ಛಾಯೆ

ಯಾವ ತೀರದಿ ನಿಲ್ಲಲಿದೆಯೋ ಜಗದ ಜೀವನ ನೌಕೆಯು... ಭೀತ ಛಾಯೆಯು ನಿತ್ಯ ಕಾಡಿದೆ ಯುದ್ಧ ಕಾರಣ ಛಾತಿಯು... ಕ್ಷಿಪಣಿ-ಯಕ್ಷಿಣಿ ನಭದ ರಂಗದಿ ರುದ್ರ ತಾಂಡವ ತಾಲೀಮಿದೆ... ನಂಬಿ-ನಂಬದ ಮಾತಿನೊರೆಯಲಿ ಜೀವ ಮಹತಿಯು ಸೊರಗಿದೆ... ವಿನಾಶಿಯಾಗಲು...

ಊರ್ಮಿಳೆ

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು... ಓ ಸೌಮಿತ್ರಾ ಪ್ರಿಯೆ ಊರ್ಮಿಳಾ... ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯವಾಗಿ...

ಯಶೋಧರೆ…ಗೆ

ಏಕೆ ನೀನು ಮೌನ ವಹಿಸಿದೆ, ಮಾತನೊಲ್ಲದ ಶಿಲ್ಪವಾದೆ ಹೇಳೆ... ನೀ ಯಶೋಧರೆ? ಯಾವ ಕಾರಣ, ಯಾವ ಹೂರಣ, ತೋರಣದಿ ನಡೆದಿತು ನಿನ್ನ ಹರಣ, ಏನೋ ಅರ್ಥವ ಹುಡುಕೋಗಣ್ಣಿಗೆ, ತಿಳಿಯದಾಯಿತೆ ನಿನ್ನೊಲವ ಚರಣ, ಸತ್ಯ ಶುದ್ಧ...

ಮರಣ ಮೃದಂಗ

ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ... ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ... ಶಾಂತವೀಣೆ ತಂತಿ ಹರಿದ ದೇಶ ದೇಹದಲಪ...

ಇತಿಹಾಸದ ಯಾತ್ರೆ

ಹೊಸತದೆಲ್ಲಿ, ಹೊಸತದೆಲ್ಲಿ ಹೊಸಬರಾರೋ ಲೋಕದಿ... ಇಂದಿನ್ಹೊಸತಿನೊಸಗೆಯಲ್ಲಿ, ನಾಳೆ ನಿನ್ನೆಗೆ ಬೆಸುಗೆಯು ಬರುವ ಚಣದ ಹೆಗಲಿನಲ್ಲಿ ಇತಿಹಾಸದ ಯಾತ್ರೆಯು... ಇದ್ದುದಿಲ್ಲೇ ಇರುವುದೆಂತೊ ಛಿದ್ರ ಮನಸಿಜ ಛಾಯೆಯು... ಇರುವ ಹಮ್ಮಿನ ಹೆಮ್ಮೆ ಬಲದಲಿ ಹುಚ್ಚು ಮನುಜಿನ ನೀತಿಗೆ......

ಶಿವಮುಖಿ

ಓ ಸಖೀ ಪ್ರಿಯ ಸಖಿ... ನೀನೆ ನನ್ನಯ ಶಿವ ಮುಖಿ, ನೀನಿರದಿರೆ ಆ ಪರಶಿವನೆಂತಾಗುವನೆ ಶಿಖಿ? ನನ್ನ-ನಿನ್ನಾ ಸಾಂಗತ್ಯಕೆ ಕೊನೆ-ಮೊದಲುಗಳೆಲ್ಲಿವೆ? ಬಾನು-ಬುವಿಯ ದಾಂಪತ್ಯಕೆ ತರ-ತಮಗಳು ತಾನೆಲ್ಲಿವೆ? ನಿನ್ನ ಬಸಿರಲಿ ದಿನವೂ ಜಗವು ಬಾಳಿದೆ, ನಿನ್ನಾಸರೆದೋಳಲಿ...

ಹಾರೈಕೆ

ದಿನವು ದಿನಪನ ಬರವು ಕೋರಿದೆ ಶುಭದ ಹಾರೈಕೆ, ಜೊನ್ನ ರಂಗನು ಸುಮಕೆ ಚಿತ್ರಿಸೊ ನಭದ ಓಲೈಕೆ, ಹಸಿರು ಬೆಟ್ಟದ ಬಟ್ಟಲದ ತುಂಬ ಅಮೃತಾ ಫಲದಾ ಪೇಯವು ತೆರೆ-ತೊರೆ, ನದ ನದಿಗಳ ರಸ ಪೀಯೂಷ ಪಾನೀಯವು,...

ಹೊಸ ದಿಗಂತ

ಮತ್ತೆ ಹಾಡುತಲಿರುವೆ ಏಕೆ ಹಳೆಯ ಪಾಡಿನ ಪಲ್ಲವಿ, ನಿತ್ಯ ಸಾಗುತಲಿರುವೆ ಗಾನಕೆ ಬರಲಿ ಸಮದಾ ಜಾಹ್ನವಿ, ಜ್ಞಾನ-ವಿಜ್ಞಾನದ ಹಾದಿ ಸಾಗಿದೆ ನೀಲನಭದಾ ಆಚೆಗೆ, ನಿತ್ಯ ಶೋಧನ ಯಾತ್ರೆ ಹೊರಟಿದೆ ಹುಟ್ಟು-ಸಾವಿನ ಅಂಚಿಗೆ, ಇನ್ನು ಬಿಡು...

ಭೂಮಿಕೆ

ಬೀಸೊ ಗಾಳಿಗೆ ದಿಸೆಯದಾವುದೊ ಎಂಬ ನಿಯತಿಯದೆಲ್ಲಿಯೋ, ಪ್ರೀತಿ ಸ್ಪುರಣೆಗೆ ಕುಲವದಾವುದೊ ಎಂಬ ಭೀತಿಯದೆಲ್ಲಿಯೋ, ಮೂಡಣದ ಕಿರಣಕೆ ಅರಳದಿರುವವೆ ಸುಮಗಳು ತಾ ಲತೆಯಲಿ, ಚಂದ್ರೋದಯ ದಂದಕೆ ಏಳದಿರುವವೆ ತೆರೆಗಳು ತಾ ಕಡಲಲಿ, ಸಮದ ಸಮತೆಯ ಶೃಂಗ...

ನಿಲ್ಲು ಮನವೆ

ನಿಲ್ಲು ಮನವೆ, ನಿಲ್ಲು ಇಲ್ಲಿ ಇನ್ನು, ಒಮ್ಮೆ ಹೊರಳಿ ನೋಡು, ನಾಗಾಲೋಟದ ಧಾವಂತದಲಿ ಪಡೆದುದೇನೆಂಬುದ ಕಾಣು... ಜಗವನಾಳುವ ಶಕ್ತಿತ್ರಯಗಳನು ಮೀರಲು ಜೀವನವಿನ್ನೇನು? ಎಲ್ಲೋ ಕಳೆದುದನಿನ್ನೆಲ್ಲೋ ಹುಡುಕಿರೆ ದೊರೆಯುವುದಿನ್ನೇನು...! ಸುಖದ ಸಾಧನ ನಿನ್ನಾಚೆ ಎಲ್ಲಿದೆ, ಜೀವ...