Home / ಬರ್ಫದ ಬೆಂಕಿ

Browsing Tag: ಬರ್ಫದ ಬೆಂಕಿ

ಹತ್ತಾರು ರೂಪಾಯಿಗೆ ಸಿಗುವ ಇವು ಸೀದಾ ಸಾದಾ ಬಳೆಗಳು ಬರಿಯ ಬಳೆ ತೊಟ್ಟ ಕೈಗಳಲ್ಲಿ ದೇವ ದೇವಿಯರ ಕೂಡ ಯಕ್ಷ, ವಾನರರೂ ಹೇಗೆಲ್ಲಾ ಗಟ್ಟಿಗೊಳುತ್ತಾರೆ. ನೀರೆತ್ತುವ ಅದೇ ಕೈಗಳು ನೀರುಕ್ಕಿಸಿದವು, ನೀರು ಬಸಿದವು ಕೂಡ ಬಾನಿಗೆ ಹೋಯ್ದ ನೀರಲ್ಲಿ ಪಕ್ಕನೆ...

ಬೀದಿ ಗುಡಿಸುವ ಆ ಹುಡುಗಿ ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ ಕನಸು ಹೊತ್ತು ಕಸವ ರಸ ಮಾಡುತ್ತಾ ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ ಎಳೆದು ಬಿಡುತ್ತಾಳೆ. ಅವಳ ಮನ ದ...

ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ...

ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ ಬೀಜ ಹಾಕುವುದೇನು ಸಾ...

ಮಾವಿನ ಮಿಡಿ ಎಲ್ಲಿ ಸಿಗುತ್ತೋ? ಕಾಯುತ್ತಿದ್ದೆ. ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ ಹಾಕಿಡಬೇಕು. ಅದೇ ಮೊನ್ನೆ ಹಸಿಹಸಿರು ಮಿಡಿ ಗುಲಗುಂಜಿಗೆ ಸ್ವಲ್ಪವೇ ದೊಡ್ಡದು ಪೇಟೆ ಅಂಚಿಗೆ ನನಗೆ ಬೇಕಾದದ್ದು ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ. ಏರುಪೇರ...

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್‍ಡು ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಸಂಕೇತಗಳ ಬೇಡಿಯನ್ನು ಅಂಗಾಂಗಗಳ ಮೇಲೆಲ್ಲಾ ಹೇರಿ ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ ಎಂದೆಲ್ಲ ಊದುವ ಶಂಖನಾ...

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು. ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ ಬಂಗಾರದ ಮಿನುಗು ಬಳೆಗಳು ಹಸಿರು ಗಾಜಿನ ಬಳೆಗಳು ದಿನಕಳೆದು ಗಡುಸಾದಂತೆ ಕೈಗಳು ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ.. ಸಂ...

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ ಪಕ್ಕಾಗಿದ್ದೇನೆ. ಅನ್ಯಥಾ ನೀರಿನಲೆಗಳ ನಡುವೆ ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು. ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು ನನ್ನೊಂದಿಗೆ ಮಾತುಬಿಟ್ಟವು. ...

ಕವನಗಳ ಕಟ್ಟಿ ನವ್ಯ ನವೋದಯ ಪ್ರಗತಿಶೀಲದ ಅಂಗಿ ತೊಟ್ಟವರು ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು ಮೇಲೊಂದು ಜಾಕೀಟು ತೊಟ್ಟು ಮೈಕು ಹಿಡಿದು ಮೆರೆಯುತ್ತ ಅರೇ! ನಾನೇನು ಹೇಳುತ್ತಿದ್ದೇನೆ ಕವಿತೆ ಕಟ್ಟುವ ಬಗ್ಗೆ ಅಲ್...

ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು ಸಡಿಲವಾಗಿಲ್ಲ. ದೀಪದ ಮಾದಕ ಮತ್ತು ಆಫೀಮು ತುಂಬಿದ ಸೀಸೆ ಅಮೃತ ಶಿಲೆಯ ಕಣ್ಣುಗಳಲ್ಲೂ ಕಡುಕಪ್ಪು ಗೋಲ ನಿದ್ದೆ ಭರಿಸದ ಯಾವುದೋ ಮಾಯೆ. ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ ಅರೆ ತೆರೆದ ಎದೆಯ ಆಕೆಯದಷ್ಟೇ ಅಲ್ಲ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...