಂವ ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ ಮೆಲ್ಲಗೆ ಬಿಡಿಸಾಂವ ನಮ್ಮ ಚಂದ್ರಾಮ ಕಾಡಿಗೆ ಇಬ್ಬನಿ ಸುರಿಸಾಂವ ನಾಡಿಗೆ ಮಂಜು ಕಳಿಸಾಂವ ಬೀಸುವ ಗಾಳಿಯ ಮೋಡವನೇರಿ ಸವಾರಿ...

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ...

ಚುಕು ಬುಕು ರೈಲು

ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ...
ಲಕಡೀ ಕಾ ಪುಲ್

ಲಕಡೀ ಕಾ ಪುಲ್

[caption id="attachment_7941" align="alignleft" width="300"] ಚಿತ್ರ: ಅಪೂರ್ವ ಅಪರಿಮಿತ[/caption] ಕೆರೆಯ ಮೈಲುದ್ದದ ಏರಿಯ ಮೇಲೆ ಒಂದು ಭಾನುವಾರ ಸಂಜೆ ಒಬ್ಬ ಕಳ್ಳ ಕುಂಟುತ್ತ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಡೆಯುತ್ತಿದ್ದ. ಆತ ಏರಿಯ ಮಧ್ಯ...

ಬಿತ್‌ಲೆಸ್

ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು ಹಣ್ಣು ಬಾಳೇ ಹಣ್ಣು ಯಾರಿಗೆ ಬೇಕು...

ಬೆಕ್ಕೇ ಬೆಕ್ಕೇ ಮಾರ್ಜಾಲ

ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಚಾಲ (ಕಾಣಿಸದಾಯಿತು ಬಾಲ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ತಂತ್ರ (ಮೂಗೂ ಮೀಸೆ ಅತಂತ್ರ) ಬೆಕ್ಕೇ ಬೆಕ್ಕೇ ಮಾರ್ಜಾಲ ತೋರಿಸು ನಿನ್ನಯ ಮಾಯ (ಇಲ್ಲವಾಯಿತು ಕಾಯ)...

ತಿಂಡಿ ಲೆಕ್ಕ

ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಇಡ್ಳಿ ಯಾರಿಗೆ ಬೇಕು ಇಡ್ಳಿ? ಅಣ್ಣನಿಗೆ ಹತ್ತು ನಂಗೊಂದಿಪ್ಪತ್ತು ಒಟ್ಟಾರೆಷ್ಟು ಇಡ್ಳಿ? ಒಟ್ಟಾರೆ ಮೂವತ್ತು ಇಡ್ಳಿ ಕಣ್ ಕಣ್ ಬಿಟ್ಟು ಉದ್ದಿನ ಹಿಟ್ಟು ಯಾರಿಗೆ ಬೇಕು ದೋಸೆ? ಅಣ್ಣನಿಗಿಪ್ಪತ್ತು ನಂಗೊಂದು...

ಬಿಂದಿಗೆ

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಸಂಜೆಯಾದರೆ ಬರತೀನವ್ವ ಮಲ್ಲಿಗೆ ಮೊಗ್ಗೆ ಬಿರಿತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ ಹಕ್ಕಿ ಮರಳಿದರೆ ಬರುತೇನವ್ವ ಚಿಲಿಪಿಲಿ ರಾಗವ ಹಾಡುತಾವೆ ಬಿಂದಿಗೆ ಬಿಂದಿಗೆ ನೀರಿಗೆ ಬಾ...