ಏಕಿಷ್ಟು ದೂರ ಮಾಡಿದೆ ಎನ್ನ?

ಏಕಿಷ್ಟು ದೂರ ಮಾಡಿದೆ ಎನ್ನ ಸಣ್ಣದೊಂದು ಮಾತಿಗೆ| ನಮ್ಮ ಮಧುರ ಪ್ರೀತಿಯನೇ ಮರೆತುಬಿಟ್ಟೆಯಾ ನನ್ನೊಂದು ಹುಸಿ ಪಿಸುಮಾತಿಗೆ|| ನೀನು ಎಷ್ಟಾದರೂ...ಹೇಗಾದರೂ ತಮಾಷೆ ಮಾಡಿ ನಗಬಹುದು | ನೀನು ಏನಾದರು ಅನ್ನಬಹುದು ನನ್ನಮೇಲೆ| ಆದರೆ ನಾನು...

ಅಂದುಕೊಳ್ಳುವುದೊಂದು

ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು| ಆಸೆಪಡುವುದೊಂದು ನಿರಾಸೆ ತರುವುದಿನ್ನೊಂದು|| ಮನ ಬಯಸುವುದೊಂದು ವಿಧಿ ನೀಡುವುದಿನ್ನೊಂದು| ಹೀಗೆಯೇ ಜೀವನ ಆ ವಿಧಿಯ ವಿದಿವಿಧಾನ| ಅದರೂ ಭಯಪಡದೆ ಬಾಳಸಾಗಿಸಬೇಕು ಗುರಿ ಸಾಧಿಸುವ ಛಲವಿರಬೇಕು|| ದೇವರು, ಧರ್ಮ ಸತ್ಯದ ಅರಿವಿರಬೇಕು|...

ಬಾರೋ ವಸಂತ ಬಾರೋ

ಬಾರೋ ವಸಂತ ಬಾರೋ || ಬರಿದಾದ ಈ ಮನಕೆ ಮುದವ ನೀ ನೀಡಲು| ಬಾರೋ ವಸಂತ ಬಾರೋ ಈ ವಸುಂಧರೆಯ ನವ ವಧುವಾಗಿಸೆ ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ|| ಕಾದಿರುವೆ ನಿನಗಾಗೆ ಹಂದರವ ಅಣಿಮಾಡಿ|...

ಉದಯಿಸು ರವಿತೇಜನೇ ನೀನು

ಉದಯಿಸು ರವಿತೇಜನೇ ನೀನು ಹೊಂಗಿರಣವ ಹೊರ ಸೂಸುತ| ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ ತಬ್ಬಿಕೊಂಡು ಬಾಹುಬಂಧನದಿ ಕರಗಿ ನೀರಾಗಲು ಹುಲ್ಲ ಹಾಸಿಗೆಮೇಲೆ ಮಲಗಿ|| ಉದಯಿಸು ರವಿತೇಜನೇ ನೀನು ಹಕ್ಕಿಗಳ ಇಂಚರವನಾಲಿಸುತ| ಉದಯಿಸು ರವಿತೇಜನೇ ನೀನು...

ಅತ್ತೆಯೆಂದರೆಕೋ ಕಾಣೆ

ಸೊಸೆಗೆ ಅತ್ತೆಯೆಂದರೆಕೋ ಕಾಣೆ ಅರ್ಧ ಸತ್ಯ! ಅತ್ತೆಗೆ ಸೊಸೆಯೆಂದರೆಕೋ ಕಾಣೆ ಮಾತು ಮಾತಿಗೂ ತರ್ಕ|| ಅತ್ತೆ ಸೊಸೆಯ ಸಂವಾದವಂತೂ ಒಮ್ಮೊಮ್ಮೆ ಆಧಾರ ಸಹಿತ ಮತ್ತೊಮ್ಮೆ ಆಧಾರ ರಹಿತ| ಅತ್ತೆ ಸೊಸೆಯರ ಮಾತಿನ ಚಕಮಕಿ ಚಾರ್ತುಯತೆಯಂತೂ...

ಅರುಣನುದಯನೆ ನಿನ್ನ

ಅರುಣನುದಯನೆ ನಿನ್ನ ಕರುಣ ಕಮಲದಿಂದಲಿ ಜಗದ ಜೀವ ಚೇತನವಾಗಿ ಸುಂದರ ರೂಪತಳೆದು ತೋರುತಿಹುದು ನಿತ್ಯ ಸತತ|| ದಿನದ ಪ್ರತಿಘಳಿಗೆಯನು ಬಿಡದೆ ನೀ ಬೆಳಗಿ ಬೆಳೆಯುತ ಲೋಕವನುದ್ದರಿಸುತಿರುವೆ| ಬೆಳೆದು ಬೆಳೆದಂತೆ ಸವೆದು ಇತರರಿಗೆ ಚಿಕ್ಕವನಾಗಿರುವಂತೆ ತೋರಿ...

ಅನುಕರುಣೆಯೆಂಬ

ಅನುಕರುಣೆಯೆಂಬ ಬಿಸಿಲಗುದುರೆಯನೇರಿ | ಸಮಯದಿಂದೆ ಓಡುತಿರುವ ಅಲ್ಪ ಬುದ್ದಿಮತಿಗಳೇ| ಜೀವನದ ಮೌಲ್ಯಮರೆತಿರಿ ಅದನೇ ನಿಮ್ಮ ಮಕ್ಕಳಿಗೂ ಕಲಿಸಿ ಮುಂದೆಂದು ಕೊರಗದಿರಿ|| ಹೊಟ್ಟೆಹೊರೆವ ವಿದ್ಯೆ ಕಲಿತು ಜೀವನದ ವಿದ್ಯೆ ಮರೆತು| ಹಣದ ಹುಚ್ಚು ಹೆಚ್ಚಿ ಹೆಚ್ಚೆಚ್ಚುಗಳಿಸ...

ನಾನು ಅಂಧನಾಗಿ

ನಾನು ಅಂಧಕನಾಗಿ ಜನಿಸಿರಲುಬಹುದು ಅದಕೆ ಕಾರಣಗಳೇನೇ ಇರಲುಬಹುದು| ಆದರೆ ಎನಗೆ ಬದುಕಲು ಅವಕಾಶದ ನೀಡಿ|| ಅನುಕಂಪದ ಅಲೆಗಿಂತ ಸ್ವಾಭಿಮಾನ ಒಳಿತು ಆತ್ಮಾಭಿಮಾನ ಹಿರಿದು ಅದಕೆ ನೀರೆರೆದು ಅಂಧಕಾರವ ಹೊಡೆದೋಡಿಸಿ|| ಭಿಕ್ಷೆ ಬೇಡಲೆನಗೆ ಮನಸಿಲ್ಲಾ ಹಣದ...

ಅಲ್ಪ ತೃಪ್ತನಾಗಿರೆ

ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ...

ಅಮ್ಮ ನಿನ್ನ ಮಡಿಲಲ್ಲೊಮ್ಮೆ

ಅಮ್ಮ ನಿನ್ನ ಮಡಿಲಲ್ಲೊಮ್ಮೆ ಮಗುವಾಗಿ ತಲೆಯನಿಟ್ಟು ತೂಗುವಾಸೆ| ಆ ನಿನ್ನ ಲಾಲಿಹಾಡ ನೆನೆದು ಮಗುವಾಗಿ ಮರಳುವಾಸೆ|| ಅಮ್ಮ ನಿನ್ನ ಮಡಿಲಲ್ಲೊಮ್ಮೆ ನಾನೂ ಅಮ್ಮನಾಗಭರವಸೆಯಲಿ ಹುಟ್ಟುವ ಮಗುವಿಗಾಗಿ ಕುಲಾಯಿ ಹೆಣೆಯುತಿರುವಾಗ ನನ್ನಲೇಕಿಂತ ಮುಗ್ದ ಆಸೆ| ನಿನ್ನ...