ಅನಂತರ

ನಲವತ್ತು ವರ್ಷಗಳ ಅನಂತರ ಭೇಟಿಯಾದರು ಪರಮಾಪ್ತ ಗೆಳೆಯರು ಬಾಲ್ಯ ಯೌವನ ನೆನೆಸಿಕೊಂಡು ಮನಸಾರೆ ನಕ್ಕರು. "ನಮ್ಮ ಸಹಪಾಠಿ ರೂಪ, ಈಗ ಎಲ್ಲಿದ್ದಾಳೋ ಪಾಪ" ವಿಷಾದದನಗೆ ನಕ್ಕ ಮೊದಲ ಮುದುಕ. "ಅಡುಗೆ ಮನೇಲಿದಾಳೆ ಆ ನನ್ನ...

ಮುದುಕರು

ಮುದ್ದು ಮಕ್ಕಳು, ಮುದುಕರು ಹಲವು ವಿಷಯಗಳಲ್ಲಿ ಒಂದೇ. ಪ್ರತಿಯೊಂದರಲ್ಲಿಯೂ ಆಸಕ್ತಿ, ಕುತೂಹಲ. ಆಸೆಪಟ್ಟಿದ್ದು ಬೇಕೇ ಬೇಕೆಂದು ಹಟ ಹಿಡಿಯವುದು ಇತ್ಯಾದಿ. ಆದರೆ ಮಕ್ಕಳು ಬೇಕಾದ್ದನ್ನು ಬಹು ಬೇಗ ಕಲಿಯುತ್ತವೆ. ಬೇಡವಾದುದನ್ನು ಅಷ್ಟೇ ಬೇಗ ಮರೆಯುತ್ತವೆ....

ಪರಿಚಿತ

ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ - ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ...

ತ್ಯಾಗ

ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? ಅಷ್ಟೇ ಅಲ್ಲದೆ, ಕೋಪ ಬಿಡುವುದು ಅನಿವಾರ್‍ಯವೂ...

ತಂಗಿ

ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ ನೇಮಿಸಿದೆ. ನನ್ನ ಆರಾಧಕನನ್ನೇ ನಿನ್ನನಾಧರಿಸಲು ಬೇಡಿದೆ....

ಶಬರಿಗೆ ಪತ್ರ

ಶಬರಿಕಾದಳಂದು ಶ್ರೀರಾಮ ಬರುವನೆಂದು, ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು ಕಾಯುವುದು ಬೇಯುವುದು ಅವರವರ ಕರ್ಮ ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ. "ತಾಳಿದವನು ಬಾಳಿಯಾನು" ಎಂಬುದೊಂದು ಗಾದೆ ತಾಳಿ ತಾಳಿ ಸುಸ್ತಾದವನು ಈಗ...

ಪತ್ರ ವಾಹಿನಿ

ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ...

ಪರಿಚಯ

ನನ್ನ ಪರಿಚಯ ಮಾಡಿಕೊಡುವೆ, ಸಹನೆ ಇದ್ದರೆ ಕೇಳಿ. ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ನಾನು. ಎಲೆಮರೆಯ ಕಾಯಿಯಂತೆ ಬದುಕ ಬಯಸುವೆ ನಾನು. ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ, ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ ಭಾಷಣ ಬಿಗಿಯುವ ವಾಗ್ಮಿ ನಾನಲ್ಲ....