Home / Kavana

Browsing Tag: Kavana

ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್‍ಯತೆ ಇಂತಿಂತಿಷ್ಟೆ. *****...

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು ಕಿರುಬಾಗಿಲ ಬೆಳಕಂಡಿಗಳು. ಬಂದ...

ಈ ಮಗುವಿಗೇನು ಗೊತ್ತು? ನಗುವುದೊಂದು ಬಿಟ್ಟು! ಬಣ್ಣಬಣ್ಣದ ಫ್ರಾಕುತೊಟ್ಟು ಪಿಳಿ ಪಿಳಿ ಕಣ್ಣು ಬಿಟ್ಟು ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು! ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ… ಎಲ್ಲ ತನ್ನವರೆಂದು ಹಿಗ್...

ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್...

ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ ಯಾರೂ ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ...

ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ, ಕುಂಟೆಕಟ್ಟೆಗೆ ಹೋಗಿ ಕುಳಿತ. ಉಟ್ಟಬಟ್ಟೆಯಲ್ಲೇ ಇಷ್ಟಲಿಂಗ ಪೂಜೆ...

ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ...

-೧- ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ, ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ ಸತ್ಯ, ...

ಕಾಲರಾಯನ ಗರ್ಭದಿಂದ ಸೀಳಿ ಬಂದೆನು ದೇಹದೊಡನೆ ವೇಳೆ ಮುಗಿದರೆ ನಿಲ್ಲಲಾರೆನು ತಾಳು ನಿನ್ನನ್ನು ನುತಿಪೆನು ನನ್ನ ಹಿಂದಿನ ಸುಕೃತ ಫಲವೊ ನಿನ್ನ ಕರುಣದ ಸಿದ್ಧಿಬಲವೊ ಮಾನ್ಯ ಗುರು ಸರ್ವೇಶನೊಲವಿಂ ಮಾನವತ್ವವ ಪಡೆದೆನು ಮಾರುಹೋದೆನು ಜಗವ ನೋಡಿ ಸೂರೆಗೊ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...